ಉತ್ತರಪ್ರದೇಶ:ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಯುವಕರ ರೀಲ್ಸ್ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ನಿಂತು ಒಂದು ರೀಲ್ ವಿಡಿಯೋ ಮಾಡಿಕೊಂಡು, ತಕ್ಷಣವೇ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುವುದು ಇಂದಿನ ಯುವಜನತೆಯ ಗೀಳಾಗಿದೆ. ಪಬ್ಲಿಕ್​ ಪಾರ್ಕ್​, ರೈಲ್ವೇ ನಿಲ್ದಾಣ, ಜನದಟ್ಟಣೆಯಿರುವ ರಸ್ತೆಗಳಲ್ಲಿ ರೀಲ್ಸ್​ ಮಾಡುವ ಪ್ರವೃತ್ತಿ ಯಾಕೋ ದಿನೇ ದಿನೇ ಅಧಿಕವಾಗುತ್ತಲೇ ಇದೆ. ಅಂತಹದ್ದೇ ಪ್ರಕರಣವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ:IND vs ENG: ಟೀ ಬ್ರೇಕ್​ ನಡುವೆ ಯಶಸ್ವಿ, ಸರ್ಫರಾಜ್ ಖಾನ್ ಗೊಂದಲ! ಏನಾಯಿತು? ವಾಪಾಸ್ ಏಕೆ? ಎಂದ ಹಿಟ್ ಮ್ಯಾನ್​
ಉತ್ತರಪ್ರದೇಶ ಗಾಜಿಯಾಬಾದ್‌ನಲ್ಲಿ ಯುವಕನೊಬ್ಬ ಪೊಲೀಸ್ ಜೀಪ್​ ಅನ್ನು ತನ್ನ ರೀಲ್ಸ್​ ಚಟಕ್ಕಾಗಿ ಬಳಸಿಕೊಂಡಿದ್ದು, ಕೇವಲ ವಾಹನ ಮುಂದೆ ನಿಲ್ಲದೆ, ಚಾಲಕನ ಸೀಟಿನಲ್ಲಿ ಕುಳಿತು ಜೋರಾಗಿ ಹಾಡು ಹಾಕಿ ಇನ್‌ಸ್ಟಾಗ್ರಾಮ್ ರೀಲ್ ವಿಡಿಯೋ ಮಾಡಿ ಇದೀಗ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆತನನ್ನು ಸದ್ಯ ಬಂಧನಕ್ಕೆ ಒಳಪಡಿಸಿದ್ದಾರೆ.
ಇಂದಿರಾಪುರಂ ರಸ್ತೆ ಸಂಚಾರ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದ ಪ್ರದೇಶದಲ್ಲಿ ಅಧಿಕಾರಿಗಳು, ತಮ್ಮ ಜೀಪ್​ನ ರಸ್ತೆಬದಿ ನಿಲ್ಲಿಸಿ ಹೋಗಿದ್ದರು. ಈ ವೇಳೆ ಮೊಯಿನ್ ಖಾನ್ ಎಂಬ ಯುವಕ, ಪೊಲೀಸ್ ವಾಹನ ಬಳಸಿ ವಿಡಿಯೋ ಮಾಡಿದ್ದಾನೆ. ಯುವಕ ವಾಹನದ ಚಾಲಕನ ಸೀಟಿನಿಂದ ಹೊರಬರುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಇದನ್ನೂ ಓದಿ:ಕರ್ಣಾಟಕ ಬ್ಯಾಂಕ್ ರಾಜ್ಯದ ಹೆಮ್ಮೆ, ಅಭಿಮಾನ- ಶತಮಾನೋತ್ಸವದಲ್ಲಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಮೆಚ್ಚುಗೆ
ಅಧಿಕಾರಿಗಳ ಪ್ರಕಾರ, ಇಂದಿರಾಪುರಂನ ಕಣವಾಣಿ ಸೇತುವೆ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಪೊಲೀಸ್ ವಾಹನವನ್ನು ಗಮನಿಸಿದ ಯುವಕ ಅದನ್ನು ಬಳಸಿ ರೀಲ್ ಮಾಡಿದ್ದಾನೆ. ವಿಡಿಯೋ ವೈರಲ್ ಆದ ಬಗ್ಗೆ ಗಮನಹರಿಸಿ, ಇದೀಗ ಆತನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + seven =
Remember me
