ಬಿಜ್ನೋರ್(ಉತ್ತರಪ್ರದೇಶ):ರೀಲ್​ ತಯಾರಿಕೆ ಹುಚ್ಚು ಹಲವರ ಪ್ರಾಣವನ್ನು ತೆಗೆಯುತ್ತಿದ್ದರೂ ಜನ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಬಿಜ್ನೋರ್‌ನಲ್ಲಿ ರೀಲ್​ ಗಾಗಿ ವೀಡಿಯೋ ಮಾಡುತ್ತಿದ್ದ ಯುವಕನನ್ನು ಕಾಡಾನೆ ತನ್ನ ಸೊಂಡಲಿನಿಂದ ಜಾಡಿಸಿ ನೆಲಕ್ಕೆ ಕುಕ್ಕಿ ಕಾಲಿನಿಂದ ಹೊಸಕಿ ಹಾಕಿದೆ.
ಇದನ್ನೂ ಓದಿ:Success Story: ಮಿಸ್ ಇಂಡಿಯಾದಿಂದ ಐಎಫ್​ಎಸ್​ ಕಡೆ ಹೆಜ್ಜೆ.. ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಸೌದರ್ಯವತಿ!
ಮೃತ ಯುವಕನ ಹೆಸರು ಮುರ್ಸ್ಲೀನ್. ಈತನ ರೀಲ್​ ಹುಚ್ಚು ಕಾಡಾನೆ ರೆಚ್ಚಿಗೆದ್ದು ಬಲಿತೆಗೆದುಕೊಳ್ಳುವಂತಾಗಿದೆ. ಮುಸ್ಲೀನ್​ ಗೆ ವಿಡಿಯೋ ಮಾಡಿ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಹುಚ್ಚಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆ ವಿವರ: ಬುಧವಾರ ಬೆಳಗ್ಗೆ ಆನೆಯು ಸಾಹುವಾಲಾ ಅರಣ್ಯ ವ್ಯಾಪ್ತಿಯಿಂದ ಹೊರಟು ಹಬೀಬ್ವಾಲಾ ಗ್ರಾಮಕ್ಕೆ ಬಂದಿತ್ತು. 2ದಿನದಿಂದ ಬೀಡು ಬಿಟ್ಟಿದ್ದ ಕಾಡಾನೆ ಯನ್ನು ಅರಣ್ಯಕ್ಕೆ ಓಡಿಸುವ ಕೆಲಸದಲ್ಲಿ ಅರಣ್ಯ ಇಲಾಖೆ ತಂಡ ನಿರತವಾಗಿತ್ತು. ಮಥುರಾದಿಂದ ತಜ್ಞರ ತಂಡವನ್ನೂ ಕರೆಸಲಾಗಿತ್ತು. ಆದರೆ ಆನೆ ಅತ್ತಿಂದಿತ್ತ ಓಡಾಡುತ್ತಿದ್ದಾಗ ಕಪ್ಪು ಬಟ್ಟೆ ಧರಿಸಿದ್ದ ಮುಸ್ಲೀನ್​ ವಿಡಿಯೋ ಮಾಡಲು ಮುಂದಾಗಿದ್ದಾನೆ.
ಮುರ್ಸ್ಲೀನ್ ಆನೆ ಹೋದ ಕಡೆ ಇವನೂ ಮೊಬೈಲ್​ ಹಿಡಿದು ಓಡಿದ. ಇದರಿಂದಾಗಿ ಆನೆ ಅಸಮಾಧಾನಗೊಂಡು ಆತನನ್ನು ಸೊಂಡಲಿನಿಂದ ಮೇಲಕ್ಕೆತ್ತಿ ನೆಲಕ್ಕೆ ಬಡಿದಿದೆ. ಬಳಿಕ ಕಾಲಿನಿಂದ ಅವನನ್ನು ಹೊಸಕಿ ಹಾಕಿದೆ.
ನಮ್ಮ ಮುಂದೆ ಕಾಡಾನೆ ಮುರ್ಸ್ಲೀನ್ ನನ್ನು ಹೊಸಕಿ ಹಾಕಿದರೂ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ಹೇಗೋ ಆನೆಯನ್ನು ಓಡಿಸಲಾಯಿತು. ಮುರ್ಸ್ಲೀನ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಅಲ್ಲಿ ಮೃತಪಟ್ಟ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಮಿಳು ನಟ ಪ್ರದೀಪ್ ತಲೆಗೆ ಪೆಟ್ಟಾಗಿ ಮೃತ್ಯು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 11 =
Remember me
