ಅಮೃತಸರ:ಕುಡಿದ ಮತ್ತಿನಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಮೃತಸರ ಪೊಲೀಸರು ವ್ಯಕ್ತಿ ಓರ್ವನನ್ನು ಬಂಧಿಸಿದ್ದಾರೆ.
ಘಟನೆಯೂ ದುಬೈ-ಅಮೃತಸರ ವಿಮಾನದಲ್ಲಿ ಘಟನೆ ನಡೆದಿದ್ದು ವ್ಯಕ್ತಿಯೂ ತೀವ್ರ ಪಾನಮತ್ತನಾಗಿದ್ದ ವೇಳೆ ಕೃತ್ಯ ಎಸಗಿದ್ಧಾನೆ ಎಂದು ಪೊಲೀಸರು ತಿಳಿಸಿದ್ಧಾರೆ.
ಬಂಧಿತ ಆರೋಪಿಯನ್ನು ರಾಜಿಂದರ್​ ಸಿಂಗ್​ ಎಂದು ಗುರುತಿಸಲಾಗಿದ್ದು ಜಲಂಧರ್​ನ ಕೋಟ್ಲಿ ಗ್ರಾಮದವನು ಎಂದು ತಿಳಿದು ಬಂದಿದೆ.
ಆರೋಪಿ ಗಗನಸಖಿಗೆ ಕಿರುಕುಳ ನೀಡಿದ ವೇಳೆ ಮಹಿಳೆ ಇದನ್ನು ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಹಲವು ಬಾರಿ ಸೂಚನೆ ನೀಡಿದರ ಹೊರತಾಗಿಯೂ ಮಾತು ಕೇಳದೆ ಇದ್ದ ವೇಳೆ ಕಂಟ್ರೋಲ್​ ರೂಮ್​ಗೆ ವಿಚಾರವನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ನಕಲಿ ಮದ್ಯ ಸೇವಿಸಿ ಐವರ ಮೃತ್ಯು; ನಾಲ್ವರು ಪೊಲೀಸ್​ ಅಧಿಕಾರಿಗಳ ಅಮಾನತು
ಆರೋಪಿಯನ್ನು ಪೊಲೀಸರು ಶ್ರೀ ಗುರು ರಾಮ್​ದಾಸ್​​ ಜೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.
ಬಂಧಿತ ಆರೋಪಿ ರಾಜಿಂದರ್​ ಸಿಂಗ್​ ವಿರುದ್ಧ ಪೊಲೀಸರು ಭಾರತ ದಂಡ ಸಂಹಿತೆ(IPC Section) 354, 509 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
