ಧರ್ಮಪುರಿ:ಯುವತಿಯ ಮನೆಯವರ ವಿರೋಧದ ನಂತರವೂ ಆಕೆಯನ್ನು ಮದುವೆಯಾದವ ಆರು ತಿಂಗಳ ಬಳಿಕ ಕೊಲೆಯಾದ ಘಟನೆ ಇತ್ತೀಚೆಗೆ ನಡೆದಿದೆ.ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆತನ ಹೆಸರು ವಿಜಿ. 6 ತಿಂಗಳ ಹಿಂದೆ ಯುವತಿಯೋರ್ವಳನ್ನು ಆಕೆಯ ಹೆತ್ತವರ ವಿರೋಧದ ನಡುವೆಯೂ ಮದುವೆಯಾಗಿದ್ದ. ಆಕೆ ಆತನ ಸಂಬಂಧಿಯಾಗಿದ್ದು, ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದು, ಆತನೊಂದಿಗೆ ಸಂಬಂಧ ಹೊಂದಿದ್ದಳು. ಆದರೆ ವಿಜಿಯೊಂದಿಗಿನ ಸಂಬಂಧವನ್ನು ಮಹಿಳೆಯ ಕುಟುಂಬ ಒಪ್ಪಿರಲಿಲ್ಲ.
ಇದನ್ನೂ ಓದಿ:ಭಾರತದ ಪ್ರತಿಷ್ಠಿತ ಕಂಪನಿ ಬಿಇಎಲ್​ ಡಿಪ್ಲೊಮಾ ಅಪ್ರೆಂಟಿಸ್​​ಷಿಪ್ ಗೆ ಅವಕಾಶ ಕಲ್ಪಿಸಿದೆ
ಸುಮಾರು ಆರು ತಿಂಗಳ ಹಿಂದೆ, ವಿಜಿ ಆಕೆಯೊಂದಿಗೆ ಓಡಿಹೋಗಿ ಮದುವೆಯಾದ. ನವವಿವಾಹಿತ ದಂಪತಿ ಒಟ್ಟಾರ್ತಿನೈಗೆ ಹಿಂದಿರುಗಿದಾಗ, ಮಹಿಳೆಯ ತಂದೆ ಮುರಳಿ ರಾಜ್ ವಿಜಿಗೆ ಭೇಟಿಯಾದರು.ಆರು ತಿಂಗಳಲ್ಲಿ ದಂಪತಿಗೆ ವಿವಾಹ ನಡೆಸುವುದಾಗಿ ರಾಜ್ ಭರವಸೆ ನೀಡಿದರು ಅಷ್ಟೇ ಅಲ್ಲದೆ, ಅಲ್ಲಿಯವರೆಗೆ ಅವರಿಬ್ಬರೂ (ವಿಜಿ ಮತ್ತು ಆತನ ಹೆಂಡತಿ) ತಮ್ಮ ತಮ್ಮ ಮನೆಗಳಲ್ಲಿ ಇರಬೇಕೆಂದು ಹೇಳಿದರು. ತನ್ನ ಮಗಳು ಎಂಜಿನಿಯರಿಂಗ್ ಪದವಿ ಮುಗಿಸಲು ಬಯಸಿದ್ದಾಗಿ ರಾಜ್ ವಿಜಿಗೆ ಹೇಳಿದರು.
ಇದನ್ನೂ ಓದಿ:ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೀಡಾ ಪ್ರತಿಭಾವಂತರಿಗೆ ಜನರಲ್ ಬ್ಯಾಂಕಿಂಗ್ ಆಫೀಸರ್ ಆಗುವ ಅವಕಾಶ
ವಿಜಿ ಮತ್ತು ರಾಜ್ ಮಗಳು ಅವರು ಪ್ರಸ್ತಾಪಕ್ಕೆ ಸಮ್ಮತಿಸಿ ತಮ್ಮ ಮನೆಗಳಿಗೆ ಮರಳಿದರು. ಇತ್ತೀಚೆಗೆ, ದಂಪತಿ ವಿವಾಹ ಸಮಾರಂಭದ ಬಗ್ಗೆ ಮಾತನಾಡಲು ರಾಜ್ ಅವರನ್ನು ಸಂಪರ್ಕಿಸಿದರು. ಮುಂದಿನ ತಿಂಗಳು ಸಮಾರಂಭವನ್ನು ನಡೆಸುವುದಾಗಿ ರಾಜ್ ದಂಪತಿಗೆ ತಿಳಿಸಿದ್ದರು.ಇತ್ತೀಚೆಗೆ ವಿಜಿ ಕೊಲೆಯಾಗಿರುವುದು ಪತ್ತೆಯಾಯಿತು.  ಮೃತ ವ್ಯಕ್ತಿಯನ್ನು ವಿಜಿ ಎಂದು ಗುರುತಿಸಲಾಗಿದೆ. ಶನಿವಾರ, ಒಟ್ಟಾರ್ತಿನೈ ಬಳಿ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆತನ ಮಾವನೇ ಈ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಇದನ್ನೂ ಓದಿ:ಶಸ್ತ್ರಸಜ್ಜಿತರಾಗಿ ಬಂದವರು ಅಪಹರಿಸಿ, ಅತ್ಯಾಚಾರವೆಸಗಿ, ಹಣ, ಮೊಬೈಲ್ ಕದ್ದುಹೋದರು…
ವಿಜಿಯ ಶವವನ್ನು ಕುಮ್ಮಣ್ಣೂರ್ ಬಳಿ ವಶಪಡಿಸಿಕೊಳ್ಳಲಾಗಿದೆ. ಆ ವ್ಯಕ್ತಿಯ ಕುತ್ತಿಗೆಯಲ್ಲಿ ಹಗ್ಗದ ಗುರುತು ಪತ್ತೆಯಾಗಿದೆ ಮತ್ತು ಆತನ ತಲೆಯ ಹಿಂಭಾಗದಲ್ಲಿ ತೀವ್ರ ಗಾಯವಾಗಿದೆ. ಆತನ ಹೆಂಡತಿಯ ತಂದೆ ಮುರುಳಿರಾಜ್ ತಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ವಿಜಿ ಮನೆಯವರು ಆರೋಪಿಸಿದ್ದು, ಮುರುಳಿ ರಾಜ್ ವಿರುದ್ಧ ವಿಜಿಯ ತಂದೆ ದೂರು ನೀಡಿದ್ದಾರೆ. “ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪಾಲಕೋಡ್ ಇನ್ಸ್‌ಪೆಕ್ಟರ್ ಎಸ್. ವಿಶ್ವನಾಥನ್ ತಿಳಿಸಿದ್ದಾರೆ.
ಆಡು ಕೊಂದರೆಂದು ದಲಿತ ಯುವಕರ ಮರಕ್ಕೆ ಕಟ್ಟಿ ಎಂಜಲು ನೆಕ್ಕಿಸಿದರು!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:20 − eighteen =
Remember me
