ಕುರ್ಚಿಗಾಗಿ ರಾಜಕಾರಣಿಗಳು ಸಾಕಷ್ಟು ಸರ್ಕಸ್​ ಮಾಡುವುದನ್ನು, ರಾಜಕೀಯ ಹತ್ಯೆಗಳನ್ನು ಮಾಡಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ಕೂರಲು ಒಂದು ಕುರ್ಚಿಗಾಗಿ ಆರಂಭವಾದ ಕಿತ್ತಾಟ ಕೊಲೆಯಲ್ಲಿ ಅಂತ್ಯವಾಗಿದೆ.
ಗುವಾಹಟಿಯ ನೂನ್​ಮತಿ ಬಡಾವಣೆಯಲ್ಲಿರುವ ಅಂಗಡಿಯೊಂದರಲ್ಲಿ ಶುಕ್ರವಾರ ನಡೆದ ಈ ಘಟನೆಯಲ್ಲಿ ಐವರು ಸೇರಿ ರಿತುಪರ್ಣ ಪೆಗು (26) ಎಂಬಾತನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಬಂಧಿಸಲಾಗಿದೆ ಎಂದು ಗುವಾಹಟಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತಾಯಿ ಜತೆಯಲ್ಲೇ ಹೆಣ್ಣು ಮಕ್ಕಳಿಬ್ಬರ ಸಾವು, ಆ ಕೆರೆ ಬಳಿ ಏನಾಯ್ತು ಎಂಬುದೇ ನಿಗೂಢ!
ರಿತುಪರ್ಣ ಪೆಗು ಅಂಗಡಿಯಲ್ಲಿದ್ದಾಗ ಸಹೋದ್ಯೋಗಿಯೊಂದಿಗೆ ಕುರ್ಚಿಗಾಗಿ ಜಗಳ ಆರಂಭವಾಗಿತ್ತು. ಇವರಿಬ್ಬರೂ ಕಿತ್ತಾಡುತ್ತಿರುವಾಗಲೇ ಮೂರನೇ ವ್ಯಕ್ತಿ ಚೂರಿಯಿಂದ ರಿತುಪರ್ಣ ಪೆಗು ಮೇಲೆ ಹಲ್ಲೆ ಮಾಡಿದ್ದ. ಸತತವಾಗಿ ಇರಿದಿದ್ದರಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಪಟ್ಟಿದ್ದ ಎಂದು ಹೇಳಿದ್ದಾರೆ.
ದುಲಾಲ್​ ಅಲಿ, ಇಬ್ರಾಹಿಂ ಅಲಿ, ಮನೋವಾರ್​ ಖತೂನ್​, ಹುಸೇನ್​ ಅಲಿ ಮತ್ತು ಅರ್ಮಾನ್​ ಅಲಿ ಬಂಧಿತರು. ಇವರೆಲ್ಲರನ್ನೂ ಶುಕ್ರವಾರವೇ ಬಂಧಿಸಲಾಗಿತ್ತು. ಅಂಗಡಿಯ ಮಾಲೀಕನನ್ನು ಶನಿವಾರ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.ಘಟನೆಯ ಕುರಿತು ಸೂಕ್ತ ತನಿಖೆಗೆ ಸಿಎಂ ಸರ್ಬಂದಾ ಸೋನಾವಾಲಾ ಸೂಚಿಸಿದ್ದಾರೆ.
ಐದು ತಿಂಗಳ ಗರ್ಭಿಣಿ ಮೇಘನಾ ಸರ್ಜಾ ಆರೋಗ್ಯ ಹೇಗಿದೆ?; ಹರಿದಾಡಿದ್ದ ವದಂತಿಗಳಿಗೆ ಸಿಕ್ಕ ಉತ್ತರ ಇದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
