ಆಗ್ರಾ:ದೇಶದಲ್ಲಿ ಕನ್ಹಯ್ಯ ಲಾಲ್​ನ ತಲೆ ಕಡಿದು ಕೊಲೆ ಮಾಡಿರುವ ಪ್ರಕರಣ ಇನ್ನೂ ತನಿಖೆಯಲ್ಲಿರುವ ನಡುವೆಯೇ ಇನ್ನೊಂದು ಅಂಥದ್ದೇ ಕೊಲೆ ನಡೆದಿದೆ. ಮಾತ್ರವಲ್ಲ, ಹಂತಕರು ರುಂಡ-ಮುಂಡ ಸಹಿತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಉತ್ತರಪ್ರದೇಶದ ಆಗ್ರಾದ ಲೋಹಮಂಡಿ ನಿವಾಸಿ ನವೀನ್ ವರ್ಮಾ (38) ಎಂಬಾತ ಕೊಲೆಗೀಡಾದ ವ್ಯಕ್ತಿ. ಸಿಕ್ಕಿಬಿದ್ದಿರುವ ಹಂತಕರನ್ನು ಟೋನಿ ಭಾರ್ಗವ್ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಇವರು ಮೊದಲು ಶೂಟ್ ಮಾಡಿ ಸಾಯಿಸಿದ್ದು, ಬಳಿಕ ರುಂಡ-ಮುಂಡ ಪ್ರತ್ಯೇಕಿಸಿದ್ದಾರೆ.
ಆಗ್ರಾದ ಸಿಕಂದ್ರಾ ಠಾಣೆಯ ಪೊಲೀಸರು ಗುರುವಾರ ರಾತ್ರಿಗಸ್ತಿನಲ್ಲಿ ಇದ್ದಾಗ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಕಾರೊಂದು ಕಾಣಿಸುತ್ತದೆ. ಆಗ ಪೊಲೀಸರು ಕಾರಿನ ಬಳಿಗೆ ತೆರಳಿದಾಗ ಅಲ್ಲಿ ಇಬ್ಬರು ನಿಂತಿರುವುದು ಹಾಗೂ ರಸ್ತೆ ಮೇಲೆ ತಲೆ ಇರದ ಶವ ಬಿದ್ದಿರುವುದು ಕಂಡುಬರುತ್ತದೆ. ಕಾರಿನೊಳಗೆ ಇಣುಕಿ ನೋಡಿದಾಗ ಅದರಲ್ಲಿ ರುಂಡ ಇತ್ತು.
ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ಅವರು ಮೊದಲು ಶೂಟ್ ಮಾಡಿ ಕಡೆಗೆ ರುಂಡ ಕತ್ತರಿಸಿರುವುದು ತಿಳಿದುಬರುತ್ತದೆ. ಅಲ್ಲದೆ ಅವರು ಶವದ ಗುರುತು ಸಿಗಬಾರದು ಎಂದು ರುಂಡ ಕತ್ತರಿಸಿ ಮುಂಡವನ್ನು ಎಲ್ಲಾದರೂ ಹಾಕಿ ಹೋಗಬೇಕು ಎಂದು ಹವಣಿಸುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ನವೀನ್ ಬೆಳ್ಳಿ ವ್ಯಾಪಾರಿಯಾಗಿದ್ದು, ಹೆಂಡತಿ, ಮಗಳು ಹಾಗೂ ಮಗನನ್ನು ಅಗಲಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಆರಂಭಿಸಿದ್ದು, ಕೊಲೆಗೆ ಕಾರಣ ಇತ್ಯಾದಿ ಕುರಿತ ಖಚಿತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದೆ.
ಅನ್​ಲೋಡ್ ಮಾಡುವಾಗ ಜೀವವೇ ಹೋಯ್ತು; ಹೃದಯಕ್ಕೇ ಹಾನಿಯಾಗಿ ನಿಂತಲ್ಲೇ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + four =
Remember me
