ಹರಿದ್ವಾರ:ಅನೇಕ ವರ್ಷಗಳಿಂದ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದವಳನ್ನು ಕೊಂದು, ದೇಹವನ್ನು ಪೀಸ್​ ಪೀಸ್​ ಮಾಡಿ ಸೂಟ್​ಕೇಸ್​ನಲ್ಲಿ ತುಂಬಿರುವ ಹೃದಯವಿದ್ರಾವಕ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಬಿಹಾರ ಮೂಲದ 26 ವರ್ಷದ ಯುವಕ ಕೊಲೆ ಆರೋಪ ಎದುರಿಸುತ್ತಿದ್ದಾರೆ. 23 ವರ್ಷದ ಮಧ್ಯಪ್ರದೇಶದ ಯುವತಿಯ ಜತೆ ಯುವಕ, ಹರಿದ್ವಾರದ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಾಗಿದ್ದ. ಆಕೆಯ ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ಮೃತದೇಹವನ್ನು ತುಂಬಿದ ನಂತರ ಯುವಕ ಪರಾರಿಯಾಗಿದ್ದಾನೆ.
ಘಟನೆ ನಡೆದಿದ್ದು ಕಳೆದ ಶುಕ್ರವಾರ. ಆದರೆ ಘಟನೆ ಬೆಳಕಿಗೆ ಬಂದದ್ದು ಮೊನ್ನೆ ಭಾನುವಾರ. ಅಪಾರ್ಟ್​ಮೆಂಟ್​ನಿಂದ ದುರ್ವಾಸನೆ ಬರಲು ಶುರುವಾಗಿತ್ತು. ಇದು ಅಕ್ಕಪಕ್ಕದ ಮನೆಗಳಿಗೂ ಹರಡಿತ್ತು. ನಂತರ ಅವರು ಪೊಲೀಸರಲ್ಲಿ ದೂರು ದಾಖಲು ಮಾಡಿದರು. ಪೊಲೀಸರು ಬಂದು ಅಪಾರ್ಟ್​ಮೆಂಟ್​ ಬಾಗಿಲನ್ನು ಒಡೆದು ನೋಡಿದಾಗಲೇ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!
ಆರೋಪಿ ಹಾಗೂ ಕೊಲೆಯಾದ ಯುವತಿ ಹರಿದ್ವಾರದಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಯುವತಿ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿಯಾಗಿದ್ದು, ಇಬ್ಬರೂ ಲಿವ್​ ಇನ್​ ರಿಲೇಷನ್​ನಲ್ಲಿ ಒಟ್ಟಿಗೇ ವಾಸವಾಗಿದ್ದರು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಬಿಹಾರದ ವೈಶಾಲಿ ಜಿಲ್ಲೆಯವ ಎಂದು ಪತ್ತೆ ಮಾಡಲಾಗಿದೆ.
ಕೊಲೆ ಆರೋಪಿ ಹಾಗೂ ಯುವತಿ ಇಬ್ಬರೂ ಮೊದಲು ಗ್ವಾಲಿಯರ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಒಂದೇ ಕಡೆ ಇದ್ದ ಇಬ್ಬರಿಗೂ ಪರಿಚಯವಾಗಿ, ಪರಿಚಯ ಸ್ನೇಹವಾಗಿ ಒಟ್ಟಿಗೇ ಇರಲು ನಿರ್ಧರಿಸಿದರು. ನಂತರ ಇಬ್ಬರೂ ದೆಹಲಿಗೆ ಶಿಫ್ಟ್​ ಆಗಿ ಒಟ್ಟಿಗೇ ಇ-ಕಾಮರ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಕಂಪನಿಯು ಹರಿದ್ವಾರಕ್ಕೆ ಶಿಫ್ಟ್​ ಆಗಿದ್ದರಿಂದ ಅಲ್ಲಿ ಬಂದು ಒಟ್ಟಿಗೇ ವಾಸವಾಗಿದ್ದರು ಎಂಬುದು ತನಿಖೆಯಿಂದ ತಿಳಿದಿದೆ.
ಇದನ್ನೂ ಓದಿ:ಲಿಂಗಸಮಾನತೆ ಪ್ರತಿಪಾದನೆಗೆ ವಿಶ್ವಸಂಸ್ಥೆ ಅವಾರ್ಡ್​: ಪ್ರಥಮ ಭಾರತೀಯರಾಗಿ ಮೇಜರ್​ ಸುಮನ್​
ಅಪಾರ್ಟ್​ಮೆಂಟ್​ನಲ್ಲಿ ವಾಸ ಇರುವ ಇನ್ನೊಬ್ಬ ಸುಂದರ ಯುವತಿಯ ಜತೆ ಆರೋಪಿ ಹತ್ತಿರವಾಗತೊಡಗಿದ್ದು, ಇದರಿಂದಲೇ ತನ್ನ ಜತೆ ಇದ್ದ ಯುವತಿಯ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಯುವತಿಯ ಜತೆ ಸಲುಗೆಯಿಂದ ಇರುವುದನ್ನು ಸ್ಥಳೀಯರು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದೇ ವಿಷಯಕ್ಕೆ ಜತೆಗಿರುವ ಯುವತಿಯೊಂದಿಗೆ ಜಗಳವಾಗಿರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಕೊಲೆ ಮಾಡಿ ದೇಹ ತುಂಡರಿಸಿ ಅದನ್ನು ಸೂಟ್​ಕೇಸ್​ನಲ್ಲಿ ಇಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆತನ ಜತೆ ಸಲುಗೆಯಿಂದ ಇರುವ ಇನ್ನೋರ್ವ ಯುವತಿ ಕೂಡ ಕಾಣೆಯಾಗಿದ್ದಾಳೆ. ಆಕೆ ಕೂಡ ಕೊಲೆ ಸಮಯದಲ್ಲಿ ಮನೆಗೆ ಬಂದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಕೊಲೆ ನಡೆದ ಸಮಯದಲ್ಲಿ ಮನೆಯಲ್ಲಿ ಜೋರಾಗಿ ಸಂಗೀತವನ್ನು ಹಾಕಿದ್ದರಿಂದ ಮಹಿಳೆ ಕಿರುಚಾಡಿದ್ದು ಕೇಳಿಸಲಿಲ್ಲ ಎಂದು ನೆರೆಹೊರೆಯವರು ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಭಾವಿ ಪತಿಗೆ ಕಳಿಸಿದಳೊಂದು ಜೋಕ್​- ಆತನ ರಿಪ್ಲೈ ನೋಡಿ ಮದುವೆ ಮುರಿದೇ ಬಿಟ್ಳು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eight − three =
Remember me
