ಬಿಹಾರ:ಕಿರಾತಕನೋರ್ವ ತನ್ನ ಗರ್ಭಿಣಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹರಿತವಾದ ಆಯುಧಗಳಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಕೈಮೂರ್ ಜಿಲ್ಲೆಯ ಸೊಂಡಿಹಾರ ಗ್ರಾಮದಲ್ಲಿ ನಡೆದಿದೆ.ಆರೋಪಿ ಲಾಲ್ ಬಾಬು ಷಾ ಪತ್ನಿ ಮೋತಿ ದೇವಿ ಮತ್ತು ಮಕ್ಕಳಾದ ಖುಷಿ (6), ಶಿವಂ ಕುಮಾರ್ (2) ಕೊಲೆಯಾದ ದುರ್ದೈವಿಗಳು.
ಪೊಲೀಸ್ ಮೂಲಗಳ ಪ್ರಕಾರ, ಕೌಟುಂಬಿಕ ಜಗಳವೇ ಈ ಭೀಕರ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಘಟನೆ ವೇಳೆ ಆರೋಪಿಯೊಂದಿಗೆ ವಾಸಿಸುತ್ತಿದ್ದ ಆತನ ಪೋಷಕರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.ಆರೋಪಿ ಲಾಲ್ ಕೊಲೆ ಮಾಡಿದ ನಂತರ ರಕ್ತದ ಕಲೆ ಇರುವ ಬಟ್ಟೆ, ನೆಲ ಮತ್ತು ಆಯುಧಗಳನ್ನು ಸ್ವಚ್ಛಗೊಳಿಸುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾನೆ. ಸ್ಥಳ ಪರಿಶೀಲನೆ ವೇಳೆ ಎರಡು ಚೂಪಾದ ಆಯುಧಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಭಭುವಾ ಪೊಲೀಸ್ ಠಾಣೆಯ ಎಸ್‌ಎಚ್‌ಒ, ರಾಮಚಂದ್ರ ಮಂಡಲ್ ಮಾಹಿತಿ ನೀಡಿದ್ದಾರೆ.
ಆರೋಪಿ ಲಾಲ್ ಮತ್ತು ಪತ್ನಿ ಮೋತಿ 10 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರದ ವರ್ಷಗಳಲ್ಲಿ ಇಬ್ಬರು ಪರಸ್ಪರ ಜಗಳವಾಡುತ್ತಿದ್ದರು. ಮಂಗಳವಾರ ಸಂಜೆ ಕೂಡ ಇವರು ಜಗಳವಾಡುವುದನ್ನು ನೆರೆ-ಹೊರೆಯವರು ನೋಡಿದ್ದಾರೆ.
ಜಗಳ ಅತಿರೇಕಕ್ಕೆ ಹೋಗಿದ್ದು, ಆರೋಪಿ ಲಾಲ್ ತನ್ನ ಒಂಬತ್ತು ತಿಂಗಳ ಗರ್ಭಿಣಿ ಪತ್ನಿ ಮತ್ತು ಮಲಗಿದ್ದ ಇಬ್ಬರು ಮಕ್ಕಳನ್ನು ಹರಿತವಾದ ಆಯುಧಗಳಿಂದ ಚುಚ್ಚಿ ಸಾಯಿಸಿದ್ದಾನೆ. ಶವಗಳನ್ನು ಸಾಗಿಸಲು ಪ್ರಯತ್ನಿಸುವ ವೇಳೆ, ಅಕ್ಕ-ಪಕ್ಕದವರಿಗೆ ವಿಷಯ ತಿಳಿಱಱದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ದುಬಾರಿ ಬೆಲೆ ಕಾರಿನ ಒಡೆಯನಾದ ಬಿಗ್​ಬಾಸ್ ವಿನ್ನರ್…ಅದರ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 17 =
Remember me
