ಪ್ರಧಾನ ಮಂತ್ರಿನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದು, ಈ ಐತಿಹಾಸಿಕ ಭೇಟಿಯ ಮೊದಲ ಚರಣದಲ್ಲಿ ಜೂನ್ 20 ರಂದು ನ್ಯೂಯಾರ್ಕ್ ತಲುಪಿದ್ದಾರೆ. ಈ ಹಿಂದೆ ಶ್ವೇತಭವನ ನೀಡಿರುವ ಹೇಳಿಕೆ ಹೀಗಿತ್ತು. ಅಮೆರಿಕ ಮತ್ತು ಭಾರತದ ನಡುವಿನ ಗಾಢವಾದ ಮತ್ತು ರಚನಾತ್ಮಕ ಪಾಲುದಾರಿಕೆ ಮತ್ತು ಕುಟುಂಬದಂತೆ, ಸ್ನೇಹಮಯ ಬೆಚ್ಚಗಿನ ಬಂಧಗಳು ಉಭಯದೇಶವಾಸಿಗಳನ್ನು ಒಟ್ಟುಗೂಡಿಸಿದೆ. ವಾಸ್ತವವಾಗಿ, ಈ ಭೇಟಿಯು ಪ್ರಪಂಚದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಭದ್ರಪಡಿಸುತ್ತದೆ. ಬಹುಮುಖ್ಯವಾಗಿ ಭಾರತವನ್ನು ಜಗತ್ತಿನತ್ತ ಕೊಂಡೊಯ್ಯುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಉನ್ನತಮಟ್ಟಕ್ಕೆ ಏರಿಸುವ, ಜಾಗತಿಕ ವೇದಿಕೆಯಲ್ಲಿ ಭಾರತೀಯ ನಾಯಕತ್ವವನ್ನು ಪ್ರದರ್ಶಿಸುವ ತನ್ನ ಧ್ಯೇಯವನ್ನು ಮುನ್ನಡೆಸಲು ಪ್ರಧಾನಿ ಮೋದಿಗೆ ಇದೊಂದು ಅದ್ಭುತ ಅವಕಾಶ, ವೇದಿಕೆ ಕಲ್ಪಿಸಿದೆ.
ವಿಶ್ವಸಂಸ್ಥೆ (UN) ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ನಡೆದ ಕಾರ್ಯಕ್ರಮವನ್ನು ಮುನ್ನಡೆಸುವ ಅವಕಾಶ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅಮೆರಿಕದಲ್ಲಿ ಪ್ರಧಾನ ಮಂತ್ರಿಯವರು ತಮ್ಮ ಪ್ರವಾಸದ ಆರಂಭದಲ್ಲಿಯೇ ಈ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ ಮೂಲಕ ಮೂರು ತತ್ವಗಳನ್ನು ನೇರವಾಗಿ ಪ್ರತಿಬಿಂಬಿಸಿದ್ದಾರೆ. ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಗವು “ಏಕ್ ಭಾರತ್, ಶ್ರೇಷ್ಠ ಭಾರತ್” ಎಂಬ ಮನೋಭಾವವನ್ನು ಭಾರತ ಜಗತ್ತಿಗೆ ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು. ಇದು ಆಂತರಿಕ ದೃಷ್ಟಿಯನ್ನು ವಿಸ್ತರಿಸುತ್ತದೆ ಮತ್ತು ನಮ್ಮ ವಿರೋಧಾಭಾಸಗಳು, ಅಡೆತಡೆಗಳು ಮತ್ತು ಪ್ರತಿರೋಧಗಳನ್ನು ತೊಡೆದು ಹಾಕಲು ನೆರವಾಗುತ್ತದೆ. ಭಾರತವು ಯಾವಾಗಲೂ ಒಗ್ಗೂಡಿಸುವ, ಅಳವಡಿಸಿಕೊಳ್ಳುವ ಮತ್ತು ಆಧರಿಸುವ ಸಂಪ್ರದಾಯಗಳಿಗೆ ಆದ್ಯತೆ ನೀಡುತ್ತದೆ ಮತ್ತು ಯೋಗವು “ವಸುಧೈವ ಕುಟುಂಬಕಮ್” ಕಲ್ಪನೆಯ ವಿಸ್ತರಣೆಯಾಗಿದೆ ಎಂದು ಹೇಳಿದ್ದಾರೆ.
ಈ ಭೇಟಿಯು ಅಮೆರಿಕ ಮತ್ತು ಭಾರತದ ನಡುವಿನ ಗಾಢವಾದ ಮತ್ತು ನಿಕಟ ಪಾಲುದಾರಿಕೆಯನ್ನು ಹಾಗೂ ಉಭಯ ದೇಶವಾಸಿಗಳನ್ನು ಒಗ್ಗೂಡಿಸುವ ಮೂಲಕ ಕೌಟುಂಬಿಕ, ಸ್ನೇಹಮಯ ವಾತಾವರಣಕ್ಕೆ ಒತ್ತು ನೀಡುತ್ತಿದೆ. 2023 ಅನ್ನು “ಅಂತಾರಾಷ್ಟ್ರೀಯ ರಾಗಿ ವರ್ಷ”ವನ್ನಾಗಿ ಆಚರಿಸಲು ಪ್ರಧಾನಮಂತ್ರಿಯವರ ಪ್ರಯತ್ನಗಳು ಮತ್ತು ಅವರ ಮಹತ್ವಾಕಾಂಕ್ಷಿಯ ಲೈಫ್ ಯೋಜನೆಯು ಇವುಗಳಿಂದಲೇ ಪ್ರೇರಿತಗೊಂಡಿವೆ. ಎರಡೂ ಯೋಜನೆಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಸರ್ವೋತ್ಕೃಷ್ಟವಾಗಿ ಭಾರತೀಯ ಅಭ್ಯಾಸ ಅಥವಾ ಇತರೆ ಪದ್ಧತಿಗಳನ್ನು ಉನ್ನತೀಕರಿಸಲಾಗಿದೆ. ಈಗ ಜಾಗತಿಕವಾಗಿ ಇವುಗಳನ್ನು ಅತ್ಯುತ್ತಮ ಅಭ್ಯಾಸವೆಂದು ಪ್ರಶಂಸಿಸಲಾಗಿದೆ. ರಾಗಿ ಅಗಾಧವಾದ ಪೌಷ್ಟಿಕಾಂಶ ಹೊಂದಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಬೇಡಿಕೆಯಿಂದ ಸುಸ್ಥಿರ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸುತ್ತವೆ. ಅಂತೆಯೇ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಬದಲಾವಣೆ ಮಾಡುವ ಮೂಲಕ ನಮ್ಮಲ್ಲಿ ಸ್ವಚ್ಛ, ಹಸಿರು ವಲಯ ನಿರ್ಮಿಸಲು ಸಹಾಯ ಮಾಡುತ್ತದೆ.
G20 ಅಧ್ಯಕ್ಷ ಸ್ಥಾನವು ದಕ್ಷಿಣ ಭಾಗದಲ್ಲಿ ಕಾನೂನುಬದ್ಧ ಧ್ವನಿಯಾಗಿ ಭಾರತ ಹೊರಹೊಮ್ಮಿರುವುದಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಒಪ್ಪಂದಗಳೊಂದಿಗೆ ಪುನಃ ತೊಡಗಿಸಿಕೊಳ್ಳಲು ಮತ್ತು ಹೊಸ ಅಂತಾರಾಷ್ಟ್ರೀಯತೆ ಮತ್ತು ಬಹುಪಕ್ಷೀಯತೆಗಾಗಿ ಪ್ರತಿಪಾದಿಸುವ ಪ್ರಧಾನ ಮಂತ್ರಿಯ ಪ್ರಯತ್ನಗಳ ತಳಹದಿಯಾಗಿ ಕಾರ್ಯನಿರ್ವಹಿಸಲಿದೆ.
ಡಿಜಿಟಲ್ ಸಬಲೀಕರಣವು ಹೊಸ ಉದಯಕ್ಕೆ ನಾಂದಿ ಹಾಡಿದೆ. ಆದ್ದರಿಂದ, ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (ಡಿಪಿಐ) ಪ್ರಚಾರವು ಭಾರತೀಯ ಜಿ20 ಅಧ್ಯಕ್ಷತೆಯಡಿ ಪ್ರಮುಖ ಆದ್ಯತೆಯ ಯೋಜನೆಗಳಲ್ಲಿ ಒಂದಾಗಿದೆ. ಭಾರತವು ಎಲ್ಲಾ ಮೂರು ಮೂಲ ಡಿಪಿಐಗಳನ್ನು ರಚಿಸಿದ ಮೊದಲ ದೇಶವಾಗಿದೆ. ವಿಶಿಷ್ಟವಾದ ಗುರುತಿನ ವ್ಯವಸ್ಥೆ, ಅತಿ ವೇಗದ ಪಾವತಿ ವ್ಯವಸ್ಥೆ ಮತ್ತು ಗೌಪ್ಯತೆಗೆ ಧಕ್ಕೆಯಾಗದಂತೆ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳುವ ವೇದಿಕೆ ಸೃಷ್ಟಿಯಾಗಿದೆ.
ಒಟ್ಟಾರೆಯಾಗಿ, ಈ ಮೂರೂ ಸಾರ್ವಜನಿಕ ಸೇವೆ ಮತ್ತು ನಾಗರಿಕರ ಸಬಲೀಕರಣಕ್ಕೆ ಒತ್ತು ನೀಡಿವೆ. ಅಭೂತಪೂರ್ವ ಪ್ರಮಾಣದಲ್ಲಿ ನಾವೀನ್ಯತೆ ಅನಾವರಣಗೊಳಿಸಿವೆ. ಇಂದು, 99.9 ರಷ್ಟು ಭಾರತೀಯರು ಸಾರ್ವಜನಿಕ ಸೇವೆಗಳನ್ನು ಪಡೆಯಲು ತಮ್ಮ ಆಧಾರ್ ಐಡಿಯನ್ನು ಬಳಸುತ್ತಾರೆ. ಭಾರತೀಯರು ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಮೂಲಕ ಪ್ರತಿದಿನ 30 ಮಿಲಿಯನ್ ವಹಿವಾಟುಗಳನ್ನು ಮಾಡುತ್ತಾರೆ ಮತ್ತು ದೇಶವು ವಿಶ್ವದ ಅತಿದೊಡ್ಡ ಹಣಕಾಸು ಕಾರ್ಯಕ್ರಮವನ್ನು ನಿರ್ವಹಿಸುತ್ತದೆ. ಭಾರತವು ತನ್ನ DPI ಪರಿಣತಿಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಿದೆ ಮತ್ತು ಜಾಗತಿಕವಾಗಿ ಎಲ್ಲರ ಗಮನವನ್ನು ಸೆಳೆದಿದೆ. ಪ್ರಧಾನಿ ಮೋದಿಯವರ ಭೇಟಿಯ ಮೊದಲ ದಿನದಲ್ಲಿ ಸಂವಾದ ನಡೆಸಿದ ಅಮೆರಿಕದ ಅರ್ಥಶಾಸ್ತ್ರಜ್ಞ ಪಾಲ್ ರೋಮರ್, ಆಧಾರ್ ಮತ್ತು ಡಿಜಿಲಾಕರ್​ನಂತಹ ಟೆಕ್ ಪರಿಹಾರಗಳು, ಅದನ್ನು ಹೇಗೆ ಸರಿಯಾಗಿ ಮಾಡಬೇಕೆಂದನ್ನು ಭಾರತವು ಜಗತ್ತಿಗೆ ತೋರಿಸಬಲ್ಲದು ಎಂದು ಹೇಳಿದರು. ಕ್ವಾಡ್ ಲೀಡರ್ಸ್ ಮತ್ತು ಐರೋಪ್ಯ –ಒಕ್ಕೂಟ ಇಂಡಿಯಾ ಟ್ರೇಡ್ ಅಂಡ್ ಟೆಕ್ನಾಲಜಿ ಕೌನ್ಸಿಲ್​ನ ಇತ್ತೀಚಿನ ಹೇಳಿಕೆಗಳು ಡಿಪಿಐ ಬಗ್ಗೆ ವಿವರಿಸಿವೆ.
ಜನರು ಮತ್ತು ಪರಿಸರದ ನಡುವೆ ಬಾಂಧವ್ಯ ಮೂಡಿಸಲು ಪ್ರಧಾನಿ ಮೋದಿ ಉತ್ಸುಕರಾಗಿದ್ದಾರೆ. ಅವರು 2070 ರ ವೇಳೆಗೆ ನಿವ್ವಳ-ಶೂನ್ಯವನ್ನು ತಲುಪುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದಾರೆ. ಆದರೆ ಹವಾಮಾನ ಬದಲಾವಣೆಗೆ ಪೂರಕವಾದ ಹೊಸ ಉಪ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ. ಭಾರತ ಮತ್ತು ಫ್ರಾನ್ಸ್ ದೇಶಗಳು ಜಂಟಿಯಾಗಿ ವೆಚ್ಚ-ಪರಿಣಾಮಕಾರಿ ಸೌರ ವಿದ್ಯುತ್ ಶುದ್ಧ ಇಂಧನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು 2015 ರಲ್ಲಿ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ISA) ಸ್ಥಾಪಿಸಿತು. ಇಂದು, 114 ರಾಷ್ಟ್ರಗಳು ಇದಕ್ಕೆ ಸದಸ್ಯತ್ವ ಪಡೆದುಕೊಂಡಿದೆ. ‘ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್’ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ಪ್ರಾರಂಭಿಸಿದರು. ನವೀಕರಿಸಬಹುದಾದ ಇಂಧನ ಶಕ್ತಿಯನ್ನು ವರ್ಗಾಯಿಸುವ ಸಾಮಾನ್ಯ ಗ್ರಿಡ್ ಮೂಲಕ ವಿವಿಧ ಪ್ರಾದೇಶಿಕ ಗ್ರಿಡ್ಗಳನ್ನು ಸಂಪರ್ಕಿಸುವ ದೂರದೃಷ್ಟಿಯ ಪ್ರಯತ್ನವೆಂದು ಪರಿಗಣಿಸಲಾಗಿದೆ. 2019 ರಲ್ಲಿ, ಹವಾಮಾನ ಬಲಪಡಿಸಲು ವಿಪತ್ತುಗಳ ಮೂಲಸೌಕರ್ಯಗಳ ಸ್ಥಿತಿಸ್ಥಾಪಕತ್ವಕ್ಕಾಗಿ (CDRI) ಬಹುಪಾಲುದಾರರ ಒಕ್ಕೂಟವನ್ನು ಪ್ರಧಾನಮಂತ್ರಿ ಸ್ಥಾಪಿಸಿದರು. CDRI ಅನ್ನು ಸ್ಥಾಪಿಸಿದ್ದಕ್ಕಾಗಿ ಭಾರತವನ್ನು ಅಮೆರಿಕ ಶ್ಲಾಘಿಸಿದೆ ಮತ್ತು ಬೆಂಬಲಿಸಲು ಬದ್ಧತೆ ತೋರಿದೆ.
ಹೊಸ ಮತ್ತು ಸುಧಾರಿತ ಬಹುಪಕ್ಷೀಯತೆಯಲ್ಲಿ ಭಾರತದ ಧ್ವನಿಯು ಅತ್ಯಂತ ಬಲವಾಗಿದೆ. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳನ್ನು ಸುಧಾರಿಸಲು ಮತ್ತು ಪುನಶ್ಚೇತನಗೊಳಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಜಿ-20 ಒಕ್ಕೂಟದ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಮುಖ್ಯಸ್ಥರನ್ನು ಒತ್ತಾಯಿಸಿದ್ದರು. ಏಪ್ರಿಲ್ನಲ್ಲಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್ಎಸ್ಸಿ) ಅನ್ನು ಉದ್ದೇಶಿಸಿ, ಭಾರತೀಯ ಖಾಯಂ ಪ್ರತಿನಿಧಿ ಮಾತನಾಡಿ ಇದರ ಬಗ್ಗೆ ಆಕ್ಷೇಪ ಎತ್ತಿ ಇದು “ಅನಾಕ್ರೊನಿಸ್ಟಿಕ್” ಎಂದು ಹೇಳಿದ್ದಾರೆ. ಯುಎನ್ಎಸ್ಸಿಯ ಐದು ಖಾಯಂ ಸದಸ್ಯರ ವ್ಯವಸ್ಥೆಯನ್ನು ಟೀಕಿಸಿದರು. ವಿಶ್ವಸಂಸ್ಥೆ ಮತ್ತು ಬ್ರೆಟ್ಟನ್ ವುಡ್ಸ್ ಸಂಸ್ಥೆಗಳ ಕೂಲಂಕಷ ಪರಿಷ್ಕರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದು ಅತಿ ನಿರ್ಣಾಯಕವಾಗಿದೆ.
ಕಳೆದ ಒಂಬತ್ತು ವರ್ಷಗಳು ತೀವ್ರವಾದ ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಜಾಗತಿಕ ಸಾಂಕ್ರಾಮಿಕ, ಪ್ರಾದೇಶಿಕ ಆಕ್ರಮಣಗಳು ಮತ್ತು ಆರ್ಥಿಕ ಹಿಂಜರಿತಗಳಿಂದ ಸಮಸ್ಯೆಗಳು ಉಲ್ಬಣಗೊಂಡಿದೆ. ಈ ಅವಧಿಯಲ್ಲಿ ಭಾರತ-ಅಮೆರಿಕ ಸಂಬಂಧವು ಸ್ಥಿರವಾಗಿ, ಬಲವಾಗಿ ಬೆಳೆದಿದೆ. ಇದು ನಿರ್ಣಾಯಕ ತಂತ್ರಜ್ಞಾನದ ಮೇಲಿನ ದ್ವಿಪಕ್ಷೀಯ ಉಪಕ್ರಮ, ಪ್ರಮುಖ ಸನ್ನಿಹಿತ ರಕ್ಷಣಾ ಒಪ್ಪಂದ ಮತ್ತು ಕ್ವಾಡ್ಗೆ ಸಮಾನವಾದ ದೃಷ್ಟಿಕೋನಗಳಿಂದ ಸೂಚಿಸಲ್ಪಟ್ಟಿದೆ.
ಪ್ರಧಾನಿ ಮೋದಿ ವಿಶ್ವಸಂಸ್ಥೆಗೆ ಭೇಟಿ ನೀಡಿ, ಅಧ್ಯಕ್ಷ ಬೈಡೆನ್ ಅವರನ್ನು ಭೇಟಿಯಾಗುತ್ತಿದ್ದಂತೆ, ಅವರ ಕಾರ್ಯಸೂಚಿಯಲ್ಲಿ ಪ್ರಮುಖವಾಗಿ ಅಂತಾರಾಷ್ಟ್ರೀಯತೆ ಮತ್ತು ಬಹುಪಕ್ಷೀಯತೆಯ ಪುನರುಜ್ಜೀವನವನ್ನು ಉತ್ತೇಜಿಸುವ ಅವಶ್ಯಕತೆಯಿದೆ ಮತ್ತು ಇದು ಎಲ್ಲರೂ ಬಯಸುವ ಬದಲಾವಣೆಯ ಹಾದಿಗೆ ನಾಂದಿಯಾಗಲಿದೆ.
ದೆಹಲಿ ಮೂಲದ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ದಕ್ಷಿಣ ಏಷ್ಯಾದ ಪ್ರಮುಖ ಲಾಭರಹಿತ ನೀತಿ ಸಂಶೋಧನಾ ಸಂಸ್ಥೆಯಾಗಿದೆ. ಇದು ಸ್ವತಂತ್ರ ಜಾಗತಿಕ ಥಿಂಕ್ ಟ್ಯಾಂಕ್ ಆಗಿದೆ. ಈ ಸಂಸ್ಥೆಯು ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಮೂರು ಕೇಂದ್ರಗಳನ್ನು ಹೊಂದಿದೆ. ಒಆರ್​ಎಫ್​ ಭಾರತ ಸರ್ಕಾರದಲ್ಲಿ ನೀತಿ ಮತ್ತು ನಿರ್ಧಾರ ತೆಗೆದುಕೊಳ್ಳುವವರಿಗೆ ಮತ್ತು ಭಾರತದ ರಾಜಕೀಯ ಮತ್ತು ಉದ್ಯಮ ಸಮುದಾಯಗಳಿಗೆ ಸಮರ್ಥವಾಗಿ ಕಾರ್ಯಸಾಧ್ಯವಾದ ಸಲಹೆಗಳನ್ನು ನೀಡುತ್ತದೆ.
ಸಿಕ್ಕಸಿಕ್ಕ ಲಿಂಕ್ ಮೇಲೆ ಒತ್ತಿದರೆ ಕನ್ನ ಗ್ಯಾರಂಟಿ: ಸೇವಾಸಿಂಧು ಹೆಸರಿನಲ್ಲಿ ನಕಲಿ ವೆಬ್​ಸೈಟ್/ಲಿಂಕ್ ಸೃಷ್ಟಿಸಿ ಹರಿಬಿಟ್ಟ ಸೈಬರ್ ಕಳ್ಳರು

ಬೈಡೆನ್​ ಭೋಜನಕೂಟದಲ್ಲಿ ಬಗೆ ಬಗೆಯ ಖಾದ್ಯ: ಪ್ರಧಾನಿ ಮೋದಿಗಾಗಿ ಸಿದ್ಧವಾದ ಊಟ ಮೆನು ಹೀಗಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − 10 =
Remember me
