ಚಂಡೀಗಢ :ಬಾಲಕಿಯೊಬ್ಬಳಿಗೆ ಕಿರುಕುಳ ಕೊಡುತ್ತಿದ್ದ ಯುವಕನಿಗೆ ಬುದ್ಧಿ ಹೇಳಲು ಹೋದವನನ್ನು ಇರಿದು ಕೊಂದಿರುವ ಘಟನೆ ಹರಿಯಾಣದ ರೋಹ್ಟಕ್ ನಗರದಿಂದ ವರದಿಯಾಗಿದೆ. ಬಾಕ್ಸರ್​, ಮಾಡೆಲ್​ ಮತ್ತು ನಟನಾಗಿದ್ದ 24 ವರ್ಷದ ಕಾಮೇಶ್ ಎಂಬುವ ಮೃತ ದುರ್ದೈವಿ.
ರೋಹ್ಟಕ್​ನ ತೇಜ್​ ಕಾಲನಿಯಲ್ಲಿ ವಾಸಿಸುತ್ತಿದ್ದ ಕಾಮೇಶ್​, ಅದೇ ಪ್ರದೇಶದ ನಿವಾಸಿಯಾಗಿದ್ದ 12 ವರ್ಷದ ಬಾಲಕಿಯೊಬ್ಬಳನ್ನು ಖದೀಮನೊಬ್ಬ ಚುಡಾಯಿಸುತ್ತಾ ಕಿರುಕುಳ ನೀಡುವುದನ್ನು ನೋಡಿದ್ದ. ಜೂನ್​ 7 ರ ರಾತ್ರಿ ತನ್ನ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಆ ವ್ಯಕ್ತಿಯನ್ನು ಕಂಡಾಗ, ದುರ್ವರ್ತನೆಯನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾನೆ. ದಿಢೀರನೇ ಚಾಕು ಎಳೆದ ಆತ, ಕಾಮೇಶ್​ನನ್ನು ಹಲವು ಬಾರಿ ಇರಿದಿದ್ದಾನೆ.
ಇದನ್ನೂ ಓದಿ:ಜೂನ್ 15ರಿಂದ ಬಾಲಿವುಡ್​ನಲ್ಲಿ ಸಿನಿಮಾ ಶೂಟಿಂಗ್​ ಶುರು; ಸ್ಯಾಂಡಲ್​ವುಡ್​ನಲ್ಲಿ ಯಾವಾಗ?
ಗಂಭೀರವಾಗಿ ಗಾಯಗೊಂಡ ಕಾಮೇಶ್​ನನ್ನು ನಗರದ ಪಿಜಿಐಎಂಎಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಪ್ಪಿದ ಎಂದು ಡಿಎಸ್ಪಿ ಗೋರಖಪಾಲ್ ಹೇಳಿದ್ದಾರೆ. ರೋಹ್ಟಕ್​ ಪೊಲೀಸರು ಕೇಸು ದಾಖಲಿಸಿದ್ದು, ಆರೋಪಿಯ ಹುಡುಕಾಟದಲ್ಲಿದ್ದಾರೆ.(ಏಜೆನ್ಸೀಸ್)
ತಾಲ್ಲೂಕು-ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸೌಲಭ್ಯ : ಮೇಲ್ದರ್ಜೆ ಕಾರ್ಯಕ್ಕೆ 1,500 ಕೋಟಿ ರೂ. ಮಂಜೂರು

ಫಿಟ್​ನೆಸ್​ ಬಯಸುವವರಿಗೆ ಮಲೈಕಾ ಸಲಹೆ – ನೌಕಾಸನ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 13 =
Remember me
