ನವದೆಹಲಿ:ಕ್ರಿಕೆಟ್​​ ಕ್ರೇಜ್​ ಎಷ್ಟರ ಮಟ್ಟಿಗೆ ಇದೆ ಎಂದರೆ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ದೇಶಾದ್ಯಂತ ಅಭಿಮಾನಿಗಳು ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸುತ್ತಿದ್ದಾರೆ. ಬುಧವಾರ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಅನ್ನು 70 ರನ್‌ಗಳಿಂದ ಸೋಲಿಸುವ ಮೂಲಕವಾಗಿ ಫೈನಲ್​ಗೆ ಹೆಜ್ಜೆ ಇಟ್ಟಿದೆ.ಇಂದು ಗೆದ್ದ ತಂಡದ ಜೊತೆ ಭಾರತ ಫೈನಲ್ ಆಡಲಿದೆ. ಹೀಗಾಗಿ ಭಾರತದ ಬಹುತೇಕ ಕ್ರಿಕೆಟ್ ಪ್ರಿಯರು ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಈ ಎರಡು ತಂಡದಲ್ಲಿ ಯಾವ ತಂಡ ಫೈನಲ್‌ಗೆ ಬಂದರೆ ಒಳ್ಳೆಯದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹೀಗಿರುವಾಗ ಓರ್ವ ಅಪ್ಪಟ ಕ್ರಿಕೆಟ್ ಪ್ರೇಮಿಯೊಬ್ಬನ ಕ್ರಿಕೆಟ್ ಪ್ರೇಮ ವೈರಲ್ ಆಗಿದೆ.
ಥಾಣೆಯ ವ್ಯಕ್ತಿಯೊಬ್ಬರು ಪಂದ್ಯ ನಡೆಯುತ್ತಿರುವ ವೇಳೆಯೇ ಪ್ರಾರ್ಥನೆ ಆಗರಬತ್ತಿ ಕಡ್ಡಿಯನ್ನು ಸ್ವಿಗ್ಗಿಯಲ್ಲಿ ತರಿಸಿ, ತಾವು ಕ್ರಿಕೆಟ್ ನೋಡುತ್ತಿದ್ದ ಟಿವಿ ಮುಂದೆಯೇ ಹೊತ್ತಿಸಿ ಇಟ್ಟಿದ್ದಾರೆ. ಈ ವಿಚಾರ ಈಗ ವೈರಲ್ ಆಗಿದೆ. ಜನ ಸ್ವಿಗ್ಗಿ ಪೋಸ್ಟ್‌ಗೆ ಕಾಂಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
haan bhay that someone from thane mai hi hoon. poore ilaake mein itna manifest karenge ki poora ilaaka dhuaan dhuaan ho jaayega 😤https://t.co/l8zDNYqI6zpic.twitter.com/IXJ6AO3c5R
— gordon (@gordonramashray)November 15, 2023

ನಿನ್ನೆ ನಡೆದ ಭಾರತ ನ್ಯೂಜಿಲ್ಯಾಂಡ್ ಪಂದ್ಯಾವಳಿ ವೇಳೆ ಭಾರತ ಗೆಲುವಿಗಾಗಿ ಪ್ರಾರ್ಥನೆ ಮಾಡಲು ಬರೋಬ್ಬರಿ 240 ಅಗರಬತ್ತಿ ಪ್ಯಾಕ್‌ಗಳನ್ನು ಆರ್ಡರ್ ಮಾಡಿದ್ದಾರೆ. ಅಲ್ಲದೇ ಸ್ಟೀಲ್ ಪ್ಲೇಟೊಂದರ ಮೇಲೆ ಅಲೂಗಡ್ಡೆಯೊಂದನ್ನು ಅರ್ಧ ಕತ್ತರಿಸಿ ಅದಕ್ಕೆ ಹೊತ್ತಿಸಿದ ಅಗರಬತ್ತಿಗಳನ್ನು ಸಿಕ್ಕಿಸಿ ಇಟ್ಟಿರುವ ಫೋಟೋವನ್ನು ಸ್ವಿಗ್ಗಿ ಪೋಸ್ಟ್‌ ಮಾಡಿ ಸಾಮಾಜಿಕ ಜಾಲತಾಣ ಟ್ವಿಟ್‌(ಎಕ್ಸ್‌)ನಲ್ಲಿ ಹಂಚಿಕೊಂಡಿದ್ದು, ನಿಮ್ಮ ಜೊತೆ ನಾವು ಪ್ರಾರ್ಥನೆ ಮಾಡುವುದಾಗಿ ಹೇಳಿತ್ತು. ಈ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ.
ನಿನ್ನೆ ಭಾರತ ತಂಡ ನ್ಯೂಜಿಲ್ಯಾಂಡ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಹೈವೋಲ್ಟೆಜ್‌ ಪಂದ್ಯ ವೀಕ್ಷಣೆಗೆ ಹಲವು ಗಣ್ಯರು ಆಗಮಿಸಿದ್ದರು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿ ಭಾರತ ಭಾರತ ತಂಡ ನ್ಯೂಜಿಲ್ಯಾಂಡ್ ಅನ್ನು 70 ರನ್‌ಗಳಿಂದ ಸೋಲಿಸಿದೆ. ಈ ಮೂಲಕವಾಗಿ ವಿಶ್ವಕಪ್​​ ಗೆಲುವಿಗೆ ಇನ್ನು ಒಂದೇ ಹೆಜ್ಜೆ ಬಾಕಿ ಇದೆ.
ಏಕದಿನ ವಿಶ್ವಕಪ್ 2023; ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
