ನವದೆಹಲಿ:ಭಾರತದಲ್ಲಿ ಸದ್ಯ ನಿಷೇಧವಾಗಿರುವ ಅಲೈಕ್ಸ್​ಪ್ರೆಸ್ ಆನ್​ಲೈನ್ ಶಾಪಿಂಗ್ ಕಾರಣಕ್ಕೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಭಾರತದಲ್ಲಿ ಲಭ್ಯವಿಲ್ಲದ ಕೆಲವು ವಸ್ತುಗಳನ್ನು ಇಲ್ಲಿ ಅಗ್ಗದ ಬೆಲೆಯಲ್ಲಿ ಆರ್ಡರ್ ಮಾಡಬಹುದಾಗಿತ್ತು. ಇದೀಗ ದೆಹಲಿ ಮೂಲದ ಟೆಕ್ಕಿಯೊಬ್ಬರು ಅಲೈಕ್ಸ್​ಪ್ರೆಸ್ ಶಾಪಿಂಗ್ ಬಗ್ಗೆ ಆಶ್ಚರ್ಯಕರ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ದೆಹಲಿ ಮೂಲದ ಟೆಕ್ಕಿಯೊಬ್ಬರು ಅಲೈಕ್ಸ್​​ಪ್ರೆಸ್ ಶಾಪಿಂಗ್ ತಾಣದ ಮೂಲಕ ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಆದರೆ ನಿಗದಿತ ದಿನಾಂಕ ಕಳೆದಿದ್ದರೂ, ಆರ್ಡರ್ ಮಾತ್ರ ಕೈಸೇರಿರಲಿಲ್ಲ. ಹೀಗಾಗಿ ಏನೋ ಸಮಸ್ಯೆಯಾಗಿದೆ ಎಂದುಕೊಂಡು, ಟೆಕ್ಕಿ ಸುಮ್ಮನಾಗಿದ್ದರು. ಇದಾಗಿ ಕೆಲ ಸಮಯ ಕಳೆಯುತ್ತಿದ್ದಂತೆ ಭಾರತದಲ್ಲಿ ಅಲೈಕ್ಸ್​ಪ್ರೆಸ್ ತಾಣ ನಿಷೇಧವಾಗಿದೆ.
ಇದನ್ನೂ ಓದಿ:ಈತನ ಬೈಕ್ ಬೆಲೆ 85 ಸಾವಿರ ರೂ.; ಕಟ್ಟಬೇಕಿದೆ 70,000 ರೂ. ದಂಡ!
ನಿತಿನ್ ಅಗರ್ವಾಲ್ ಅಲಿ ಬಾಬಾ ಒಡೆತನದ ಅಲೈಕ್ಸ್‌ಪ್ರೆಸ್‌ನಿಂದ 2019ರಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದ್ದು, ಇದೀಗ ನಾಲ್ಕು ವರ್ಷಗಳ ವಸ್ತು ಕೈಸೇರಿದೆ. ಈ ಬಗ್ಗೆ ಟ್ಚೀಟ್ ಮಾಡಿ ತಿಳಿಸಿದ್ದಾರೆ. ಜತೆಗೆ ತಡವಾಗಿ ಆರ್ಡರ್ ಕೈಸೇರಿರುವು ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ‘ಎಂದಿಗೂ ಭರವಸೆ ಕಳೆದುಕೊಳ್ಳದಿರಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
Never lose hope! So, I ordered this from Ali Express (now banned in India) back in 2019 and the parcel was delivered today.pic.twitter.com/xRa5JADonK— Tech Bharat (Nitin Agarwal) (@techbharatco)June 21, 2023
Never lose hope! So, I ordered this from Ali Express (now banned in India) back in 2019 and the parcel was delivered today.pic.twitter.com/xRa5JADonK
ನಿತಿನ್ ಅಗರ್ವಾಲ್ ಅಲೈಕ್ಸ್‌ಪ್ರೆಸ್​ನ್ನು ಭಾರತದಲ್ಲಿ ನಿಷೇಧಿಸುವ ಮೊದಲು ಶಾಪಿಂಗ್ ಮಾಡಿದ್ದರು. ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರವು 2020ರಲ್ಲಿ 58 ಚೀನೀ ಆ್ಯಪ್​ಗಳನ್ನು ನಿಷೇಧಿಸಿತ್ತು. ಅವುಗಳಲ್ಲಿ ಅಲೈಕ್ಸ್‌ಪ್ರೆಸ್ ಕೂಡಾ ಒಂದಾಗಿದೆ. ನಿತಿನ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
