ನವದೆಹಲಿ:ಜುಹು ಬೀಚ್​ನಲ್ಲಿ ಸಲ್ಮಾನ್ ಖಾನ್​ ಎಂಬ ಯುವಕನೊಬ್ಬ 42 ಬಾರಿ ಬ್ಯಾಕ್​ಫ್ಲಿಪ್​ ಮಾಡಿ ಸಾಹಸ ಮೆರೆದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನ ಸಾಹಸ ನೋಡಿದ ನೆಟ್ಟಿಗರು ‘ವಾವ್’ ಎಂದು ಹೇಳುತ್ತಿದ್ದಾರೆ.
ಬ್ಯಾಕ್​ಫ್ಲಿಪ್ ಮಾಡುವುದು ಅತ್ಯಂತ ಸಾಹಸದ ಕೆಲಸ. ಸಾಮಾನ್ಯವಾಗಿ ಎಲ್ಲರೂ 3-4 ಬಾರಿ ಬ್ಯಾಕ್​ಫ್ಲಿಪ್ ಮಾಡುತ್ತಾರೆ. ಸತತ ಅಭ್ಯಾಸ ಮತ್ತು ನೈಪುಣ್ಯತೆಯಿಂದ ಇದ್ದಾಗ ಮಾತ್ರ ಬ್ಯಾಕ್​ಫ್ಲಿಪ್ ಮಾಡುಲು ಸಾಧ್ಯವಾಗುತ್ತದೆ. ಈ ವೇಳೆ ಸ್ವಲ್ಪ ಎಡವಿದರೂ ಕುತ್ತಿಗೆ, ಬೆನ್ನುಮೂಳೆಗೆ ಗಂಭೀರ ಗಾಯವಾಗುವ ಸಾಧ್ಯತೆ ಇರುತ್ತದೆ. ಹೀಗಿದ್ದಾಗ ಯಾರೇ ಆದರೂ ಬ್ಯಾಕ್​ಫ್ಲಿಪ್ ಮಾಡುವ ವೇಳೆ ಒಂದು ಕ್ಷಣ ಹಿಂದೆ ಮುಂದೆ ಯೋಚಿಸುತ್ತಾರೆ.
ಇದೀಗ ಸಲ್ಮಾನ್ ಖಾನ್ ಬರೋಬ್ಬರಿ 42 ಬಾರಿ ಬ್ಯಾಕ್​ಫ್ಲಿಪ್ ಮಾಡಿ ತನ್ನ ಸಾಹಸ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದಾನೆ. ಈ ವಿಡಿಯೋವನ್ನು ಸಲ್ಮಾನ್ ಖಾನ್ ಎಂಬಾತ ತನ್ನ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದೀಗ ಈ ವಿಡಿಯೋವನ್ನು 42 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ಅಲ್ಲದೇ ಯುವಕನ ಸಾಹಸವನ್ನು ಮೆಚ್ಚಿಕೊಂಡಿದ್ದಾರೆ.
ಅಥ್ಲೀಟ್ ಆಗಿರುವ ಸಲ್ಮಾನ್ ಖಾನ್ ಈ ಹಿಂದೆಯೂ ಸಾಕಷ್ಟು ಬಾರಿ ಜಿಮ್ನ್ಯಾಸ್ಟಿಕ್ ಮಾದರಿಯ ಸಾಹಸ ಪ್ರದರ್ಶಿಸಿದ್ದಾನೆ. ಇದೀಗ ಈ ವಿಡಿಯೋವನ್ನು ಹಂಚಿಕೊಂಡು, ನಾನು ಎಷ್ಟು ಬಾರಿ ಬ್ಯಾಕ್​ಫ್ಲಿಪ್ ಮಾಡಿದ್ದೇನೆ ಎಂದು ಲೆಕ್ಕ ಹಾಕಿ ಎಂದಿದ್ದಾನೆ. ಅಲ್ಲದೇ ಮುಂದಿನ ಬಾರಿ ಇನ್ನುಷ್ಟು ಶಕ್ತಿಯೊಂದಿಗೆ ಬ್ಯಾಕ್​ಫ್ಲಿಪ್ ಮಾಡುತ್ತೇನೆ ಎಂದಿದ್ದಾನೆ.
A post shared by Salman khan (@sal.insane)


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
