ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಲೈಕ್ಸ್​, ಶೇರ್​ ಮತ್ತು ಖ್ಯಾತಿ ಗಳಿಸಲು ಅನೇಕ ಮಂದಿ ಎಲ್ಲ ರೀತಿಯ ಮೂರ್ಖತನವನ್ನು ಕೆಲವೊಮ್ಮೆ ಪ್ರದರ್ಶನ ಮಾಡುತ್ತಾರೆ. ಕೆಲವರಂತೂ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಹೋಗುತ್ತಾರೆ. ಆದರೆ, ನಮ್ಮ ಜೀವವನ್ನಾಗಲಿ ಅಥವಾ ಇತರೆ ವ್ಯಕ್ತಿಗಳ ಪ್ರಾಣವನ್ನಾಗಲಿ ತೊಂದರೆಗೆ ಸಿಲುಕಿಸುವುದು ಒಳ್ಳೆಯದಲ್ಲ.
ಜಾಲತಾಣದಲ್ಲಿ ಸದ್ಯ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್​ ಹಿಂಬದಿಯಲ್ಲಿ ಪತ್ನಿಯನ್ನು ಕೂರಿಸಿ ಅಪಾಯಕಾರಿ ಸಾಹಸ ಮಾಡಿದ್ದಾನೆ. ಹೆಲ್ಮೆಟ್​ ಧರಿಸದೇ ರಾಯಲ್​ ಎನ್​ಫೀಲ್ಡ್​ ಬೈಕ್ ಸವಾರಿ ಮಾಡುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ, ಅಪಾಯಕಾರಿ ಸಾಹಸ ಮೂಲಕ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. ಆತನ ಪತ್ನಿ ಸಹ ಹೆಲ್ಮೆಟ್​ ಧರಿಸಿರಲಿಲ್ಲ.
ಪತ್ನಿ ಹಿಂದೆ ಕುಳಿತುರುವಾಗ ಹ್ಯಾಂಡಲ್​ಗಳನ್ನು ಬಿಟ್ಟು, ಚಲಿಸುವ ಬೈಕ್​ ಮೇಲೆಯೇ ಎದ್ದು ನಿಂತ ಅಪಾಯಕಾರಿ ಸಾಹಸ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು Ghantaa ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. 1 ಲಕ್ಷಕ್ಕೂ ಅಧಿಕ ಲೈಕ್​ಗಳನ್ನು ಗಿಟ್ಟಿಸಿಕೊಂಡಿದೆ.
ಕಾಮೆಂಟ್​ಗಳ ಮಹಾಪೂರವೇ ಹರಿದುಬರುತ್ತಿದೆ. ಕೆಲವರು ಬೈಕ್​ ಸವಾರನ ಗಾಢನಂಬಿಕೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಬೈಕ್​ ಸವಾರನನ್ನು ಟೀಕಿಸಿದ್ದಾರೆ. ಪತ್ನಿಯ ಜೀವವನ್ನು ಪಣಕ್ಕಿಟ್ಟಿದ್ದಕ್ಕೆ ಕಿಡಿಕಾರಿದ್ದಾರೆ.(ಏಜೆನ್ಸೀಸ್​)
A post shared by memes comedy (@ghantaa)

ಮಧ್ಯರಾತ್ರಿ ರೈತರ ಮನೆಗಳಿಗೆ ನುಗ್ಗಿ ಮನಬಂದಂತೆ ಥಳಿಸಿದ ಪೊಲೀಸರು: ಸವಿನಿದ್ದೆಯಲ್ಲಿದ್ದವರ ಮೇಲೆ ದೌರ್ಜನ್ಯ

ಗೌರಿಬಿದನೂರಿನ ರೈಲ್ವೆ ಹಳಿ ಮೇಲೆ ಪತ್ತೆಯಾದ ಮೂವರ ಮೃತದೇಹ ತಂದೆ, ತಾಯಿ, ಮಗಳದ್ದು ಎಂಬುದು ದೃಢ

ಕಾಂಗ್ರೆಸ್​ನ ಬಸ್ ಯಾತ್ರೆ ವ್ಯರ್ಥ ಕಸರತ್ತು: ಸಚಿವ ಗೋವಿಂದ ಕಾರಜೋಳ ಗೇಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
