ಹೈದರಾಬಾದ್​:ವ್ಯಾಲೆಟ್​ ಪಾರ್ಕಿಂಗ್​ ಸಿಬ್ಬಂದಿಯಂತೆ ಪೋಸ್​ ನೀಡಿ ಖದೀಮನೊಬ್ಬ 1 ಕೋಟಿ ರೂಪಾಯಿ ಮೌಲ್ಯದ ಎರಡು BMW ಕಾರುಗಳನ್ನು ಕದ್ದು ಪರಾರಿಯಾಗಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ಬೌಲ್ಡರ್​ ಹಿಲ್ಸ್​ನಲ್ಲಿ ನಡೆದಿದೆ.
ಖ್ಯಾತ ಗಾಯಕ ಬಾದ್​ ಷಾ ಅವರ ಲೈವ್​ ಕಾನ್​ಸರ್ಟ್​ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ಹೆಸರು ಅರುಣ್​ ರೆಡ್ಡಿ ಎಂದು ತಿಳಿದು ಬಂದಿದ್ದು, ಈತ ವೆಬ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ಧಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಶಿಲ್ಪವಲ್ಲಿ BMW ಕಾರುಗಳ ಮೇಲಿನ ಅತಿಯಾದ ಒಲವಿನಿಂದ ಈ ರೀತಿ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಜೂನ್​ 24ರಂದು ಆರೋಪಿಯೂ ಬಾದ್​ ಷಾ ಅವರ ಲೈವ್​ ಕಾನ್​ಸರ್ಟ್​ನಲ್ಲಿ ವ್ಯಾಲೆಟ್​ ಪಾರ್ಕಿಂಗ್​ ಸಿಬ್ಬಂದಿಯಂತೆ ಪೋಸ್​ ನೀಡಿ BMW z4 ಹಾಗೂ X5 ಕಾರುಗಳನ್ನು ಕದ್ದು ಪರಾರಿಯಾಗಿದ್ದ.
ಇದನ್ನೂ ಓದಿ:VIDEO| ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮ: ರಾಮಲಿಂಗಾರೆಡ್ಡಿ
ಕಾರುಗಳನ್ನು ಕದ್ದ ಬಳಿಕ ಅದನ್ನು ಐಷಾರಾಮಿ ಹೋಟೆಲ್​ ಒಂದರಲ್ಲಿ ಪಾರ್ಕಿಂಗ್​ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಮಾಲೀಕರು ನೀಡಿದ ದೂರನ್ನು ಆಧರಿಸಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಶನಿವಾರ ಬೆಳಗ್ಗೆ ಕಾರನ್ನು ಪಾರ್ಕಿಂಗ್​ ಲಾಟ್​ನಿಂದ ತೆಗೆದುಕೊಂಡು ಹೋಗಲು ಬಂದಾಗ ಆರೋಪಿಯನ್ನು ಬಂಧಿಸಿದ್ದಾಗಿ ಡಿಸಿಪಿ ಶಿಲ್ಪವಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಯೂ ಕಳೆದ ವರ್ಷವೂ ಕೂಡ ಪ್ರತಿಷ್ಠಿತ ಪಬ್​ ಒಂದರಿಂದ ಐಷಾರಾಮಿ ಕಾರನ್ನು ಕದ್ದು ಅದರ ನಂಬರ್​ ಪ್ಲೇಟ್​ ಬದಲಾಯಿಸಿ ತಿರುಗುತ್ತಿದ್ದ. ಆ ಕಾರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಸಂಬಂಧಪಟ್ಟವರನ್ನು ಹುಡುಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
