ಕೊಲ್ಕತ :ಐಎಎಸ್​ ಅಧಿಕಾರಿಯ ಸೋಗುಹಾಕಿ ನಕಲಿ ಕರೊನಾ ಲಸಿಕಾ ಶಿಬಿರವನ್ನು ಆಯೋಜಿಸಿ ಟಿಎಂಸಿ ಸಂಸದೆ ನಟಿ ಮಿಮಿ ಚಕ್ರಬೊರ್ತಿ ಸೇರಿದಂತೆ ನೂರಾರು ಜನರಿಗೆ ವಂಚಿಸಿದ್ದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಕೊಲ್ಕತದ ಕಸ್ಬಾ ನಿವಾಸಿ ದೇಬಂಜನ್ ದಾಸ್​ ಎಂಬುವ ಬಂಧಿತ ಆರೋಪಿ.
ಆರೋಪಿಯು ಕೊಲ್ಕತ ಮುನಿಸಿಪಲ್ ಕಾರ್ಪೊರೇಷನ್(ಕೆಎಂಸಿ)​ನ ಜಂಟಿ ಆಯುಕ್ತ ಎಂದು ಹೇಳಿಕೊಂಡು ಲಸಿಕಾ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಹೇಳಿದ್ದ. ಅದರಂತೆ ಜನರಿಗೆ ಪ್ರೇರಣೆ ನೀಡಲು ಸಂಸದೆ ಮಿಮಿ ಚಕ್ರಬೋರ್ತಿ ಅವರನ್ನು ಆಹ್ವಾನಿಸಿದ್ದು, ಆಕೆ ಕೂಡ ಕೋವಿಶೀಲ್ಡ್​ ಲಸಿಕೆ ಪಡೆದು ಜನರನ್ನು ಪ್ರೋತ್ಸಾಹಿಸಿದ್ದರು. ಆದರೆ ಸರ್ಕಾರದ ಕೋವಿನ್​ ಪೋರ್ಟಲ್​ನಿಂದ ಯಾವುದೇ ಸರ್ಟಿಫಿಕೇಟ್ ಬಾರದಾಗ ಕೆಎಂಸಿಯಲ್ಲಿ ವಿಚಾರಿಸಿದಾಗ ಆ ರೀತಿಯ ಅಧಿಕಾರಿ ಇಲ್ಲ ಎಂಬುದು ಗೊತ್ತಾಯಿತು ಎಂದು ಮಿಮಿ ತಮ್ಮ ದೂರಿನಲ್ಲಿ ಹೇಳಿದ್ದರು.
ಇದನ್ನೂ ಓದಿ:ಜಿಯೋ ಸಂಸ್ಥೆಯಿಂದ ಬರಲಿದೆ ಗಣೇಶ ಚತುರ್ಥಿ ಗಿಫ್ಟ್​! ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ ಬಿಡುಗಡೆಗೆ ಸಿದ್ಧತೆ
ಆರೋಪಿ ದೇಬಂಜನ್ ದೇವ್​ನನ್ನು ಗುರುತಿಸಿ ಬಂಧಿಸಿರುವ ಕೊಲ್ಕತ ಪೊಲೀಸರು, ಆತ ಈ ರೀತಿಯ ನಕಲಿ ಲಸಿಕಾ ಶಿಬಿರಗಳನ್ನು ಮುಂಚೆಯೂ ಮಾಡಿರುವನೆಂದು ತಿಳಿಸಿದ್ದಾರೆ. ಲಸಿಕಾ ಕಾರ್ಯಕ್ರಮ ನಡೆದಲ್ಲಿಂದ ಪಡೆದ ಲಸಿಕೆ ವಯಲ್​ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆತ ಬಳಸಿದ್ದ ಕಾರನ್ನು ಜಪ್ತಿಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ

ಲಸಿಕೆ ಹಾಕಿಸಿಕೊಳ್ಳಲ್ಲ ಅಂದ್ರೆ ಭಾರತಕ್ಕೆ ಇಲ್ಲ ಅಮೆರಿಕಕ್ಕೆ ಹೋಗಿ : ಫಿಲಿಪೈನ್ಸ್​ ಅಧ್ಯಕ್ಷ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two − 1 =
Remember me
