ಅಹಮದ್‌ನಗರ:ತೆರಿಗೆ ಇಲಾಖೆ ಮತ್ತು ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ನಡೆದಿದೆ.ಸಂತೋಷ್ ಆತ್ಮರಾಮ್ ರಾಥೋಡ್(35) ಬಂಧಿತ ಆರೋಪಿಯಾಗಿದ್ದು, ಬಾಡಿಗೆ ವಸತಿಗೃಹದಲ್ಲಿ ತನ್ನ ಗೆಳತಿಯೊಂದಿಗೆ ತಂಗಿದ್ದ. ಬಂಧಿತನಿಂದ ಭಾರತೀಯ ಗುಪ್ತಚರ ಸಂಸ್ಥೆಯ ರಾ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಅಧಿಕಾರಿ ನಕಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.ಇದನ್ನೂ ಓದಿ:ಎರಡನೇ ಮದುವೆಗೆ ಅಡ್ಡಿಯಾದರೆಂದು ತನ್ನ ಇಬ್ಬರು ಹೆಣ್ಣು ಮಕ್ಕಳನ್ನೇ ಕೊಂದ ಪಾಪಿ ತಂದೆನಕಲಿ ಗುರುತಿನ ಚೀಟಿಯಲ್ಲಿ ಆಂತರಿಕ ಭದ್ರತೆಯ ಉಪ ಕಾರ್ಯದರ್ಶಿ ಹುದ್ದೆ ಜತೆಗೆ ಈತನ ಕೋಡ್ ನೇಮ್ ಚಾಣಕ್ಯ ಎಂದು ನಮೂದಿಸಲಾಗಿದೆ. ಅಹ್ಮದ್‌ನಗರದ ಶೇವ್‌ಗಾಂವ್‌ನಲ್ಲಿ RAWನ ಏಜೆಂಟ್‌ನಂತೆ ನಟಿಸುತ್ತಿರುವ ವ್ಯಕ್ತಿಯ ಉಪಸ್ಥಿತಿಯ ಬಗ್ಗೆ ಮಿಲಿಟರಿ ಗುಪ್ತಚರ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಸುಳಿವು ನೀಡಿದ್ದರು.ಈ ಮಾಹಿತಿಯನ್ನು ಬೆನ್ನಟ್ಟಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತ ಆದಾಯ ತೆರಿಗೆ ಇಲಾಖೆ, ಸಶಸ್ತ್ರ ಪಡೆ ಹಾಗೂ ಇತರೆ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಈತ ಸ್ಥಳೀಯರಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 11 =
Remember me
