ಕೊಚ್ಚಿ:ಕ್ಯಾನ್ಸರ್​ ಇದೆ ಅಂತ ನಾಟಕವಾಡಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಖತರ್ನಾಕ್​ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಜು ಎಂದು ಗುರುತಿಸಲಾಗಿದೆ. ತಾನು ಕ್ಯಾನ್ಸರ್​ನಿಂದ ಬಳಲುತ್ತಿರುವುದಾಗಿ ಹಳೆಯ ವಿದ್ಯಾರ್ಥಿಗಳ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಬಿಜು ಮೆಸೇಜ್ ಮಾಡಿದ್ದ. ಬಳಿಕ ಧ್ವನಿ ಬದಲಾಯಿಸಿಕೊಂಡು​ ತಾನು ಬಿಜು ಅವರ ಅಂಕಲ್​ ಎಂದು ಪರಿಚಯ ಮಾಡಿಕೊಂಡಿದ್ದ. ಧ್ವನಿ ಬದಲಾಯಿಸಲು ಮೊಬೈಲ್​ ಅಪ್ಲಿಕೇಶನ್​ ಬಳಸಿದ್ದ. ಮಾತು ನಂಬಿದ ಕ್ಲಾಸ್​ಮೇಟ್ಸ್​ ಸುಮಾರು 10.5 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿದ್ದರು.
ಇದನ್ನೂ ಓದಿ: ಕೈಲಾಸ ದೇಶಕ್ಕಾಗಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ
ಇದಾದ ಬಳಿಕ ಹೆಣ್ಣಿನ ಧ್ವನಿಯಲ್ಲಿ ಶಿಕ್ಷಕರಿಗೆ ಕರೆ ಮಾಡಿ, ತಾನು ಬಿಜು ಅವರ ಸಹೋದರಿ ಎಂದು ಹೇಳಿಕೊಂಡು ನೆರವು ಕೋರಿದ್ದ. ಶಿಕ್ಷಕರು ಸಹ ಮಾತು ನಂಬಿ ಹಣ ನೀಡಿದ್ದರು. ಒಟ್ಟು 15 ಲಕ್ಷ ರೂಪಾಯಿಯನ್ನು ಬಿಜು ವಸೂಲಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಆಸ್ಪತ್ರೆಯ ವೈದ್ಯಕೀಯ ದಾಖಲೆಗಳನ್ನು ಸಹ ಪೋರ್ಜರಿ ಮಾಡಿರುವ ಬಿಜು ಅದನ್ನು ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಶೇರ್​ ಮಾಡಿದ್ದ. ಬಳಿಕ ಚಿಕಿತ್ಸೆಗೆ ಹಣ ನೀಡುವಂತೆ ಕೇಳಿದ್ದ. ಇದಾದ ಬಳಿಕ ವಿಡಿಯೋ ಕಾಲ್​ ಮಾಡುದಂತೆ ಕ್ಲಾಸ್​ಮೇಟ್​ಗಳು ಅಂಕಲ್​ಗೆ ಕೇಳಿದ್ದರು. ಅದೇ ದಿನ ರಾತ್ರಿ ವಿಡಿಯೋ ಕಾಲ್​ ಮಾಡಿದ ಬಿಜು ಮುಖವನ್ನು ಮುಚ್ಚಿಕೊಂಡು ಮಾತನಾಡಿದ್ದ. ಇದು ಕ್ಲಾಸ್​ಮೇಟ್​ಗಳ ಅನುಮಾನಕ್ಕೆ ಕಾರಣವಾಯಿತು. ನಂತರ ಅಂಕಲ್​ ನಂಬರ್‌ಗೆ ಕರೆ ಮಾಡಿದಾಗ ಬಿಜು ಮೃತಪಟ್ಟಿದ್ದಾನೆ ಎಂಬ ಉತ್ತರ ಬಂದಿತು.
ಈ ಮಧ್ಯೆ ಕ್ಲಾಸ್​ಮೇಟ್​ ಒಬ್ಬರು ಬಿಜು ಅವರನ್ನು ತೊಡುಪುಳದಲ್ಲಿ ಭೇಟಿಯಾದರು. ಬಿಜು ಹೊಸ ಕಾರೊಂದನ್ನು ಖರೀದಿಸಿರುವುದು ಆತನಿಗೆ ಗೊತ್ತಾಗಿ, ತಾವು ವಂಚನೆಗೆ ಒಳಗಾಗಿರುವುದು ಅರಿವಾಯಿತು. ಇದಾದ ಬಳಿಕ ಕ್ಲಾಸ್​ಮೇಟ್​ ಎಲ್ಲರೂ ಸೇರಿ ಸಹಿ ಮಾಡಿ ತೊಡುಪುಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಿವೈಎಸ್ಪಿ ಎಂ.ಆರ್.ಮಧುಬಾಬು ನೇತೃತ್ವದ ತಂಡ ಬಿಜುನನ್ನು ಬಂಧಿಸಿದೆ.
ಇದನ್ನೂ ಓದಿ:ಫುಟ್​​​ಬಾಲ್​ ತಂಡದ ಮುಖ್ಯಸ್ಥೆ ಜತೆ ಇಂಗ್ಲೆಂಡ್ ಮಹಿಳಾ ತಂಡದ​ ಸ್ಟಾರ್​ ಕ್ರಿಕೆಟರ್ ನಿಶ್ಚಿತಾರ್ಥ!
ಚೆರ್ತಾಲ ಮೂಲದ ಬಿಜು, ಮದುವೆಯ ನಂತರ ಮುಳಪ್ಪುರಂಗೆ ಬಂದಿದ್ದರು. ಆತ ಎರಡು ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದು, ಒಂದು ಮುಲಪ್ಪುರಂ ವಿಳಾಸ ಮತ್ತು ಇನ್ನೊಂದು ಆಲಪ್ಪುಳ ವಿಳಾಸದಲ್ಲಿದೆ. ಅಲಪ್ಪುಳದ ಆಧಾರ್ ಕಾರ್ಡ್‌ನಲ್ಲಿ ಬಿಜು ಚೆಲ್ಲಪ್ಪನ್ ಎಂಬ ಹೆಸರಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಈ ಘಟನೆ ಯಾರನ್ನು ನಂಬುದು ಯಾರನ್ನು ಬಿಡುವುದು ಎಂಬ ಮಾತಿಗೆ ಕನ್ನಡಿಯಂತಿದೆ.(ಏಜೆನ್ಸೀಸ್​)
ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಅಂತ ಹೇಳೋಕ್ಕಾಗಲ್ಲ: ಸಚಿವ ಮಾಧುಸ್ವಾಮಿ ಸಮರ್ಥನೆ

ಕಿಚ್ಚನ ಮುಂದಿನ ಸಿನಿಮಾ ಬಿಲ್ಲ ರಂಗ ಬಾಷ! ಅನೂಪ್​ ಭಂಡಾರಿ ಕೊಟ್ಟ ಸುಳಿವಿಗೆ ಸುದೀಪ್​ ಫ್ಯಾನ್ಸ್​ ದಿಲ್​ ಖುಷ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
