ಬ್ರಿಸ್​ಬೇನ್​​:ಆಸ್ಟ್ರೇಲಿಯಾದ ಪ್ರಸಿದ್ಧ ಕ್ರೀಡಾಂಗಣವಾದ ಗಬ್ಬಾದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್​ ತಂಡಗಳು ಫೀಲ್ಡ್​ನಲ್ಲಿ ಭಾರೀ ಸೆಣಸಾಟ ನಡೆಸುತ್ತಿದ್ದವು. ಅದೇ ಸಮಯದಲ್ಲಿ ವೀಕ್ಷಕರ ಅಂಗಳದಲ್ಲಿ ಜನರು ಬೇರೊಂದು ವಿಚಾರವಾಗಿ ಕುತೂಹಲಕ್ಕೆ ಬಿದ್ದಿದ್ದರು. ಏಕೆಂದರೆ, ಇಂಗ್ಲೆಂಡ್​ ತಂಡದ ಅಭಿಮಾನಿಯೊಬ್ಬ ಆಸೀಸ್ ಅಭಿಮಾನಿಗೆ ವಿವಾಹ ಪ್ರಸ್ತಾವನೆ ನೀಡಿದ್ದ.
ಆಶಸ್​ ಟೆಸ್ಟ್​ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ಇಂಗ್ಲೆಂಡ್​ ತಂಡದ ಬೆಂಬಲಿಗನಾದ ರಾಬ್​​ ಕ್ರಿಕೆಟ್​ನಿಂದಲೇ 4 ವರ್ಷಗಳ ಹಿಂದೆ ಪರಿಚಯವಾದ ತನ್ನ ಗರ್ಲ್​ಫ್ರೆಂಡ್​ ನ್ಯಾಟ್​ಗೆ ಮಂಡಿಯೂರಿ ಪ್ರಪೋಸ್​​ ಮಾಡಿದ್ದಾನೆ. ಇವರತ್ತ ಎಲ್ಲ ಪ್ರೇಕ್ಷಕರ ಕಣ್ಣು ಬಿದ್ದಂತೆಯೇ ಸ್ಟೇಡಿಯಂನ ಬೃಹತ್​ ಸ್ಕ್ರೀನ್​ನಲ್ಲಿ ‘ಡಿಸಿಷನ್​ ಪೆಂಡಿಂಗ್​’ ಎಂಬ ಸಂದೇಶ ಮೂಡಿಬಂದಿತು. ಕೈಯಲ್ಲಿ ಉಂಗುರ ಹಿಡಿದು ಒಟ್ಟಿಗೆ ಜೀವನ ಕಳೆಯುವ ತನ್ನಾಸೆಯನ್ನು ರಾಬ್​​ ಹೇಳಿಕೊಂಡ ತಕ್ಷಣ ಆಕೆ ಒಪ್ಪಿಗೆ ಸೂಚಿಸಿ ತಬ್ಬಿಕೊಂಡು ಕಿಸ್​ ಮಾಡಿದ್ದಾಳೆ.
She said yes! How good!pic.twitter.com/Mc7erNaeYO
— 7Cricket (@7Cricket)December 10, 2021

ಈ ಪ್ರೇಮಿಗಳ ಪ್ರಸಂಗವನ್ನು ಸೆವೆನ್​ ಕ್ರಿಕೆಟ್​ ಕ್ರೀಡಾ ಸುದ್ದಿ ಪೋರ್ಟಲ್​ ಟ್ವಿಟರ್​ ಮೂಲಕ ಶೇರ್​ ಮಾಡಿದ್ದು, “ಅವಳು ಹೂಂ ಎಂದಳು.. ಎಷ್ಟು ಸೊಗಸು” ಎಂದು ಕ್ಯಾಪ್ಷನ್​ ನೀಡಿದ್ದಾರೆ. ಇಂಗ್ಲೆಂಡ್​ ತಂಡದ ಟಿ-ಶರ್ಟ್​ ತೊಟ್ಟ ರಾಬ್​ ಕ್ರೀಡಾಂಗಣದಲ್ಲೇ ಆಸ್ಟ್ರೇಲಿಯಾದ ಜೆರ್ಸಿ ತೊಟ್ಟ ನ್ಯಾಟ್​​ಗೆ ಪ್ರೇಮದುಂಗುರ ತೊಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.(ಏಜೆನ್ಸೀಸ್)
ತಾಯಿ-ಮಗಳಿಗೆ ಒಟ್ಟಿಗೆ ಬಲೆ ಬೀಸಿದವನ ದುರಂತ ಅಂತ್ಯ; ಮೂವರ ಬಂಧನ

ವೈರಲ್​ ಆಗ್ತಿವೆ ವಿಕಿ-ಕತ್ರಿನಾ ‘ಮದುವೆ’ ಫೋಟೋಗಳು!

Sign in to your account
Please enter an answer in digits:16 − seven =
Remember me
