ಕುಲ್ಗಾಮ್​:ಮನೆ ಮಾರಾಟಕ್ಕಿದೆ, ವಧು/ವರ ಬೇಕಾಗಿದ್ದಾಳೆ, ನಿವೇಶನ ಖಾಲಿ ಇದೆ ಎನ್ನುವಂತಹ ಜಾಹೀರಾತುಗಳನ್ನು ದಿನಪತ್ರಿಕೆಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಮನುಷ್ಯ ಮಾತ್ರ ತನ್ನ ಕಿಡ್ನಿಯೇ ಮಾರಾಟಕ್ಕಿದೆ ಎಂದು ಹಾಹೀರಾತು ನೀಡಿದ್ದಾನೆ. ಆತ ಈ ರೀತಿ ಜಾಹೀರಾತು ನೀಡಿರುವ ಹಿಂದೆ ದೊಡ್ಡದೊಂದು ನೋವಿನ ಕಥೆಯಿದೆ.
ಇದನ್ನೂ ಓದಿ:ಅಪ್ಪ ಜೈಲಿನಲ್ಲಿ, ಅಮ್ಮ ಇನ್ನೆಲ್ಲೋ! ನಾಯಿ ಜತೆ ರಸ್ತೆಗೆ ಬಿದ್ದ ಬಾಲಕನ ಮನಕಲಕುವ ಕಥೆ
ಕಾಶ್ಮೀರದ ಕುಲ್ಗಾಮ್​ ನಿವಾಸಿ ಸಬ್ಜರ್ ಅಹ್ಮದ್ ಖಾನ್(28) ಈ ರೀತಿ ಜಾಹೀರಾತು ನೀಡಿರುವ ವ್ಯಕ್ತಿ. ಈತ ಕುಲ್ಗಾಮ್​ನಲ್ಲಿ ಕಾರಿನ ಸೇಲ್ಸ್​ಮೆನ್​ ಆಗಿ ಕೆಲಸ ಮಾಡುತ್ತಿದ್ದಾನೆ. ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದು ಮಾಡಿದ ನಂತರ ನಿಷೇಧಾಜ್ಞೆ ಹೇರಲಾಗಿತ್ತು. ಅದು ಮುಗಿದು ಕೆಲವೇ ತಿಂಗಳಲ್ಲಿ ಕರೊನಾ ಲಾಕ್​ಡೌನ್ ಜಾರಿ ಮಾಡಲಾಯಿತು. ಇದೇ ಕಾರಣದಿಂದಾಗಿ ಸುಮಾರು ತಿಂಗಳುಗಳಿಂದ ಸಬ್ಜರ್​ನ ವ್ಯವಹಾರ ಸ್ಥಗಿತವಾಗಿದೆ. ಬಿಜಿನೆಸ್​ನಲ್ಲಿ ಸಂಪೂರ್ಣ ನಷ್ಟವಾಗಿದೆ.
ಆದ ನಷ್ಟವನ್ನು ತುಂಬಿಸುವ ಸಲುವಾಗಿ ಸಬ್ಜರ್​ ಬ್ಯಾಂಕ್​ನಲ್ಲಿ 61 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆ. ಉಳಿದಂತೆ ಸ್ನೇಹಿತರು, ಪರಿಚಯಸ್ಥರ ಬಳಿ 30 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆ. ಒಟ್ಟು 91 ಲಕ್ಷ ರೂಪಾಯಿ ಸಾಲ ಬಾಕಿಯಿದೆ. ಇದೀಗ ಸಾಲದ ಹೊರೆ ಹೆಚ್ಚಾಗಿದ್ದು, ಅದನ್ನು ತೀರಿಸಲು ಯಾವುದೇ ಮಾರ್ಗ ಉಳಿದಿಲ್ಲ. ಅದೇ ಕಾರಣದಿಂದಾಗಿ ನನ್ನ ಕಿಡ್ನಿ ಮಾರಲು ಮುಂದಾಗಿದ್ದೇನೆ ಎಂದು ಆತ ತಿಳಿಸಿದ್ದಾನೆ.
ಇದನ್ನೂ ಓದಿ:15 ಸಾವಿರ ರೂ. ಬಿಲ್​ಗೆ 36 ಲಕ್ಷ ಟಿಪ್ಸ್​ ಕೊಟ್ಟ ಭೂಪ! ವೇಟರ್​ ಈಗ ಫುಲ್​ ಖುಷ್​!
ಈತನ ಜಾಹೀರಾತನ್ನು ನೋಡಿ ಹಲವರು ಕಿಡ್ನಿ ಬೇಕೆಂದು ಕರೆ ಮಾಡಿದ್ದಾರಂತೆ. ಒಬ್ಬ ವ್ಯಕ್ತಿ 20 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರೆ, ಇನ್ನೊಬ್ಬ 25 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಾನಂತೆ. ಆದರೆ ಇನ್ನೂ ಒಳ್ಳೆಯ ಆಫರ್​ ಬರಬಹುದು ಎಂದು ಕಾಯುತ್ತಿರುವುದಾಗಿ ಸಬ್ಜರ್​ ಹೇಳಿದ್ದಾನೆ. (ಏಜೆನ್ಸೀಸ್​)
ಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು! ಉಕ್ರೇನ್​, ರಷ್ಯಾದ ಮಕ್ಕಳಿಗೂ ಉಸಿರು ನೀಡಿದ ಬಾಲಕ

ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − three =
Remember me
