ತಿರುವನಂತಪುರ: ಮನೆ ಮಾರಾಟಕ್ಕಿದೆ, ಸೈಟ್​ ಮಾರಾಟಕ್ಕಿದೆ, ತೋಟ ಮಾರಾಟಕ್ಕಿದೆ ಎಂದೆಲ್ಲ ಜಾಹೀರಾತು ಫಲಕ ನೇತು ಹಾಕುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಕಿಡ್ನಿ-ಲಿವರ್ ಮಾರಾಟಕ್ಕಿದೆ ಜಾಹೀರಾತು ಫಲಕ ನೇತು ಹಾಕಿರುವುದು ಗಮನ ಸೆಳೆದಿದೆ. ಮಾತ್ರವಲ್ಲ, ಇದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಇದನ್ನೂ ಓದಿ:ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ
ಕೇರಳದ ತಿರುವನಂತಪುರದ 50 ವರ್ಷದ ವ್ಯಕ್ತಿ ಸಂತೋಷ್​ಕುಮಾರ್ ಎಂಬಾತ ಈ ಜಾಹೀರಾತು ಪ್ರದರ್ಶಿಸಿದ್ದಾನೆ. ಈತ ತನಗೆ ಸಂಬಂಧಿಸಿದ ವಿವಾದಿತ ಕಟ್ಟಡದಲ್ಲೇ ಈ ಫಲಕ ಹಾಕಿದ್ದು, ಅದರಲ್ಲಿ ಸಂಪರ್ಕಕ್ಕಾಗಿ ಎರಡು ಮೊಬೈಲ್​ಫೋನ್​ ನಂಬರ್​ಗಳನ್ನೂ ಹಾಕಿದ್ದಾನೆ. ಇದು ಸಾರ್ವಜನಿಕರ ಮೊಬೈಲ್​ಫೋನ್​ಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.
ಇದನ್ನೂ ಓದಿ:ಸರ್ಕಾರಕ್ಕೆ ಮತ್ತೊಂದು ತಲೆನೋವು; ಇನ್ನೊಂದು ಸರ್ಕಾರಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ
ಹಣ್ಣಿನ ಅಂಗಡಿ ಇಟ್ಟುಕೊಂಡಿರುವ ಸಂತೋಷ್​ ಕುಮಾರ್ ಅಲ್ಲಿ ಅತಿಯಾದ ಭಾರವನ್ನು ಎತ್ತುವಾಗ ಅವಘಡಕ್ಕೆ ಒಳಗಾಗಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಅದಕ್ಕಾಗಿ ಚಿಕಿತ್ಸೆಗೆ ದುಬಾರಿ ಖರ್ಚು ಮಾಡಬೇಕಾಗಿದೆ. ಚಿಕಿತ್ಸೆ ಖರ್ಚಿಗೆ ಬೇಕಾದ ಹಣವನ್ನು ಆಸ್ತಿ ಮಾರಿ ಹೊಂದಿಸಬೇಕು ಎಂದುಕೊಂಡ ಸಂತೋಷ್​ಗೆ ಆತನ ಸಹೋದರ ತಕರಾರು ತೆಗೆದಿದ್ದಾನೆ. ಹೀಗಾಗಿ ಆತ ಆ ಮೂಲಕ ಹಣ ಹೊಂದಿಸುವುದು ಸಾಧ್ಯವಾಗಿಲ್ಲ. ಸಂತೋಷ್​ ಪತ್ನಿ ಟ್ಯೂಷನ್​ ನೀಡಿ ಜೀವನ ನಿರ್ವಹಿಸುತ್ತಿದ್ದು, ಆಕೆಯ ಬಳಿಯೂ ಹಣವಿಲ್ಲ. ಹೀಗಾಗಿ ಕೊನೆಗೆ ಬೇರೆ ದಾರಿ ಇಲ್ಲದೆ ಆ ವಿವಾದಿತ ಕಟ್ಟಡದ ಮೇಲೇ ಕಿಡ್ನಿ-ಲಿವರ್​ ಮಾರಾಟಕ್ಕಿದೆ ಎಂಬ ಫಲಕ ಹಾಕಿದ್ದಾನೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − 2 =
Remember me
