ಮುಂಬೈ :ಗಂಡಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಅದನ್ನು ಪೂರ್ಣ ರೀತಿಯಲ್ಲಿ ನಿರೂಪಿಸುವಂಥ ಪ್ರಸಂಗವೊಂದು ಮುಂಬೈನಲ್ಲಿ ನಡೆದಿದೆ. ಹೆಂಡತಿಯೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಪುರುಷನೊಬ್ಬ ತನ್ನ ಮಕ್ಕಳಿಗೆ ಐಸ್​ಕ್ರೀಮಿನಲ್ಲಿ ಇಲಿ ಪಾಷಾಣ ಬೆರೆಸಿ ನೀಡಿರುವ ಘಟನೆ ವರದಿಯಾಗಿದೆ.
ಮುಂಬೈನ ಮನ್​​ಖುರ್ದ್​ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಅಲಿ ನೌಶಾದ್​ ಎಂಬುವ ಜೂನ್ 25 ರ ಶುಕ್ರವಾರ ಜಗಳದ ನಂತರ ತನ್ನ ಇಬ್ಬರು ಗಂಡು ಮಕ್ಕಳಿಗೆ ಮತ್ತು ಒಬ್ಬ ಹೆಣ್ಣುಮಗುವಿಗೆ ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಸೇರಿಸಿ ನೀಡಿದ್ದಾನೆ. ಇದನ್ನು ತಿಂದ 5 ವರ್ಷದ ಆಲಿಶಾನ್ ಅಲಿ ಮೊಹಮ್ಮದ್​ ಅಸುನೀಗಿದ್ದರೆ, 7 ವರ್ಷದ ಅಲೀನಾ ಮತ್ತು 2 ವರ್ಷದ ಅರ್ಮಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಆಘಾತಕಾರಿ ಕೃತ್ಯದ ಬಗ್ಗೆ ಆರೋಪಿಯ ಹೆಂಡತಿಯು ದೂರು ನೀಡಿದ್ದು, ಮೊಹಮ್ಮದ್​ ಅಲಿ ನೌಶಾದ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆದಿದೆ.(ಏಜೆನ್ಸೀಸ್)
ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನ

ಆಲ್ಫಾ, ಡೆಲ್ಟಾ ರೂಪಾಂತರಿಗಳ ಮೇಲೆ ಕೋವಾಕ್ಸಿನ್​ ಪರಿಣಾಮಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
