ಅಹಮದಾಬಾದ್​ :ಗುಜರಾತ್​ನ ಭಾವ್​ನಗರ್​ ಜಿಲ್ಲೆಯಲ್ಲಿ ಪುರುಷನೊಬ್ಬ ಹೆತ್ತ ಮಗಳನ್ನೇ ಬಲಾತ್ಕಾರ ಮಾಡಿ ಗರ್ಭಿಣಿಯಾಗಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ಹೋದ ಯುವತಿಯು ಮಗುವಿಗೆ ಜನ್ಮ ನೀಡಿದ ನಂತರ ತನ್ನ ತಂದೆಯ ದುಷ್ಕೃತ್ಯವನ್ನು ಹೇಳಿಕೊಂಡಿದ್ದಾಳೆ.
ಕೊಳಗೇರಿಯ ನಿವಾಸಿಯಾದ 19 ವರ್ಷದ ಯುವತಿಯು ಜೂನ್ 9 ರಂದು ಅನಾರೋಗ್ಯದಿಂದಾಗಿ ಭಾವ್​ನಗರ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಾದಳು. ವೈದ್ಯರು ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿರುವುದು ಪತ್ತೆಯಾಗಿದ್ದು, ಗಂಡುಮಗುವಿಗೆ ಜನ್ಮ ನೀಡಿದಳು. ಮಗುವಿನ ತಂದೆ ಯಾರೆಂದು ಕೇಳಿದಾಗ ತನ್ನ ಅಪ್ಪನೇ ಅನೇಕ ಬಾರಿ ತನ್ನ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ್ದರ ಬಗ್ಗೆ ತಿಳಿಸಿದಳು. ತಾಯಿ ಮನೆಯಲ್ಲಿಲ್ಲದಾಗ ಅಥವಾ ಅವಳು ಮಲಗಿರುವಾಗ ಮತ್ತೆ ಮತ್ತೆ ಬಲಾತ್ಕಾರ ಮಾಡಿ ಬಸಿರಾಗಿಸಿರುವುದು ತಿಳಿದುಬಂತು ಎನ್ನಲಾಗಿದೆ.
ಇದನ್ನೂ ಓದಿ:ಡೇಟಿಂಗ್​ ಆ್ಯಪ್​ ಮೂಲಕ ಪುಸಲಾಯಿಸಿ ಕರೆದರು, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದರು!
ಅತ್ಯಾಚಾರದ ಆರೋಪದಡಿ ಯುವತಿಯ ತಂದೆಯನ್ನು ಭಾವ್​ನಗರ್​ ಪೊಲೀಸರು ಬಂಧಿಸಿದ್ದಾರೆ. ಆತ ದಿನಗೂಲಿ ಕಾರ್ಮಿಕನಾಗಿದ್ದು, ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ದೊಡ್ಡ ಮಗಳು ಮತ್ತು ಗಂಡುಮಕ್ಕಳಿಗೆ ಮದುವೆಯಾಗಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಚಿಕ್ಕಮಗಳಾದ ಸಂತ್ರಸ್ತ ಯುವತಿ ಮತ್ತು ತನ್ನ ಪತ್ನಿಯೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)
ಈ ಬಾರಿಯೂ ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪ್ರವೇಶವಿಲ್ಲ

ಕರೊನಾ ಔಷಧಿ, ಅಗತ್ಯವಸ್ತುಗಳ ಮೇಲೆ ಜಿಎಸ್​ಟಿ ಕಡಿತ; ಯಾವುದಕ್ಕೆ ಎಷ್ಟೆಷ್ಟು ಇಲ್ಲಿದೆ ವಿವರ

ಬಾರಾತ್​​ನಲ್ಲಿ ಆನೆ ತಂದ ವರ… ಪಟಾಕಿ-ಓಲಗದ ಭರಾಟೆಗೆ ಕಾದಿತ್ತು ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
