ರಾಜಸ್ಥಾನ:ಬಕ್ರೀದ್ (Bakrid) ಹಬ್ಬದ ಹಿನ್ನೆಲೆ ಹಲವೆಡೆ ಕುರಿಗಳ ಖರೀದಿ ಭಾರಿ ಜೋರಾಗಿ ನಡೆಯುತ್ತಿದ್ದು, ಈ ವೇಳೆ ರಾಜಸ್ಥಾನದಲ್ಲಿ ಕುರುಬನ ಬಳಿಯಿದ್ದ ಕುರಿಗೆ 1 ಕೋಟಿ ರೂ. ಕೊಡುತ್ತೇವೆ ಎಂದು ಜನರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ವ್ಯಕ್ತಿ ನಿರಾಕರಿಸಿರುವುದು ಇದೀಗ ಹಲವರಿಗೆ ಶಾಕ್ ನೀಡಿದೆ.
ಇದನ್ನೂ ಓದಿ:ತಹಶೀಲ್ದಾರ್​ ಮನೇಲಿ ಸಿಕ್ತು ಲೀಟರ್​​ಗಟ್ಟಲೆ ಮದ್ಯ!; ಲೋಕಾಯುಕ್ತ ದಾಳಿ ವೇಳೆ ಪತ್ತೆ
ಘಟನೆಯ ವಿವರ:ರಾಜಸ್ಥಾನದ (Rajasthan) ಚುರು ಜಿಲ್ಲೆಯ ಕುರುಬನೊಬ್ಬ ಸಾಕಿದ್ದ ಕುರಿಮರಿಗಾಗಿ ಜನರು 70 ಲಕ್ಷ ರೂ. ರಿಂದ 1 ಕೋಟಿ ರೂ. ಹಣವನ್ನು ನೀಡಲು ಆತನ ಮನೆ ಮುಂದೆ ದೌಡಾಯಿಸಿದ್ದಾರೆ. ಆದ್ರೆ, ವ್ಯಕ್ತಿ ಮಾತ್ರ ತನ್ನ ಕುರಿಯನ್ನು ಕೊಡುವುದಿಲ್ಲ, ಎಷ್ಟೇ ಕೋಟಿ ಹಣ ಕೊಟ್ಟರು ನೀಡುವುದಿಲ್ಲ ಎಂದು ಹೇಳುವ ಮೂಲಕ ನಿರಾಕರಿಸಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದೆ!
ಕುರಿಯ ಹೊಟ್ಟೆಯ ಭಾಗದಲ್ಲಿ ವಿಶೇಷವಾಗಿ ‘786’ ಅಂಕಿ ಇರುವ ಕಾರಣಕ್ಕೆ ಕುರುಬ ಇದನ್ನು ಕೊಡಲು ನಿರಾಕರಿಸಿದ್ದಾನೆ. ಈ ಕುರಿ ಇದೀಗ ಒಂದು ಹಳ್ಳಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕುರಿ ದೇಹದ ಮೇಲಿರುವ ಅಂಕಿಗಳ ಅರ್ಥವೇನೆಂದು ತನಗೆ ತಿಳಿದಿಲ್ಲ ಎಂದು ಕುರುಬ ರಾಜು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಮಂಗಳೂರಿನ ಹರ್ಷಲ್‌ಸ್ಮಿತ ಅವರಿಗೆ ಮಿಸೆಸ್ ಇಂಡಿಯಾ-ಮಿಸೆಸ್ ಮಂಗಳೂರು ಟೈಟಲ್ ಪ್ರಶಸ್ತಿ
ಈ ಪ್ರಾಣಿಯು ನನಗೆ ತುಂಬಾ ಪ್ರೀತಿ ನೀಡಿದೆ. ಜನರು ಕುರಿಗಾಗಿ 70 ಲಕ್ಷದಿಂದ-1 ಕೋಟಿ ರೂ. ಹಣವನ್ನು ಮೀರಿ ಕೊಡಲು ಮುಂದಾಗುತ್ತಿದ್ದಾರೆ. ಆದರೆ ಇದನ್ನು ಮಾರಾಟ ಮಾಡಲು ನನ್ನಿಂದ ಸಾಧ್ಯವಿಲ್ಲ! ಕುರಿಗೆ ದಾಳಿಂಬೆ, ಪಪ್ಪಾಯಿ, ಬಿಂದೋಲ, ರಾಗಿ ಮತ್ತು ಹಸಿರು ತರಕಾರಿಗಳನ್ನು ನೀಡಲಾಗುತ್ತದೆ. ಸದ್ಯ ಭದ್ರತಾ ಕಾರಣಗಳಿಂದಾಗಿ ಕುರಿಯನ್ನು ತನ್ನ ಮನೆಯೊಳಗೆ ಇಟ್ಟುಕೊಳ್ಳಲು ಪ್ರಾರಂಭಿಸಿದ್ದೇನೆ ಎಂದು ರಾಜು ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್).

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
