ತಮಿಳುನಾಡು ಪ್ರೀಮಿಯರ್​ ಲೀಗ್ಪಂದ್ಯದಲ್ಲಿ ಬ್ಯಾಟ್ಸ್​ಮನ್​ ಹೊಡೆದ ಸಿಕ್ಸರ್​ ಸ್ಟೇಡಿಯಂನಿಂದ ಹೊರಗೆ ಬಿದ್ದಿದ್ದು, ಅದನ್ನು ವಾಪಾಸ್​ ಕೊಡುವಂತೆ ಹೇಳಿದರೆ, ವ್ಯಕ್ತಿಯೊಬ್ಬ ಬಾಲ್ ಕೊಡದೆ ಓಡಿಹೋದ ದೃಶ್ಯವೊಂದು​ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:ಜಮ್ಮು-ಜೋಧ್‌ಪುರ ಎಕ್ಸ್​​ಪ್ರೆಸ್​​ಗೆ ಬಾಂಬ್ ಬೆದರಿಕೆ: ರೈಲು ಸಂಚಾರ ಸ್ಥಗಿತ.. ಮುಂದುವರಿದ ಶೋಧ ಕಾರ್ಯ
ಟಿಎನ್​ಪಿಲ್​ ಪಂದ್ಯದಲ್ಲಿ ಚೆಪಾಕ್ ಸೂಪರ್​ ಗಿಲ್ಲಿಸ್​ ತಂಡದ ಬ್ಯಾಟ್ಸ್​ಮನ್​ ಎದುರಾಳಿ ಟೀಮ್​ನ ವೇಗಿ ಎಸೆದ ಬಾಲ್​ಗೆ ಭರ್ಜರಿ ಸಿಕ್ಸ್ ಬಾರಿಸಿದರು. ಬ್ಯಾಟರ್​ ಹೊಡೆದ ಸಿಕ್ಸರ್​ ನೇರವಾಗಿ ಸ್ಟೇಡಿಯಂನಿಂದ ಹೊರಗೆ ಬಿದ್ದಿದೆ. ತಕ್ಷಣವೇ ಬಾಲ್ ತರಲು ಹೋದವರಿಗೆ ಹಿಂತಿರುಗಿಸಲು ನಿರಾಕರಿಸಿದ ಸ್ಥಳೀಯ ವ್ಯಕ್ತಿ, ಅಲ್ಲಿಂದ ಓಡಿಹೋಗಿದ್ದಾನೆ. ಇದು ಅನೇಕರಿಗೆ ನಗು ತರಿಸಿದರು ಕೆಲವರಿಗೆ ಮಾತ್ರ ತೀವ್ರ ಬೇಸರ ಮೂಡಿಸಿದೆ.
சார், சார் Ball-அ கொடுங்க சார்… 😅😆
📺 தொடர்ந்து காணுங்கள் TNPL | Chepauk Super Gillies vs Siechem Madurai Panthers | Star Sports தமிழில் மட்டும்#TNPLOnStar#TNPL2024#NammaOoruNammaGethu@TNPremierLeaguepic.twitter.com/1TmMTC2ywY
— Star Sports Tamil (@StarSportsTamil)July 28, 2024

ಕ್ಯಾಮರಾಗಳು ತನ್ನನ್ನು ಸೆರೆಹಿಡಿಯುತ್ತಿದೆ ಎಂದು ಗೊತ್ತಿದ್ದರೂ ಕೂಡ ಬಾಲ್ ಕೊಡಲು ನಿರಾಕರಿಸಿದ ಅನಾಮಧೇಯ ವ್ಯಕ್ತಿ, ಎಷ್ಟು ಹೇಳಿದರೂ ಕೂಡ ಬಾಲ್ ಹಸ್ತಾಂತರಿಸದೆ, ಏಕಾಏಕಿ ಓಡಿಹೋಗಿದ್ದಾನೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಟಿಎನ್​ಪಿಎಲ್​ ಫೈನಲ್​ ಇದೇ ಆಗಸ್ಟ್​ 02ರಂದು ನಡೆಯಲಿದೆ,(ಏಜೆನ್ಸೀಸ್).
ಟೀಮ್ ಇಂಡಿಯಾ ಹೆಡ್​ ಕೋಚ್​ಗೆ ಹೊಸ ಪಟ್ಟ! ಗೌತಿ ಕುರಿತು ಆ್ಯಂಡಿ ಫ್ಲವರ್​ ಗುಣಗಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
