ಕಾನ್ಪುರ (ಉತ್ತರ ಪ್ರದೇಶ):ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯಪಾನ ಸಿಗದೇ ಅನೇಕ ವ್ಯಸನಿಗಳು ಏನೆಲ್ಲಾ ಕಸರತ್ತು ಮಾಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಕೆಲವು ಧೂಮಪಾನಿಗಳು ಸದ್ದಿಲ್ಲದೇ ಹೇಗೇಗೋ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ.ಆದರೆ ಇದೀಗ ಪಾನ್‌ ಮಸಾಲಾ ಸರದಿ. ಪಾನ್‌ ಮಸಾಲಾ ವ್ಯಸನಿಗಳಿಗೆ ಡ್ರೋನ್‌ ಮೂಲಕ ಅದನ್ನು ಹಂಚಿಕೆ ಮಾಡಿ ಸಿಕ್ಕಿಬಿದ್ದ ಘಟನೆ ಕಳೆದ ವಾರ ಗುಜರಾತ್‌ನಲ್ಲಿ ನಡೆದಿತ್ತು. ಆದರೆ ಇದೀಗ ಪಾನ್‌ ಮಸಾಲಾ ಚಟಕ್ಕೆ ಕೊಲೆಯೊಂದು ನಡೆದುಹೋಗಿದೆ.ಹೌದು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಾನ್‌ ಮಸಾಲಾ ಅಂಗಡಿಯನ್ನು ತೆರೆಯುವುದಿಲ್ಲ ಎಂದು ಮಾರಾಟಗಾರ ಹೇಳಿದ ಕಾರಣದಿಂದ ಅದರ ಚಟಕ್ಕೆ ದಾಸನಾದ ವ್ಯಕ್ತಿಯೊಬ್ಬ ಮಾರಾಟಗಾರನ ಕೊಲೆ ಮಾಡಿದ್ದಾನೆ! ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ.ಇದೇ ಏಪ್ರಿಲ್‌ 14ರಂದು ಪ್ರೇಮ್‌ ನರೇನ್‌ ದಿವಾಕರ್‌ ಎನ್ನುವ ಪಾನ್‌ ಮಾರಾಟಗಾರನ ಮನೆಗೆ ಬಂದು ನಿತಿನ್‌ ಪಾಂಡೆ ಎಂಬಾತ ಪಾನ್‌ ಮಸಾಲಾ ಕೇಳಿದ್ದಾನೆ. ಪ್ರೇಮ್‌ ಅವರ ಮನೆಯ ಎದುರೇ ಅಂಗಡಿ ಇರುವ ಕಾರಣ, ಅದನ್ನು ತೆರೆದು ಪಾನ್‌ ಮಸಾಲಾ ನೀಡುವಂತೆ ಹೇಳಿದ್ದಾನೆ. ಆದರೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅಂಗಡಿ ಬಾಗಿಲು ತೆರೆಯುವುದಿಲ್ಲ ಎಂದು ಪ್ರೇಮ್‌ ಹೇಳಿದ್ದಾರೆ.ಮಾತಿಗೆ ಮಾತು ಬೆಳೆದಾಗ ಅಲ್ಲಿಯೇ ಇದ್ದ ಕಬ್ಬಿಣದ ರಾಡ್‌ನಿಂದ ನಿತಿನ್‌ ಪ್ರೇಮ್‌ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಕುಸಿದು ಬಿದ್ದ ಪ್ರೇಮ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರೇಮ್‌ ಮೃತಪಟ್ಟಿದ್ದಾರೆ. ಕೆಲ ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಅವನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven + 11 =
Remember me
