ಮುಂಬೈ:ಮಹಾರಾಷ್ಟ್ರದ ಅಹ್ಮದ್​ನಗರದ ಪ್ರಖ್ಯಾತ ಉರಗ ರಕ್ಷಕ ಸರ್ಪಮಿತ್ರ ಆಕಾಶ್ ಜಾಧವ್ ಅವರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಸುಮಾರು 13 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ಒಡಿಶಾದಲ್ಲಿ ರಕ್ಷಣೆ ಮಾಡಿದ್ದಾರೆ.
ಸರ್ಪಮಿತ್ರ ಆಕಾಶ್​ ಜಾಧವ್​ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಶೇರ್​ ಮಾಡಲಾಗಿದೆ. ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಒಡಿಶಾದ ನಯಾಗಢ ಜಿಲ್ಲೆಯ ಒಡಂಗಾವ್​ ತಾಲೂಕಿನ ಕುಸಪಂದೇರಿ ಗ್ರಾಮಕ್ಕೆ ಆಕಾಶ್​ ತಮ್ಮ ತಂಡದೊಂದಿಗೆ ತೆರಳಿ ಗ್ರಾಮದ ಹೊಲವೊಂದರಲ್ಲಿ ಅವಿತು ಕುಳಿತಿದ್ದ ಸರ್ಪವನ್ನು ರಕ್ಷಣೆ ಮಾಡಿದ್ದಾರೆ.
ಸುಮಾರು 18 ನಿಮಿಷದ ವಿಡಿಯೋದಲ್ಲಿ ಕಾಳಿಂಗ ಸರ್ಪವು ಆಕಾಶ್​ ಅವರನ್ನು ಕಚ್ಚಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದು, ತಮ್ಮ ಕೌಶಲ್ಯ ಮತ್ತು ಅನುಭವದಿಂದ ಆಕಾಶ್​ ಎಸ್ಕೇಪ್​ ಆಗುವ ರೋಚಕ ದೃಶ್ಯವನ್ನು ನೋಡಬಹುದಾಗಿದೆ.
ಹಾವನ್ನು ಹಿಡಿದ ಬಳಿಕ ಸ್ಥಳೀಯರಿಗೆ ಕಾಣುವಂತೆ ಹಾವನ್ನು ಬಿಟ್ಟು ಅದನ್ನು ಆಡಿಸುವಾಗ, ಹಾವು ಕೂಡ ಸ್ಥಳದಿಂದ ಪರಾರಿಯಾಗಲು ಯತ್ನಿಸಿದೆ. ಆದರೆ, ಸರ್ಪವನ್ನು ಹಿಡಿದು ಜನರಿಗೆ ಹಾವಿನ ಬಗ್ಗೆ ಮತ್ತು ಅದರ ವಿಷದ ಶಕ್ತಿಯ ಬಗ್ಗೆ ಆಕಾಶ್​ ಅವರು ಅರಿವು ಮೂಡಿಸಿದರು.
ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲದಂತೆ ಜನರ ಬಳಿ ಆಕಾಶ್​ ಮನವಿ ಮಾಡಿಕೊಂಡರು. ಕೊಲ್ಲುವ ಬದಲಾಗಿ ನಮಗೆ ಮಾಹಿತಿ ನೀಡಿ, ನಾವು ಬಂದು ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು. ಇದಾದ ಬಳಿಕ ರಕ್ಷಣೆ ಮಾಡಿದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.(ಏಜೆನ್ಸೀಸ್​)

ಏನಿದು ಡ್ರೋನ್​ ಪ್ರತಾಪನ ಹೊಸ ಅವತಾರ? ನೆಟ್ಟಿಗರ ಬಗೆಬಗೆಯ ಕಾಮೆಂಟ್​ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

ನೀವು ಉತ್ತೇಜಿಸುತ್ತಿರುವ ನಾರಿ ಶಕ್ತಿ ಇದೆನಾ? ಪತ್ನಿಯಿಂದ ಹಲ್ಲೆಗೊಳಗಾಗಿ ಪ್ರಧಾನಿ ಕಚೇರಿಗೆ ದೂರಿತ್ತ ಪತಿ

ಮೆಟ್ರೋದಲ್ಲಿ 1,669 ಕ್ಯೂಆರ್ ಕೋಡ್ ಟಿಕೆಟ್ ಬಳಕೆ: ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 18 =
Remember me
