ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್​​​​ ನ ರಾಜಮಲಾದ ಪೆಟ್ಟಿಮುಡಿ ಬೆಟ್ಟ ಕುಸಿದು, ಸುಮಾರು 70 ಮಂದಿ ಸಜೀವ ಸಮಾಧಿಯಾದ ಭೀಕರ ದುರಂತ ನಡೆದು ಸುಮಾರು 46 ದಿನಗಳು ಕಳೆದಿವೆ. ಆಗಸ್ಟ್​ 6ರಂದು ನಸುಕಿನಲ್ಲಿ ನಡೆದ ಬೆಟ್ಟ ಕುಸಿತದಲ್ಲಿ ಅದೆಷ್ಟೋ ಜನ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡವರು ಇದ್ದಾರೆ.
ಸ್ಥಳೀಯ ಆಡಳಿತ ನೀಡಿದ ಮಾಹಿತಿಯ ಪ್ರಕಾರ ಸುಮಾರು 70 ಮಂದಿ ಈ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ. ಆದರೆ ರಕ್ಷಣಾ ತಂಡಕ್ಕೆ ಇದುವರೆಗೆ 66 ಮೃತದೇಹಗಳನ್ನು ಮಾತ್ರ ಮಣ್ಣಿನಡಿಯಿಂದ ಹೊರತೆಗೆಯಲು ಸಾಧ್ಯವಾಗಿದೆ.ಇದನ್ನೂ ಓದಿ:ಯೂಟ್ಯೂಬ್​ನಿಂದ ನಾಪತ್ತೆಯಾಗಿದ್ದ ಕೋಲುಮಂಡೆ ಸಾಂಗ್ ಬದಲಾವಣೆಯೊಂದಿಗೆ ಮರು ಬಿಡುಗಡೆ
ಹೀಗಿರುವಾಗ ಇಲ್ಲೋರ್ವ ತಂದೆ ತನ್ನ 22 ವರ್ಷದ ಮಗನ ಮೃತದೇಹಕ್ಕಾಗಿ ಪ್ರತಿದಿನ ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.ಇದೊಂದು ಮನಕಲಕುವ ಘಟನೆ. ಷಣ್ಮುಗನಾಥನ್​ ಎಂಬುವರು ಕಳೆದ 45 ದಿನಗಳಿಂದ ಪ್ರತಿದಿನ ಪೆಟ್ಟಿಮುಡಿ ಬಳಿ ತೆರಳುತ್ತಿದ್ದಾರೆ. 22 ವರ್ಷದ ಮಗ ದಿನೇಶ್​​ಕುಮಾರ್​​ನನ್ನು ಇಲ್ಲಿಯೇ ಕಳೆದುಕೊಂಡಿರುವ ಅವರಿಗೆ ಆತನ ಶವ ಸಿಕ್ಕಿಲ್ಲ. ಅದನ್ನು ಹುಡುಕಲು ದಿನವೂ ಇಲ್ಲಿಗೆ ಬರುತ್ತಿದ್ದಾರೆ.
ಷಣ್ಮುಗಂ ಅವರ ಮನೆ ಇರುವುದು ಮುನ್ನಾರ್​​ನಲ್ಲಿ. ಇಲ್ಲಿಂದ 23 ಕಿ.ಮೀ.ದೂರದಲ್ಲಿರುವ ಪೆಟ್ಟುಮುಡಿಗೆ ದಿನವೂ ಒಂದು ಆಸೆ ಇಟ್ಟುಕೊಂಡು ಹೋಗುತ್ತಿದ್ದಾರೆ. ನನ್ನ ಮಗ ಈ ಕಲ್ಲುಮಣ್ಣುಗಳ ಅಡಿಯಲ್ಲಿ ನೆಮ್ಮದಿಯಾಗಿ ಮಲಗಿದ್ದಾನೆ. ನನಗೆ ಆತನ ಶವ ಒಂದಲ್ಲ ಒಂದು ದಿನ ಸಿಗಬಹುದು ಎಂಬ ನಂಬಿಕೆ ಇದೆ ಎಂದು ನೋವಿನಿಂದ ನುಡಿಯುತ್ತಾರೆ. 2021ರ ಜನವರಿಯವರೆಗೂ ಪ್ರತಿದಿನವೂ ಇಲ್ಲಿಗೆ ಬಂದು, ಪುತ್ರನ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತೇನೆ ಎಂದೂ ತಿಳಿಸಿದ್ದಾರೆ.ಇದನ್ನೂ ಓದಿ:ಸಂಬಂಧಿಯನ್ನು ನಂಬಿ ಮಕ್ಕಳನ್ನು ಬಿಟ್ಟು ಹೋದ ದಂಪತಿಗೆ ವಾಪಸ್​ ಬರುವಷ್ಟರಲ್ಲಿ ಕಾದಿತ್ತು ಆಘಾತ
ನನ್ನ ಮಗ ಇಲ್ಲಿಯೇ ಮೃತಪಟ್ಟಿದ್ದಾನೆ. 40 ದಿನಗಳ ಮೇಲಾದರೂ ಅವನ ಅಂತ್ಯಕ್ರಿಯೆ ಮಾಡಲಾಗದೆ ಮನಸಿಗೆಲ್ಲ ಕಸಿವಿಸಿ ಉಂಟಾಗುತ್ತಿದೆ. ರಾತ್ರಿ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.ಷಣ್ಮುಗನಾಥನ್​ ಅವರ ಮೊದಲ ಮಗ ದಿನೇಶ್​ ಕುಮಾರ್​ ಅಷ್ಟೇ ಅಲ್ಲದೆ, ಎರಡನೇ ಪುತ್ರ ನಿತೀಶ್​ ಕುಮಾರ್​ (19) ಕೂಡ ಈ ಪೆಟ್ಟುಮುಡಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಷಣ್ಮುಗನಾಥನ್​ ಅವರಿಗೆ ಮೂವರು ಮಕ್ಕಳು. ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ. ಇವರು ಪೆಟ್ಟುಮುಡಿ ನಿವಾಸಿಗಳಲ್ಲ. ಕೇರಳದ ಗ್ರಾಮೀಣ ಬ್ಯಾಂಕ್​​ನಲ್ಲಿ ಕ್ಯಾಶಿಯರ್​ ಆಗಿರುವ ಇವರ ಕುಟುಂಬ ಮುನ್ನಾರ್​​ನ ಎಂ.ಜಿ. ಕಾಲನಿಯಲ್ಲಿ ವಾಸವಾಗಿದೆ. ಆದರೆ ಆಗಸ್ಟ್​ ನಾಲ್ಕರಂದು ದಿನೇಶ್​ ಹಾಗೂ ನಿತೀಶ್​ ಇಬ್ಬರೂ ಅವರ ಕಸಿನ್​ ಹುಟ್ಟುಹಬ್ಬದ ಪಾರ್ಟಿಗೆಂದು ಅಲ್ಲಿಗೆ ಹೋಗಿದ್ದರು. ಆಗಸ್ಟ್ 6ರಂದು ನಡೆದ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ನಿತೀಶ್​ ಮೃತದೇಹ ಪತ್ತೆಯಾಗಿದ್ದು, ದಿನೇಶ್​ ಶವ ಇನ್ನೂ ಸಿಕ್ಕಿಲ್ಲ. ಅದೇ ಕೊರಗಿನಲ್ಲಿ ಪ್ರತಿದಿನವೂ ಈ ಅಪ್ಪ ಇಲ್ಲಿಗೆ ಬರುತ್ತಿದ್ದಾರೆ.(ಏಜೆನ್ಸೀಸ್)
ಇವರೇ ನೌಕಾಪಡೆಯ ಹೆಲಿಕಾಪ್ಟರ್​ ಚಲಾಯಿಸುವ ದೇಶದ ಮೊದಲ ಮಹಿಳೆಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + six =
Remember me
