ಕೊಚ್ಚಿ: ಲಾಕ್‌ಡೌನ್‌ ಸಮಯದಲ್ಲಿ ಗಂಡ-ಹೆಂಡತಿ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ನೂರೆಂಟು ಜೋಕ್‌ಗಳು ಹರಿದಾಡುತ್ತಿವೆ. ಆದರೆ ಕೊಚ್ಚಿಯ ಮೂವಾಟ್ಟುಪ್ಪುಳದಲ್ಲಿ ನಡೆದದ್ದು ಮಾತ್ರ ಜೋಕ್‌ ಅಲ್ಲ, ಇದು ನೈಜ ಘಟನೆ!
ಗಂಡನಿಗೋ ಮನೆಯಲ್ಲಿ ಕೂತು ಕೂತು ಬೋರಾಗಿದೆ. ಹೊರಗಡೆ ಸುತ್ತಾಡುವಂತಿಲ್ಲ. ಮನೆಯೊಳಕ್ಕೆ ಇರುವಂತೆಯೂ ಇಲ್ಲ. ಆದದ್ದು ಆಗಿ ಹೋಗಲಿ ಎಂದು ಬೈಕ್‌ ತೆಗೆದುಕೊಂಡು ಹೋಗಿಯೇ ಬಿಟ್ಟ. ಒಮ್ಮೆ ಹೋದಾಗ ಪೊಲೀಸರ ಕಣ್ಣಿಗೆ ಕಾಣಿಸಲಿಲ್ಲ. ಈ ಆಸಾಮಿಗೆ ಇನ್ನಷ್ಟು ಧೈರ್ಯ ಬಂತು. ಆದರೆ ಹೊರಗೆ ಕಾರಣವಿಲ್ಲದೇ ಹೋದರೆ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯ. ಆದ್ದರಿಂದ ಆತನಿಗೆ ಸಿಕ್ಕಿದ್ದು ದೂರದಲ್ಲಿರುವ ಅಪ್ಪ- ಅಮ್ಮನನ್ನು ನೋಡಿಕೊಂಡು ಬರುವ ನೆಪ.
ಸರಿ. ದಿನವೂ ಇದೇ ನೆಪ ಇಟ್ಟುಕೊಂಡು ಬೈಕ್‌ ಹಿಡಿದು ಈ ಪತಿರಾಯ ಹೊರಗೆ ಹೋಗತೊಡಗಿದ. ಮನೆಯಲ್ಲಿರುವ ಪತ್ನಿಗೋ ಭಯ. ಗಂಡ ಯಾರ್ಯಾರ ಸಂಪರ್ಕಕ್ಕೆ ಬರುತ್ತಾರೋ, ಎಲ್ಲಿಂದಾದರೂ ಸೋಂಕನ್ನು ಹತ್ತಿಸಿಕೊಂಡು ಬಂದರೆ ಎಂಬ ಭಯದಿಂದ ಗಂಡನಿಗೆ ಬುದ್ಧಿ ಮಾತು ಹೇಳಿದ್ದೂ ಆಯ್ತು. ಅಪ್ಪ- ಅಮ್ಮನನ್ನು ನೋಡಲು ಹೋಗುತ್ತಾರೋ, ಇನ್ನೆಲ್ಲಿಗೆ ಹೋಗುತ್ತಿದ್ದಾರೋ ಎನ್ನುವ ಭಯ ಇನ್ನೊಂದೆಡೆ! ಹೊರಗೆ ಹೋಗಬೇಡಿ ಎಂದು ಪರಿಪರಿಯಾಗಿ ಗಂಡನನ್ನು ಕೇಳಿಕೊಂಡಳು ಹೆಂಡತಿ. ಜಪ್ಪಯ್ಯ ಎಂದರೂ ಪತಿರಾಯ ಹೆಂಡತಿಯ ಮಾತು ಕೇಳಲಿಲ್ಲ.
ಕೊನೆಗೆ ಬೇರೆ ದಾರಿ ಕಾಣದೇ ಪೊಲೀಸರಲ್ಲಿ ದೂರು ದಾಖಲಿಸಿಯೇ ಬಿಟ್ಟಳು. ‘ನನ್ನ ಗಂಡ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಪದೇ ಪದೇ ಬೈಕ್‌ ತೆಗೆದುಕೊಂಡು ಅಪ್ಪ-ಅಮ್ಮನನ್ನು ನೋಡುವ ನೆಪದಲ್ಲಿ ಹೊರಗಡೆ ಹೋಗುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ’ ಎಂದು ದೂರಿನಲ್ಲಿ ದಾಖಲಿಸಿದಳು.
ಖುದ್ದು ಹೆಂಡತಿಯೇ ದೂರು ದಾಖಲು ಮಾಡಿದ್ದನ್ನು ಕಂಡು ಪೊಲೀಸರೂ ಒಂದು ಕ್ಷಣ ದಿಗಿಲಾರದು. ಇದೇನೋ ಕೌಟುಂಬಿಕ ಸಮಸ್ಯೆ ಇರಬೇಕು, ಇಷ್ಟಕ್ಕೆಲ್ಲಾ ಕಂಪ್ಲೇಂಟ್‌ ಯಾಕೆ? ಗಂಡನಿಗೆ ಬುದ್ಧಿ ಹೇಳಿ ಕಳಿಸಿಕೊಡುವೆ. ಕಂಪ್ಲೇಂಟ್‌ ವಾಪಸ್‌ ತೆಗೆದುಕೊಳ್ಳಿ. ಇಲ್ಲೇ ಇಬ್ಬರನ್ನೂ ಕೂರಿಸಿ ಮಾತನಾಡಿದರಾಯಿತು ಎಂದರು. ಪೊಲೀಸರೇ ಹೀಗೆ ಹೇಳಿದರೂ ಹೆಂಡತಿ ಮಾತ್ರ ಅವರ ಮಾತಿಗೆ ಸುತರಾಂ ಒಪ್ಪಲಿಲ್ಲ. ಕಂಪ್ಲೇಂಟ್‌ ದಾಖಲು ಮಾಡಿಕೊಳ್ಳಿ. ಕಾನೂನಿನ ಅನ್ವಯ ಮುಂದೆ ಏನು ಮಾಡಬೇಕೋ ಅದನ್ನು ಮಾಡಿ. ಹೀಗೆ ಮನವೊಲಿಕೆ ಕೆಲಸವೆಲ್ಲಾ ಬೇಡ. ಹೀಗೆ ಸುಮ್ಮನೆ ಬರಿ ಮಾತಿನಿಂದ ಹೇಳಿದರೆ ಕೇಳುವವರಲ್ಲ ಅವರು. ಎಲ್ಲಿಂದಾದರೂ ಸೋಂಕು ಹತ್ತಿಸಿಕೊಂಡು ಬಂದು ನನಗೂ ಸೋಂಕು ತಗುಲಿದರೆ ಎಂಬ ಭಯವಿದೆ’ ಎಂದುಬಿಟ್ಟಳು. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
2-3 ದಿನಗಳ ಹಿಂದಷ್ಟೇ ಇದೇ ರೀತಿ ತನ್ನ ಮಾತು ಕೇಳದೇ ಹೊರಗಡೆ ಸುತ್ತಾಡುತ್ತಿದ್ದ ಅಪ್ಪನ ವಿರುದ್ಧ ಮಗನೊಬ್ಬ ದೂರು ದಾಖಲು ಮಾಡಿದ್ದ. (ಏಜೆನ್ಸೀಸ್)
ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!

ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
