ಥಾಣೆ:ಬದ್ಲಾಪುರದಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ, ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ರಾಡ್ ಬಿದ್ದು, 26 ವರ್ಷದ ಕಾರ್ಮಿಕನ ಮೇಲೆ ಬಿದ್ದಿದ್ದು, ಆತನ ಶರೀರದೊಳಗೆ ಅದು ಹಾದು ಹೋಗಿತ್ತು. ಈಗ ಅವರ ಸ್ಥಿತಿ ಸ್ಥಿರವಾಗಿದೆ. ಕಾರ್ಮಿಕರು ಕಟ್ಟಡವೊಂದರಲ್ಲಿ ಮುಂಬರುವ ಶಾಪಿಂಗ್ ಮಾರ್ಟ್‌ನಲ್ಲಿ ಸಿಸಿಟಿವಿ ಅಳವಡಿಸುತ್ತಿದ್ದಾಗ ಶನಿವಾರ ಈ ಘಟನೆ ನಡೆದಿದೆ. ಕೆಳಗೆ ಬಿದ್ದ ಸಂದರ್ಭ ಅವರು ಮೊಬೈಲ್​ ತಗೆದು ನೋಡಿದ್ದಾರೆ. ಈ ಕ್ಷಣದ ಫೋಟೊ ಎಲ್ಲೆಡೆ ವೈರಲ್​ ಆಗುತ್ತಿದೆ.
ಬದ್ಲಾಪುರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಪಡ್ವಾಲ್, “ಠಾಣೇಕರ್ ಪಲಾಸಿಯೋ ವಸತಿ ಕಾಮಗಾರಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. 26 ವರ್ಷದ ಕಾರ್ಮಿಕ ಸತ್ಯಪ್ರಕಾಶ್ ತಿವಾರಿ ಶನಿವಾರ ಸಂಜೆ 4:30 ರ ಸುಮಾರಿಗೆ ಮಾರ್ಟ್‌ನ ಹೊರಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತಿದ್ದರು. 8ನೇ ಮಹಡಿಯಿಂದ ಕಬ್ಬಿಣದ ರಾಡ್ ಬಿದ್ದು ಆತನನ್ನು ಚುಚ್ಚಿದಾಗ ತಿವಾರಿ ಅವರನ್ನು ತಕ್ಷಣ ದಾರಿಹೋಕರು ಚಿಕಿತ್ಸೆಗಾಗಿ ನಿರ್ಮಲ್ ಆಸ್ಪತ್ರೆಗೆ ಕರೆದೊಯ್ದರು. ತಿವಾರಿ ಅವರ ಸ್ಥಿತಿ ಈಗ ಸ್ಥಿರವಾಗಿದೆ” ಎಂದು ಹೇಳಿದರು.
ಇದನ್ನೂ  ಓದಿ:ಪಿಯುಸಿ ಪರೀಕ್ಷೆ ಬೆನ್ನಿಗೇ ಮೂವರು ವಿದ್ಯಾರ್ಥಿಗಳ ಮರಣ; ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು
ಈ ಬಗ್ಗೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಪ್ರಕರಣ ದಾಖಲಾದ ನಂತರ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಪಡ್ವಾಲ್ ತಿಳಿಸಿದ್ದಾರೆ. ಠಾಣೇಕರ್ ಪಲಾಸಿಯೋ ಹೌಸಿಂಗ್ ಪ್ರಾಜೆಕ್ಟ್ ಡೆವಲಪರ್ ಅಜಯ್ ಠಾಣೇಕರ್ ಈ ಕುರಿತಾಗಿ ಏನನ್ನೂ ಹೇಲಳಿಲ್ಲ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
