ಜೋಧ್​ಪುರ:ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ತನ್ನ ಭಾವಿ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ ನಂತರ ಮದುವೆ ಬೇಡ ಎಂದು ಸಂಬಂಧ ಮುರಿದಿರುವ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ. ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಯುವತಿ, ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಇದನ್ನೂ ಓದಿ:‘ಆತ್ಮನಿರ್ಭರ ಭಾರತ ನನ್ನ ಯೋಜನೆ, ಅದನ್ನೇ ಬಿಜೆಪಿ ಕದ್ದಿದೆ, 2023ಕ್ಕೆ ಕರ್ನಾಟಕವನ್ನು ಜೆಡಿಎಸ್​ ರಾಜ್ಯ ಮಾಡ್ತೇನೆ’
ಜೋಧ್​ಪುರದ ಯುವತಿ ಮತ್ತು ಯುವಕನಿಗೆ ಕಳೆದ ವರ್ಷವೇ ನಿಶ್ಚಿತಾರ್ಥವಾಗಿತ್ತಂತೆ. ಆದರೆ ಲಾಕ್​ಡೌನ್​ ಕಾರಣದಿಂದಾಗಿ ಮದುವೆ ತಡವಾಗಿದೆ. ಈ ಮಧ್ಯೆ ಯುವಕ ನವೆಂಬರ್​ 29ರಂದು ಯುವತಿಯನ್ನು ರೆಸಾರ್ಟ್​ ಒಂದಕ್ಕೆ ಕರೆದಿದ್ದಾನೆ. ಅಲ್ಲಿ ಆಕೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅದಾದ ನಂತರ ಯುವತಿಯಿಂದ ದೂರಾಗಲು ಆರಂಭಿಸಿದ್ದಾನೆ.
ಇದನ್ನೂ ಓದಿ:ಹಾರಾಟ ನಡೆಸಿದ ತಕ್ಷಣ ನಾಪತ್ತೆಯಾಗಿತ್ತು ವಿಮಾನ- ಇಂದು ಸಿಕ್ಕಿವೆ ಪೀಸ್​ ಪೀಸ್​ ದೇಹ!
ಯುವತಿ ಮತ್ತು ಯುವಕನ ಕುಟುಂಬ ಕುಳಿತು ಚರ್ಚೆ ನಡೆಸಿದ್ದಾರೆ. ಆದರೆ ಮದುವೆಯಾಗುವುದಿಲ್ಲ ಎಂದು ಯುವಕ ಹಠ ಹಿಡಿದು ಕುಳಿತಿದ್ದಾನೆ. ಯುವತಿಯೊಂದಿಗಿದ್ದ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿಕೊಂಡಿದ್ದಾನೆ. ಈ ನೋವು ತಾಳಲಾರದ ಯುವತಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಯುವಕ ನನಗೆ ಮೋಸ ಮಾಡಿದ್ದಾನೆ, ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)
ಬೇಡ ಎಂದು ಎಸೆದಿದ್ದ ಮೊಬೈಲ್​ ಕವರ್​ಗೆ​ ಸಿಕ್ತು 1.19 ಕೋಟಿ ರೂಪಾಯಿ!

ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
