ಭುವನೇಶ್ವರ್​:ವ್ಯಕ್ತಿಯೊಬ್ಬತನ್ನ ಪತ್ನಿ (Wife)ಯನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿರುವ ಆತಂಕಕಾರಿ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನು (Man sells wife) ಮಾರಾಟ ಮಾಡಿದ ಬಳಿಕ ಬಲವಂತವಾಗಿ ಮದುವೆಯನ್ನೂ ಮಾಡಿಸಿದ್ದಾನೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಖೀರಾ ಬೆರುಕ್ ಎಂಬಾತ ತನ್ನ ಪತ್ನಿ ಪೂರ್ಣಿಮಾ ಭೋಯ್ ಜೊತೆ ಕೆಲಸಕ್ಕೆಂದು ಅಕ್ಟೋಬರ್ 30 ರಂದು ದೆಹಲಿಗೆ ಹೊರಟನು. ದೆಹಲಿಗೆ ಹೋದ ಎರಡೇ ದಿನದಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಆರೋಪಿ ಬೆರುಕ್​ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಭಾರಿ ಮೊತ್ತದ ಹಣ ಪಡೆದ ಬಳಿಕ ಪತ್ನಿಯನ್ನು ಆತನೊಂದಿಗೆ ಮದುವೆ ಸಹ ಮಾಡಿಸಿದ್ದಾನೆ.
ನವೆಂಬರ್​ 5ರಂದು ತನ್ನ ತಂದೆ ಕುಲಮಣಿ ಭೋಯ್​ಗೆ ಕರೆ ಮಾಡಿದ ಪೂರ್ಣಿಮಾ ಭೋಯ್, ತನ್ನ ಗಂಡನ ಕೃತ್ಯವನ್ನು ಹೇಳಿದ್ದಾಳೆ. ಮಗಳ ಕಷ್ಟ ಕೇಳಿದ ತಂದೆ ತಕ್ಷಣ ಬೆರುಕ್​ ವಿರುದ್ಧ ನಾರ್ಲಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಾರ್ಲಾ ಪೊಲೀಸರು ಬೆರುಕ್​ನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.(ಏಜೆನ್ಸೀಸ್​)
ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಬೈಕ್​ ಸವಾರ ಅರ್ಧ ದಿನ ಅಲ್ಲಿಯೇ ಕುಳಿತು ಪ್ರತಿಭಟನೆ: ಮನವೊಲಿಸಲು ಪೊಲೀಸರ ಪರದಾಟ

ಐಪಿಎಲ್​ನಲ್ಲಿ ಆಡುತ್ತೀರಾ? ವರದಿಗಾರನ ಪ್ರಶ್ನೆಗೆ ಬಾಬರ್​ ಅಜಾಮ್​ ಕೊಟ್ಟ ಪ್ರತಿಕ್ರಿಯೆ ವೈರಲ್​

‘ಪುಷ್ಪ’ ಚಿತ್ರದ ಮೊದಲ ವಾರ್ಷಿಕೋತ್ಸವಕ್ಕೆ ಚಿತ್ರತಂಡದಿಂದ ಸ್ಪೆಷಲ್​ ಗಿಫ್ಟ್​​ … ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 9 =
Remember me
