ಕೊಚ್ಚಿ:ಸಹೋದರನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಫಾಸ್ಟ್​ ಟ್ರ್ಯಾಕ್​ ಸ್ಪೆಷಲ್​ ಕೋರ್ಟ್​ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.
ಜಾಫರ್​ಖಾನ್​ (48) ಶಿಕ್ಷೆಗೆ ಗುರಿಯಾದ ಆರೋಪಿ. ಈತ ಕೇರಳದ ಕಟ್ಟಕಾಡದ ನಿವಾಸಿ. 10 ವರ್ಷಗಳ ಶಿಕ್ಷೆಯ ಜತೆಗೆ 50 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಒಂದು ವೇಳೆ ದಂಡವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಅದರ ಬದಲಾಗಿ ಹೆಚ್ಚುವರಿ ಐದು ತಿಂಗಳು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಪ್ರಾಸಿಕ್ಯೂಷನ್ ಪರವಾಗಿ ವಕೀಲ ಡಿ.ಆರ್. ಪ್ರಮೋದ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ:ಕೋರ್ಟ್​ನಲ್ಲೇ ಸಾರ್ವಜನಿಕವಾಗಿ ರಾಜೀನಾಮೆ ಘೋಷಿಸಿದ ನ್ಯಾಯಾಧೀಶರು!
ಅಂದಹಾಗೆ ಈ ಘಟನೆ 2015ರಲ್ಲಿ ನಡೆದಿತ್ತು. ಗಂಡನ ಮನೆಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಂಚು ಮಾಡಿ ಆರೋಪಿ ಜಾಫರ್​ ಖಾನ್​ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ತನ್ನ ಸ್ವಂತ ಸಹೋದರನ ಮಡಿಯ ಮೇಲೆಯೇ ಕಾಮುಕ ಕ್ರೌರ್ಯ ಮೆರೆದಿದ್ದ. ಬಳಿಕ ಈ ಸಂಬಂಧ ದೂರು ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿತ್ತು.
ಕಟ್ಟಕ್ಕಾಡ ಇನ್ಸ್‌ಪೆಕ್ಟರ್‌ಗಳಾದ ಟಿ. ಬಿನು ಕುಮಾರ್ ಮತ್ತು ಒಎ ಸುನೀಲ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ 16 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ನಿರಂತರ ವಿಚಾರಣೆ ಬಳಿಕ ಆರೋಪಿಯ ಕೃತ್ಯ ಸಾಬೀತಾಗಿದ್ದು, ಇದೀಗ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದೆ.(ಏಜೆನ್ಸೀಸ್​)
ಅಂಡರ್​ 21 ಸ್ನೂಕರ್ ವಿಶ್ವ ಚಾಂಪಿಯನ್​ ಶಿಪ್​ ಟೂರ್ನಿಯಲ್ಲಿ ಚಿನ್ನ ಗೆದ್ದ ಕೋಲಾರದ ಯುವತಿಗೆ ಅದ್ಧೂರಿ ಸನ್ಮಾನ

ಪೊಲೀಸರಿಂದ ನಾಗರಿಕರಿಗೆ ಬಂದೂಕು ತರಬೇತಿ! ಇಲ್ಲಿದೆ ಟ್ರೇನಿಂಗ್ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + two =
Remember me
