ಅಹಮದಾಬಾದ್:ಬ್ಯಾಂಕ್ ಉದ್ಯೋಗಿಯಾಗಿರುವ ಆತನೊಬ್ಬ ವಿಕೃತಕಾಮಿ.. ಮದುವೆಯಾಗುವ ಭರವಸೆ ನೀಡಿ ನರ್ಸ್​​ ಒಬ್ಬಳ ಮೇಲೆ ಪದೆ ಪದೆ ಅತ್ಯಾಚಾರವೆಸಗಿದ್ದಷ್ಟೇ ಅಲ್ಲದೆ ಹಲವು ಅಪರಾಧವೆಸಗಿದ್ದಾನೆ. ಈ ಕುರಿತು ಆ ನರ್ಸ್ ಸೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಗಾಂಧಿನಗರದ ಸೆಕ್ಟರ್ 26 ರಲ್ಲಿ ವಾಸಿಸುತ್ತಿರುವ ಆರೋಪಿ ಜಯೇಶ್ ರಾವತ್ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿ. 2018ರಲ್ಲಿ ಸಾಮಾಜಿಕ ಮಾಧ್ಯಮವೊಂದರಲ್ಲಿ ಈ ನರ್ಸ್​​​ಗೆ ಸಂಪರ್ಕಕ್ಕೆ ಸಿಕ್ಕ. ಕ್ರಮೇಣ ತೀರ ಬಿಟ್ಟಿರಲಾರದಷ್ಟು ಹತ್ತಿರವಾದಾಗ ಅವರಿಬ್ಬರು ಮದುವೆಯಾಗಲು ನಿರ್ಧರಿಸಿದರು.
ಇದನ್ನೂ ಓದಿ:ದನ ಕಾಯೋ ಕೆಲ್ಸ ಮಾಡುತ್ತಲೇ ಯುಪಿಎಸ್ಸಿ ಪಾಸ್​: ದರ್ಶನ್​ರ ಸ್ಪೂರ್ತಿಯ ಕತೆ ಇದು!
ಅಕ್ಟೋಬರ್ 2018 ರಲ್ಲಿ, ಆಕೆ ರಾವತ್ ನನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಭೇಟಿ ನೀಡಿದ್ದಳು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುವುದಾಗಿ ಹುಸಿ ಭರವಸೆ ಆ ಭೂಪ ಸೋಲಾದಲ್ಲಿ ಸಂಬಂಧಿಯೊಬ್ಬರ ಮನೆಯಲ್ಲಿ ಆಕೆ ಒಬ್ಬಂಟಿಯಾಗಿರುವಾಗ ಅತ್ಯಾಚಾರ ಎಸಗಿದ್ದಾನೆ. ಇಷ್ಟಾಗಿ ರಾಜ್‌ಕೋಟ್‌ಗೆ ಆಕೆ ಹಿಂದಿರುಗಿದ ಮೇಲೆ ಆತ ಮತ್ತೆ ಅಲ್ಲಿ ಅವಳನ್ನು ಭೇಟಿ ಮಾಡಿ ಮದುವೆಯ ಭರವಸೆಯ ಮೇರೆಗೆ ಅತ್ಯಾಚಾರ ಎಸಗಿ ಹಳೆಯ ಚಾಳಿ ಮುಂದುವರಿಸಿದ್ದಾನೆ.
ಅಷ್ಟೇ ಅಲ್ಲದೆ ಆಕೆಯೊಂದಿಗೆ ಅನುರಕ್ತನಾಗುವ ಪ್ರತಿ ಘಳಿಗೆಯನ್ನೂ ವಿಡಿಯೋ ಮಾಡಿದ್ದಾನೆ ಖತರ್ನಾಕ್ ಕಾಮುಕ…ಆಕೆ ಮದುವೆ ವಿಷಯ ಪ್ರಸ್ತಾಪಿಸಿದಾಗ ಪ್ರತಿ ಬಾರಿಯೂ ಆತ ಹಾರಿಕೆ ಉತ್ತರ ಕೊಡುತ್ತ ತಪ್ಪಿಸಿಕೊಳ್ಳುತ್ತಿದ್ದ. 2019 ರ ಮೇ 18 ರಂದು ವಿವಾಹವಾಗಲು ಯೋಜಿಸಿದ್ದರು. ಆದರೆ ಬೇಸಿಗೆ, ಬಿಸಿಲು ಎಂದು ಕುಂಟು ನೆಪವೊಡ್ಡಿ ಆತ ಅದರಿಂದಲೂ ತಪ್ಪಿಸಿಕೊಂಡಿದ್ದ, ಏತನ್ಮದ್ಯೆ 2019 ರ ಅಕ್ಟೋಬರ್‌ನಲ್ಲಿ ಆಕೆ ಗರ್ಭಿಣಿಯಾದಾಗ ಆ ದುರುಳ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದ.
ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾ ಮನೆಗೆ ಹೊಸ ಅತಿಥಿಯ ಆಗಮನ… ನೀವು ಅಂದುಕೊಳ್ಳುತ್ತಿರುವುದಲ್ಲ…
ನಂತರ ಆಕೆಯನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ. ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ ಅವರಿಬ್ಬರ ನಡುವೆ ನಡೆದ ಸೆಕ್ಸ್ ವೀಡಿಯೊವನ್ನು ಎಲ್ಲೆಡೆ ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡಿದ. ಆಕೆ ಆತ್ಮಹತ್ಯೆ ಪತ್ರ ಬರೆಯಲು ಮುಂದಾದಾಗ ಆಕೆಯನ್ನು ತೊರೆದ. ಆತನಿಗೆ ಅವಳೇನಾದರೂ ತೊಂದರೆ ಕೊಟ್ಟರೆ ಆಕೆಯ ಕುಟುಂದವರೆಲ್ಲರನ್ನೂ ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ್ದ.ಇಷ್ಟೆಲ್ಲವನ್ನೂ ಆಕೆ ತನ್ನ ಕುಟುಂಬದವರಿಗೆ ತಿಳಿಸಿದ್ದಾಳೆ. ಪೊಲೀಸರಿಗೆ ದೂರು ನೀಡುವಂತೆ ಅವರೆಲ್ಲ ಆಕೆಗೆ ಒತ್ತಾಯಿಸಿದ್ದರಿಂದ ಆಕೆ ಅತ್ಯಾಚಾರವೆಸಗಿ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂಧು ಆರೋಪಿಸಿ ದೂರು ನೀಡಿದ್ದಾಳೆ.
ಕಂದನ ನೋಡುವ ಮೊದಲೇ ಪೈಲಟ್‌ ದುರ್ಮರಣ: ಸಾವಿನ ಅರಿವಿಲ್ಲದ ತುಂಬುಗರ್ಭಿಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 10 =
Remember me
