ದೆಹಲಿ:ಪ್ರಯಾಣಿಕರಿಗೆ ಗುಣಮಟ್ಟದ ಊಟ ನೀಡುವಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.ಇದನ್ನೂ ಓದಿ:ಕಪಿಲ್​ ದೇವ್​ ಬಳಗದ 1983ರ ವಿಶ್ವವಿಕ್ರಮಕ್ಕೆ 40ರ ಸಂಭ್ರಮಇತ್ತೀಚೆಗೆ, ಉತ್ತರ ಪ್ರದೇಶದ ಪ್ರಯಾಣಿಕನೊಬ್ಬ ತಮ್ಮ ಪ್ರಯಾಣದ ವೇಳೆ ವೆಜ್ ಥಾಲಿಯನ್ನು ಆರ್ಡರ್ ಮಾಡಿದ್ದಾನೆ. ಆದರೆ ಪಾರ್ಸೆಲ್ ತೆರೆದು ನೋಡಿದಾಗ ಪ್ರಯಾಣಿಕ ಶಾಕ್ ಆಗಿದ್ದಾನೆ. ಏಕೆಂದರೆ ಆತ ಆರ್ಡರ್​​ ಮಾಡಿದ ವೆಜ್ ಥಾಲಿಯಲ್ಲಿ ಜಿರಳೆ ಕಂಡು ಬಂದಿದೆ.ಕೂಡಲೇ ಪ್ರಯಾಣಿಕನು ಆ ವೆಜ್​ ಥಾಲಿಯ ಫೋಟೋ ತೆಗೆದು ಟ್ವಿಟ್ಟರ್​​​ನಲ್ಲಿ, ನಾನು ಆರ್ಡರ್​ ಮಾಡಿದ ಊಟದಲ್ಲಿ ಜಿರಳೆ ದೊರೆತಿದೆ. ನನಗೆ ನನ್ನ ಹಣವನ್ನು ಮರುಪಾವತಿಸಿ, ನಿಮ್ಮ ಸರ್ವಿಸ್​ ಅತ್ಯಂತ ಕೆಟ್ಟದ್ದಾಗಿದೆ ಎಂದು ಕೇಟರಿಂಗ್​​ದವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.ಇದನ್ನೂ ಓದಿ:ಬೆಕ್ಕುಗಳಿಗೆ ಆಹಾರ ಹಾಕಿ ಸಾಕುತ್ತಿದ್ದ ಯುವತಿಗೆ ಹಿಗ್ಗಾಮುಗ್ಗಾ ಹೊಡೆದ ನೆರೆಮನೆಯವರು!
ಆದರೆ ಐಆರ್​​ಸಿಟಿಸಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ದೂರನ್ನು ದಾಖಲಿಸಲಾಗಿದೆ. ನಿಮ್ಮ ದೂರು ಸಂಖ್ಯೆಯನ್ನು ಎಸ್​​​ಎಂಎಸ್ ಮೂಲಕ ಕಳುಹಿಸಲಾಗಿದೆ ಎಂದು ಉತ್ತರ ನೀಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eighteen =
Remember me
