ಉತ್ತರಪ್ರದೇಶ:ವ್ಯಕ್ತಿಯೊಬ್ಬರು ಸ್ವೀಟ್​ ಅಂಗಡಿಯಿಂದ ಖರೀದಿ ಮಾಡಿದ್ದ ಸಮೋಸದೊಳಗೆ ಹಲ್ಲಿ ಪತ್ತೆಯಾಗಿದ್ದು, ಇದನ್ನು ಸೇವಿಸಿದ ತಂದೆ-ಮಗಳು ಅಸ್ವಸ್ಥರಾಗಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಉತ್ತರಪ್ರದೇಶದ ಹಾಪುರ್‌ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​: ಫೈನಲ್​ ಪಂದ್ಯ ವೀಕ್ಷಿಸಲಿದ್ದಾರಾ ಪ್ರಧಾನಿ ಮೋದಿ?; ಭಾರತದ ಎದುರಾಳಿ ಯಾರು?
ಈ ದೃಶ್ಯ ನೋಡಿದ ಬಳಿಕ ಸಮೋಸ ಪ್ರಿಯರಲ್ಲಿ ತೀವ್ರ ಆತಂಕ ಎದುರಾಗಿದೆ. ಹಬ್ಬ ಹರಿದಿನಗಳ ಹಿನ್ನೆಲೆ ಮನೆಗೆ ಸಂಬಂಧಿಕರು ಆಗಮಿಸಿದ್ದರಿಂದ ವ್ಯಕ್ತಿಯೊಬ್ಬರು ಅವರಿಗೆ ತಿನ್ನಲು ಸ್ವೀಟ್ ಅಂಗಡಿಯಿಂದ ಸಮೋಸಗಳನ್ನು ಖರೀದಿಸಿ, ತಂದಿದ್ದರು. ಎಲ್ಲರಿಗೂ ಸಮೋಸವನ್ನು ಕೊಟ್ಟು, ತಾವು ತಮ್ಮ ಮಗಳೊಂದಿಗೆ ಸಮೋಸ ಸೇವಿಸಿದ್ದಾರೆ. ಈ ವೇಳೆ ಅದರೊಳಗೆ ಇದ್ದ ಹಲ್ಲಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಸಮೋಸ ಸೇವಿಸಿದ ತಂದೆ-ಮಗಳು ಅಸ್ವಸ್ಥರಾಗಿದ್ದು, ಈ ವಿಚಾರ ಕುರಿತಂತೆ ಕುಟುಂಬದವರು ಅಂಗಡಿ ಮಾಲೀಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ​ ದೂರು ದಾಖಲಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸತ್ತ ಹಲ್ಲಿ ಇರುವ ಸಮೋಸವನ್ನು ವ್ಯಕ್ತಿಯೊಬ್ಬರು ಕ್ಯಾಮರಾಗೆ ತೋರಿಸಿರುವುದು ದೃಶ್ಯದಲ್ಲಿ ನೋಡಬಹುದು,(ಏಜೆನ್ಸೀಸ್).
#ViralVideos: हापुड़ में समोसा खाते समय आलू की जगह छिपकली देख व्यक्ति के उड़ गए होशpic.twitter.com/IhAUcw1vR8
— princy sahu (@princysahujst7)November 16, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
