ಇಂದೋರ್​:ಸಾಕುನಾಯಿಗಳ ವಿಚಾರವಾಗಿ ಶುರುವಾದ ಗಲಾಟೆಯೂ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನ ಕೃಷ್ಣಭಾಗ್​ ಕಾಲೋನಿಯಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಮಲ್​ ಅಚಲಾ(35), ರಾಹುಲ್​ ವರ್ಮಾ(27) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ರಾಜ್​ಪಾಲ್​ ಸಿಂಗ್​ ರಾಜಾವತ್​ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇಂದೋರ್​ನ ಕೃಷ್ಣಭಾಗ್​ ಕಾಲೋನಿಯಲ್ಲಿ ರಾಜ್​ಪಾಲ್​ ಹಾಗೂ ವಿಮಲ್​ ತಮ್ಮ ಸಾಕು ನಾಯಿಯನ್ನು ರಾತ್ರಿ 11 ಘಂಟೆ ಸುಮಾರಿಗೆ ವಾಕಿಂಗ್​ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎರಡು ನಾಯಿಗಳು ಒಂದನ್ನೊಂದು ನೋಡಿ ಬೊಗಳಲು ಶುರು ಮಾಡಿದ್ದು, ಶ್ವಾನಗಳ ಮಾಲೀಕರ ನಡುವೆ ವಾಗ್ವಾದ ಶುರುವಾಗಿದೆ.
VIDEO | Two people were killed and six others injured after a man, identified as a security guard Rajpal Rajawat, fired shots on neighbours following an argument over pet dogs in MP's Indore.(Note: Audio muted due to abusive content)(Source: Third Party)pic.twitter.com/jw8Btu9GVN
ಇದನ್ನೂ ಓದಿ:ಬಿಲ್ಕಿಸ್​ ಬಾನು ಪ್ರಕರಣದ ಆರೋಪಿಗಳನ್ನು ಯಾವ ಆಧಾರದ ಮೇಲೆ ಬಿಡುಗಡೆ ಮಾಡಿದ್ದೀರಾ; ಕೇಂದ್ರ-ಗುಜರಾತ್​ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಚಾಟಿ
ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತಿದ್ದಂತೆ ಸಿಟ್ಟಿಗೆದ್ದ ಆರೋಪಿ ರಾಜ್​ಪಾಲ್​ ತನ್ನ ಮನೆಗೆ ತೆರಳಿ 12 ಬೋರ್​ ರೈಫಲ್​ ಮೂಲಕ ಅಚಲ್​ ಹಾಗೂ ಅವರ ಜೊತೆಗಿದ್ದ ರಾಹುಲ್​ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಗಲಾಟೆ ಬಿಡಿಸಲು ಬಂದವರ ಮೇಲೂ ಆರೋಪಿ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿ ರಾಜ್​ಪಾಲ್​, ಆತನ ಮಗ ಸುಧೀರ್​ ಹಾಗೂ ಅವರ ಸಂಬಂಧಿಕ ಶುಭಂ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ ಆರೋಪಿ ಬಳಿ ಇದ್ದ 12 ಬೋರ್​ ರೈಫಲ್​ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತಪ್ಪಿತಸ್ಥರನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
