ನವದೆಹಲಿ:ಮಾಡಿದ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ. ಅವರವರ ಕರ್ಮ ಫಲವನ್ನು ಅವರೇ ಅನುಭವಿಸಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು. ಇನ್ನು ಕೆಲವರಿಗೆ ತಕ್ಷಣವೇ ಅವರ ಕರ್ಮಫಲ ದೊರೆಯುತ್ತದೆ ಎಂಬ ಹಿರಿಯರ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ವೈರಲ್​ ಆಗಿದೆ.
ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಪಕ್ಷಿಯನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ವ್ಯಕ್ತಿಯೊಬ್ಬ ಮರುಕ್ಷಣವೇ ತನ್ನ ಕರ್ಮದ ಫಲವನ್ನು ಅನುಭವಿಸಿದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
ಇದನ್ನೂ ಓದಿರಿ:ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?
ವಿಡಿಯೋದಲ್ಲಿ ಏನಿದೆ?:ಗ್ರಾಮವೊಂದರ ಮೈದಾನದಲ್ಲಿ ನಿಂತಿರುವ ದೊಡ್ಡ ಮೀಸೆಯುಳ್ಳ ವ್ಯಕ್ತಿಯೊಬ್ಬ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗೆ ಗನ್​ನಿಂದ ಶೂಟ್​ ಮಾಡುತ್ತಾನೆ. ಹಕ್ಕಿಯ ರೆಕ್ಕೆಗೆ ಗುಂಡು ತಾಗುತ್ತದೆ. ಆದರೆ, ಪಕ್ಷಿ ಕೆಳಕ್ಕೆ ಬೀಳದೆ ವ್ಯಕ್ತಿಯ ಕಡೆಗೆ ಧಾವಿಸಿ ಬಂದು ಆತನ ಬಲಭಾಗದ ಕಣ್ಣಿಗೆ ಕುಕ್ಕುತ್ತದೆ. ಬಳಿಕ ತನ್ನ ಕಣ್ಣನ್ನು ಕೈನಿಂದ ಮುಚ್ಚಿಕೊಂಡು ವ್ಯಕ್ತಿ ನೋವಿನಿಂದ ನರಳುವುದನ್ನು ನೋಡಬಹುದಾಗಿದೆ.
Karma 🙏pic.twitter.com/8gk0VuQpgb
— Susanta Nanda (@susantananda3)January 30, 2021

ಇತ್ತ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ವ್ಯಕ್ತಿ ಶೂಟ್​ ಮಾಡಿದವನಿಗೆ ಆದ ಗತಿಯನ್ನು ನೋಡಿ ಗಹಗಹಿಸಿ ನಗುತ್ತಾನೆ. ಈ ವಿಡಿಯೋವನ್ನು ಸುಶಾಂತ್​ ನಂದಾ ಅವರು ಶೇರ್​ ಮಾಡಿಕೊಂಡಿದ್ದು, ಕರ್ಮ ಎಂದು ಅಡಿಬರಹ ನೀಡಿದ್ದಾರೆ.
ಇದನ್ನೂ ಓದಿರಿ:ತಾಯಿಯನ್ನು ಕೊಂದು ಒಲೆಯಲ್ಲೇ ಸುಟ್ಟು ಚಿಕನ್‌ ರೋಸ್ಟ್‌ ಮಾಡಿ ತಿಂದ ಯುವಕ!
ಜನವರಿ 30ರಂದು ವಿಡಿಯೋ ಅಪ್​ಲೋಡ್​ ಮಾಡಲಾಗಿದ್ದು, ಈವರೆಗೆ 68 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಸಿಕ್ಕಾಪಟ್ಟೆ ವೈರಲ್​ ಆಗುತ್ತಿರುವ ವಿಡಿಯೋಗೆ ಸಾಕಷ್ಟು ಕಾಮೆಂಟ್​ಗಳ ಸುರಿಮಳೆ ಬರುತ್ತಿದೆ. ವ್ಯಕ್ತಿಯ ಕರ್ಮಫಲಕ್ಕೆ ತಕ್ಕ ಉದಾಹರಣೆ ಎಂದು ಟ್ವೀಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​)
8 ತಿಂಗಳ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಶರಣು: ಮಗುವಿನ ಜೀವ ಉಳಿದಿದ್ಹೇಗೆ?

ಟ್ರಸ್ಟ್​ಗಾಗಿ ಸಂಗ್ರಹಿಸಿದ ಹಳೇ ಶರ್ಟ್​ನಲ್ಲಿದ್ದ ಪಾಕೆಟ್ ನೋಡಿದ ಕೂಡಲೇ ಮೈಸೂರಿನಿಂದ ಕೇರಳಕ್ಕೆ ದೌಡು!

ವಕೀಲೆಯನ್ನು ವಿವಾಹವಾದ ಕ್ರಿಕೆಟಿಗ ಜೈದೇವ್ ಉನಾದ್ಕತ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
