ಗ್ರೇಟರ್ ನೋಯ್ಡಾ:ತಾನು ಕೊಟ್ಟ ಸಾಲದ ಹಣವನ್ನು ಮರುಪಾವತಿ ಮಾಡು ಎಂದು ಎಷ್ಟು ಬಾರಿ ಹೇಳಿದರು ಕೂಡ ದುಡ್ಡು ವಾಪಾಸ್​ ಮಾಡದ ಸ್ನೇಹಿತನ ವಿರುದ್ಧ ಸಿಡಿದೆದ್ದ ವ್ಯಕ್ತಿಯೊಬ್ಬ ಆತನ ಮೇಲೆ ಏಕಾಏಕಿ ದಾಳಿ ಮಾಡಿ, ತನ್ನ ತೋಳಿಗೆ ಗುಂಡು ಹಾರಿಸಿಕೊಂಡ ಘಟನೆ ಗ್ರೇಟರ್ ನೋಯ್ಡಾದ ಕಾಂತ್ ಮಂಡಿ ಪ್ರದೇಶದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ವಿವಾದ ನಡುವೆ ಗಂಡ ವಿಘ್ನೇಶ್ ಶಿವನ್​​ ಬಗ್ಗೆ ಮನಬಿಚ್ಚಿ ಮಾತನಾಡಿದ ಸೂಪರ್‌ ಸ್ಟಾರ್‌ ನಟಿ ನಯನತಾರಾ!
ಬೆಳಗ್ಗೆ 8.30ರ ಸುಮಾರಿಗೆ ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತ್ ಮಂಡಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಯುವಕನೊಬ್ಬ ತನ್ನ ಸ್ನೇಹಿತ ಸಾಲದ ಹಣ ಹಿಂತಿರುಗಿಸಲಿಲ್ಲ ಎಂದು ಬೇಸತ್ತು ತನ್ನ ತೋಳಿಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟಕ್ಕೂ ಆತ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದನಾ? ಕೊಟ್ಟ ಹಣವೆಷ್ಟು? ಎಂಬುದರ ವಿವರ ಹೀಗಿದೆ.
ತನುಜ್ ನಾಗರ್ ಎಂದು ಗುರುತಿಸಲಾದ ವ್ಯಕ್ತಿ, ಎರಡು ವರ್ಷಗಳ ಹಿಂದೆ ರಿಷಬ್ ಗುಪ್ತಾಗೆ ಎಂಬಾತನಿಗೆ ಸುಮಾರು 15 ಲಕ್ಷ ರೂ. ಸಾಲ ನೀಡಿದ್ದರು. ಸಾಲದ ಮರುಪಾವತಿ ವಿಳಂಬವಾಗುತ್ತಿದೆ, ಕೂಡಲೇ ವಾಪಾಸ್ ಮಾಡು ಎಂದು ತನುಜ್​ ಆರೋಪಿಸಿದ್ದಾರೆ. ನಾಗರ್ ದೂರವಾಣಿ ಕರೆಯ ಮೇರೆಗೆ ಹಣ ಕೊಡಲು ಗುಪ್ತಾ ಮನೆಗೆ ಆಗಮಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:VIDEO | ಮಗಳ ಮದುವೆಯ ನಂತರ ಭಾವುಕರಾಗಿ ಕಣ್ಣೀರು ಒರೆಸಿಕೊಂಡ ಅಮೀರ್; ಐರಾ ಮಾಡಿದ್ದೇನು?
ಇಬ್ಬರು ಮನೆಯೊಳಗೆ ಕುಳಿತು ಮಾತನಾಡುತ್ತಿದ್ದ ವೇಳೆ ಏಕಾಏಕಿ ಗುಪ್ತಾ ಮೇಲೆ ಹಲ್ಲೆಗೈದ ನಾಗರ್​, ತಾನು ತಂದಿದ್ದ ಗನ್​ ತೆಗೆದು ತನ್ನ ತೋಳಿಗೆ ಗುಂಡು ಹಾರಿಸಿಕೊಂಡಿದ್ದಾನೆ. ಈ ಮೂಲಕ ಗುಪ್ತಾ ಮೇಲೆ ಆರೋಪವನ್ನು ಹೊರಿಸಿ, ಆತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ತನುಜ್​ ಮಾಡಿದ ಪ್ಲಾನ್ ಎಂಬುದು ವಿಚಾರಣೆ ಬಳಿಕ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ತನುಜ್ ನಾಗರ್ ಅನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).
BBKS10: ‘ನನಗೆ ಕಾರ್ತಿಕ್ ಆಡುವುದು ಇಷ್ಟವಿಲ್ಲ’; ಪ್ರೀತಿಯ ಗೆಳತನದಲ್ಲಿ ಮೂಡಿತು ಒಡಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 16 =
Remember me
