ನವದೆಹಲಿ:ಮಹಿಳೆಯೊಬ್ಬಳಿಗೆ ಗುಂಡಿಟ್ಟು ಕೊಂದಿರುವ ಘಟನೆ ನೈಋತ್ಯ ದೆಹಲಿಯ ದಾಬ್ರಿ ಏರಿಯಾದಲ್ಲಿ ಗುರುವಾರ ಸಂಜೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೇಣು ಗೋಯೆಲ್​ (42) ಕೊಲೆಯಾದ ಮಹಿಳೆ. ಗುರುವಾರ ರಾತ್ರಿ 8.45ರ ಸುಮಾರಿಗೆ ದಾಬ್ರಿ ಪೊಲೀಸ್​ ಠಾಣೆಗೆ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಸ್ಥಳಕ್ಕೆ ಹೋದಾಗ ರೇಣು ಎಂಬಾಕೆಯನ್ನು ಆಕೆಯ ಮನೆಯಲ್ಲೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ರೇಣು ಗೃಹಿಣಿಯಾಗಿದ್ದು, ಆಕೆ ವೈಶಾಲಿ ಕಾಲನಿಯಲ್ಲಿ ಕುಟುಂಬದ ಜತೆ ನೆಲೆಸಿದ್ದಳು ಎಂದು ಡೆಪ್ಯೂಟಿ ಪೊಲೀಸ್​ ಕಮಿಷನರ್​ (ದ್ವಾರಕ) ಎಂ. ಹರ್ಷವರ್ಧನ್​ ತಿಳಿಸಿದ್ದಾರೆ.
ಇದನ್ನೂ ಓದಿ:ಕೌಟುಂಬಿಕ ಕಲಹದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ
ಬಳಿಕ ಪೊಲೀಸ್​ ತಂಡವನ್ನು ರಚಿಸಿ ಆರೋಪಿಯನ್ನು ಹಿಡಿಯುವ ಪ್ರಯತ್ನ ನಡೆದಿತ್ತು. ಆದರೆ, ಆರೋಪಿಯು ಕೂಡ ತನಗೆ ತಾನೇ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಧನಕ್ಕೆಂದು ಪೊಲೀಸರ ತಂಡ ಆರೋಪಿಯ ಮನೆಗೆ ಹೋದಾಗ ಈ ಘಟನೆ ನಡೆದಿದೆ. ಮಹಡಿಯ ಮೇಲೆ ಪಿಸ್ತೂಲ್​ ಸಿಕ್ಕಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಮೃತ ಆರೋಪಿಯನ್ನು ಆಶಿಶ್​ (25) ಎಂದು ಗುರುತಿಸಲಾಗಿದೆ.
ಇಬ್ಬರು ಸ್ಥಳೀಯ ಜಿಮ್​ನಲ್ಲಿ ಎರಡು ವರ್ಷದ ಹಿಂದೆ ಭೇಟಿಯಾದಾಗ ಇಬ್ಬರು ನಡುವೆ ಸ್ನೇಹ ಬೆಳೆದಿತ್ತು. ಆದರೆ, ರೇಣು ಅವರ ಅತ್ತೆ ಅವರ ಸ್ನೇಹಕ್ಕೆ ಸಮ್ಮತಿಸಿರಲಿಲ್ಲ. ಆಕೆಯ ಗಂಡನಿಗೂ ಇದು ಇಷ್ಟವಿರಲಿಲ್ಲ. ಕೊಲೆಯ ಉದ್ದೇಶವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಮೃತ ಆಶಿಶ್​ ಮನೆಯಲ್ಲೂ ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ಯಾವುದಾದರೂ ಸುಳಿವು ಸಿಗಬಹುದಾ ಅಂತ ಅಕ್ಕಪಕ್ಕದ ಮನೆಯವರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ಆದರೆ, ಜಿಮ್​ನಲ್ಲಿ ಭೇಟಿಯಾಗಿ ಪರಿಚಯವಾದ ವಿಚಾರ ಬಿಟ್ಟು ಈವರೆಗೂ ಕೊಲೆಗೆ ಕಾರಣ ಏನೆಂಬುದು ತಿಳಿಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಗ್ರಂಥಾಲಯ ಸ್ಥಾಪನೆ

ಬಾವಲಿ ಜತೆ ಭಾವನಾತ್ಮಕ ಸಂಬಂಧ: 12 ವರ್ಷಗಳ ಹಿಂದಿನ ಕತೆ ಕೇಳಿದ್ರೆ ಮನಕಲಕುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 11 =
Remember me
