ಜೈಪುರ:ವೆಬ್​ ಸಿರೀಸ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಆಂಗ್ಲ ಭಾಷೆಯ ‘ಮನಿ ಹೈಸ್ಟ್’ ವೀಕ್ಷಿಸಿದ ವ್ಯಕ್ತಿಯೊಬ್ಬ, ಅದರಲ್ಲಿ ಮೂಡಿಬಂದ ಪಾತ್ರವೊಂದರ ಉಡುಗೆಯನ್ನು ತೊಟ್ಟು, ಮಾಡಿದ ಎಡವಟ್ಟಿಗೆ ಇದೀಗ ಪೊಲೀಸರ ಅತಿಥಿಯಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಹೋಮ್​ವರ್ಕ್ ಮಾಡಿಲ್ಲ ಎಂದು ಟೀಚರ್ ಹೊಡೆದ ಏಟಿಗೆ ವಿದ್ಯಾರ್ಥಿಯ ಜೀವವೇ ಹೋಯ್ತು!; ಹೊಡೆದಿದ್ದಾದರೂ ಹೇಗೆ?
‘ಮನಿ ಹೈಸ್ಟ್’​ ಪಾತ್ರಧಾರಿಯಂತೆ ಉಡುಗೆ ತೊಟ್ಟು, ಕಾರಿನ ಮೇಲಿಂದ ಹಣ ಎಸೆದ ವ್ಯಕ್ತಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, 10 ಮತ್ತು 20 ರೂ. ಸೇರಿದಂತೆ ಹಲವು ನೋಟುಗಳನ್ನು ಸುರಿದ ವಿಲಕ್ಷಣ ಘಟನೆಗೆ ಜೈಪುರ ಸಾಕ್ಷಿಯಾಗಿದೆ. ಈ ದೃಶ್ಯ ನೋಡಿದ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ಈ ರೀತಿ ಹುಚ್ಚಾಟ ಪ್ರದರ್ಶಿಸಲು ಕಾರಣವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ರಸ್ತೆಯ ಮಧ್ಯೆ ಕಾರು ನಿಲ್ಲಿಸಿ, ಹಣ ಎಸೆದ ವ್ಯಕ್ತಿ ವಾಹನ ಸಂಚಾರಕ್ಕೆ ತೊಂದರೆ ಮಾಡಿದ್ದಲ್ಲದೇ, ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದ್ದಾನೆ. ಈ ಘಟನೆಯ ವಿಡಿಯೋ ಕ್ಷಣಮಾತ್ರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ:ಬಾಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿಸಲು ಕ್ರಮ
ಜೈಪುರದ ಮಾಳವೀಯ ನಗರದ ಗೌರವ್ ಟವರ್ ಬಳಿ ಈ ಘಟನೆ ನಡೆದಿದೆ ಎಂದು ವರದಿ ಉಲ್ಲೇಖಿಸಿದ್ದು, ವೈರಲ್ ವಿಡಿಯೋ ಬೆನ್ನಲ್ಲೇ ಜವಾಹರ್ ಸರ್ಕಲ್ ಪೊಲೀಸ್ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ ಎಂದು ಪೂರ್ವ ಡಿಸಿಪಿ ಜ್ಞಾನಚಂದ್ ಯಾದವ್ ತಿಳಿಸಿದ್ದಾರೆ.
A 'Money Heist' scene comes to life in Jaipur! 💰
An unidentified individual, dressed as a 'Money Heist' character, made it rain money on the streets. Traffic briefly halted in awe🚗
#MoneyHeistInJaipur#CurrencyShower#Money#MoneyHeist#India#Viral#Jaipurpic.twitter.com/kksO2gskxy
— Free Press Journal (@fpjindia)October 3, 2023

ಬಂಧಿತ ಯುವಕ, ಇದು ಕೇವಲ ಮೋಜಿಗಾಗಿ ಮಾಡಿದೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದದ್ದೇ, ವ್ಯಾಪಕ ವೈರಲ್​ಗೆ ಕಾರಣವಾಗಿದೆ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).
VIDEO | ಗೋಲ್ಡನ್ ಟೆಂಪಲ್​ಗೆ ರಾಹುಲ್​ ಗಾಂಧಿ ಭೇಟಿ; ತರಕಾರಿ ಕತ್ತರಿಸಿ, ಪೂಜೆ ಸಲ್ಲಿಸಿದ ಕಾಂಗ್ರೆಸ್​ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nineteen =
Remember me
