ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋದಲ್ಲಿ ನಡೆದ ಈ ಘಟನೆ ಅನೇಕರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಯುವಕನೊಬ್ಬ ಹಾಸಿಗೆ ಹಾಸಿ ರೈಲಿನೊಳಗೆ ಮಲಗಿದ್ದು ಸೆರೆಯಾಗಿದೆ.
ಇತ್ತಿಚೆಗಷ್ಟೆ ಒಬ್ಬ ಭೂಪ ಸ್ನಾದ ಟವೆಲ್​ ಹಾಕಿ ಮೆಟ್ರೊದಲ್ಲಿ ಓಡಾಡುತ್ತಿದ್ದ ವಿಡಿಯೋ ಕೂಡ ವೈರಲ್​ ಆಗಿತ್ತು. ಇನ್ನೂ ವಿಚಿತ್ರ ಏನೆಂದರೆ ಆ ವಿಡಿಯೋವನ್ನು ಪೋಸ್ಟ್​ ಮಾಡಿದ್ದೂ ಇದೇ ವ್ಯಕ್ತಿ! ಇದೀಗ ಇಂತಹ ವಿಡಿಯೋ ಮೂಲಕ ಜನರ ಗಮನ ಸೆಳೆದು ಸಾಮಾಜಿಕ ಜಾಲತಾಣಗಳಲ್ಲಿ ವಿವ್ಸ್​ ಮತ್ತು ಲೈಕ್ಸ್​ ಹೆಚ್ಚಿಸಿಕೊಳ್ಳಲು ಮಾಡುವುದಾ ಎನ್ನುವ ಅನುಮಾನ ಶುರುವಾಗುತ್ತಿದೆ.
ಮೋಹಿತ್ ಗೌಹರ್ ಎನ್ನುವಾತ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಟ್ರೊ ರೈಲಿನ ಸೀಟಿನ ಮೇಲೆ ದಿಂಬು ಮತ್ತು ಬೆಡ್ ಶೀಟ್ ಹಿಡಿದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈತ ಬೆಡ್ ಶೀಟ್ ಹೊದ್ದು ಸೀಟಿನ ಮೇಲೆ ಮಲಗುತ್ತಾನೆ. ಈ ಘಟನೆ ಬಗ್ಗೆ ಮೆಟ್ರೋದಲ್ಲಿನ ಪ್ರಯಾಣಿಕರ ಪ್ರತಿಕ್ರಿಯೆಗಳನ್ನು ಸೆರೆಹಿಡಿಯಲು ಕ್ಯಾಮರಾವನ್ನು ಮತ್ತಷ್ಟು ಝೂಮ್​ ಮಾಡಲಾಗುತ್ತೆ. ಕೆಲವರು ಆಶ್ಚರ್ಯಚಕಿತರಾಗಿ ಈ ಭುಒನನ್ನು ನೋಡಿದರೆ, ಇತರರು ಸಂಪೂರ್ಣವಾಗಿ ಆಸಕ್ತಿರಹಿತರಾಗಿ ಕಾಣಿಸಿಕೊಂಡರು.
ಈ ವಿಡಿಯೋಗೆ ಇನ್‌ಸ್ಟಾಗ್ರಾಮ್‌ನಲ್ಲಿ 80 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನೂರಾರು ಲೈಕ್​ಗಳು ಮತ್ತು ಕಾಮೆಂಟ್‌ಗಳು ಸಿಕ್ಕಿದ್ದು ಈ ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಜನನರು ವಿವಿಧ ರೀತಿಯಲ್ಲಿ ಕಾಮೆಂಟ್​ ಮಾಡಿದ್ದು “ನೆಕ್ಸ್ಟ್​ ಲೆವೆಲ್​ ಬ್ರೋ” ಎಂದೆಲ್ಲಾ ಬರೆದಿದ್ದಾರೆ.
A post shared by 🇮🇳मोहित गौहर 🇮🇳 (@mohitgauhar)

A post shared by 🇮🇳मोहित गौहर 🇮🇳 (@mohitgauhar)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twenty =
Remember me
