ಮುಂಬೈ:ಆಘಾತಕಾರಿ ಘಟನೆಯೊಂದರಲ್ಲಿ ಪ್ರಿಯಕರ ಚಲಿಸುವ ಆಟೋದಲ್ಲಿ ತನ್ನ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿರುವ ಖೈರಾನಿ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಪಂಚಶೀಲ ಅಶೋಕ್​ ಜಾಮ್ದಾ(30) ಎಂದು ಗುರುತಿಸಲಾಗಿದ್ದು, ಘಟನೆ ನಂತರ ಆರೋಪಿ ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ಧಾನೆ. ಆಟೋದಲ್ಲಿ ಸಂಚರಿಸುವ ವೇಳೆ ಇಬ್ಬರ ನಡುವೆ ವಿಚಾರ ಒಂದಕ್ಕೆ ಶುರುವಾದ ಜಗಳದಿಂದ ಕೊಲೆಯಾಗಿದೆ ಎಂದು ಪ್ರತ್ಯಕ್ಷದರ್ಶಿ ಚಾಲಕ ತಿಳಿಸಿದ್ದಾರೆ.
ಇದನ್ನೂ ಓದಿ:ಚುಚ್ಚುವ ವೇಳೆ ಆದ ಎಡವಟ್ಟು; ಸರಿಪಡಿಸಲು ಹೋಗಿ ಬಲಗಿವಿ ಕಳೆದುಕೊಂಡ ಮಹಿಳೆ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ದತ್ತಾ ನಾಲ್ವಡೆ ಆಟೋದಲ್ಲಿ ಚಲಿಸುವ ವೇಳೆ ಪ್ರೇಮಿಗಳಿಬ್ಬರ ನಡುವೆ ವಿಚಾರ ಒಂದಕ್ಕೆ ಸಣ್ಣದಾಗಿ ಜಗಳ ಅರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪ್ರಿಯಕರ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ್ಧಾನೆ.
ಆರೋಪಿಯಿಂದ ತಪ್ಪಿಸಿಕೊಳ್ಳಲು ಆಕೆ ಆಟೋದಿಂದ ಎಗರಲು ಯತ್ನಿಸಿದಳು. ಆದರೆ, ಅದ್ಉ ಸಾಧ್ಯವಾಗದೆ ಆಕೆ ಮೃತಪಟ್ಟಿದ್ಧಾಳೆ ಎಂದು ಡಿಸಿಪಿ ದತ್ತಾ ನಾಲ್ವಡೆ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
