ಚೆನ್ನೈ :ಗಲ್ಫ್ ದೇಶಗಳಿಂದ ಮರಳುತ್ತಿರುವ ಪ್ರಯಾಣಿಕರು ಚಿನ್ನದ ಕಳ್ಳಸಾಗಣೆ ಮಾಡಿ ಸಿಕ್ಕಿಹಾಕಿಕೊಳ್ಳುವುದು ಕಸ್ಟಮ್ಸ್​ ಅಧಿಕಾರಿಗಳಿಗೆ ಹೊಸ ವಿಷಯವೇನಲ್ಲ. ಆದರೆ ಇಲ್ಲೊಬ್ಬ ಭಾರೀ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ವಿಚಿತ್ರ ಮಾರ್ಗ ಅನುಸರಿಸಿದ್ದಾನೆ. ಚಿನ್ನದ ಪೇಸ್ಟ್​ನ ಬಂಡಲ್​ಗಳನ್ನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ದುಬೈನಿಂದ ಭಾರತಕ್ಕೆ ಪ್ರಯಾಣಿಸಿದ್ದಾನೆ!
ಒಟ್ಟು 948 ಗ್ರಾಂನಷ್ಟು ತೂಕವಿದ್ದ ನಾಲ್ಕು ಬಂಡಲ್​ ಚಿನ್ನದ ಪೇಸ್ಟಅನ್ನು ತನ್ನ ಗುದದ್ವಾರದಲ್ಲಿ ಇಟ್ಟುಕೊಂಡು ತಂದ ವ್ಯಕ್ತಿಯನ್ನು ಚೆನ್ನೈ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈನಿಂದ ಈ ರೀತಿಯಾಗಿ ತಂದ 40.35 ಲಕ್ಷ ರೂ. ಬೆಲೆ ಬಾಳುವ 810 ಗ್ರಾಂನಷ್ಟು 24 ಕ್ಯಾರೆಟ್​ ಚಿನ್ನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ-ಡಿಕೆಶಿಗೆ ರಾಹುಲ್ ಗಾಂಧಿ ಕಿವಿಮಾತು
ಕಸ್ಟಮ್ಸ್​ ನಿಯಮಗಳ ಪ್ರಕಾರ, ಭಾರತೀಯ ನಾಗರೀಕರು ವಿದೇಶಗಳಿಂದ ವಾಪಸಾಗುವಾಗ ಡ್ಯೂಟಿ ಫ್ರೀಯಾಗಿ ತರಬಹುದಾದ ಚಿನ್ನದ ಪ್ರಮಾಣದ ಮೇಲೆ ನಿರ್ಬಂಧವಿದೆ. ಪುರುಷರು 50,000 ರೂ.ಗಳಿಗಿಂತ ಹೆಚ್ಚು ಮೌಲ್ಯ ಹೊಂದಿರದ ಮತ್ತು 20 ಗ್ರಾಂಗಳವರೆಗಿನ ಚಿನ್ನದ ಆಭರಣಗಳನ್ನು ತರಬಹುದಾದರೆ, ಮಹಿಳೆಯರಿಗೆ 1 ಲಕ್ಷ ರೂ.ಗಳೊಳಗಿನ ಮೌಲ್ಯದ 40 ಗ್ರಾಂ ಚಿನ್ನದ ಆಭರಣ ತರುವ ಅವಕಾಶವಿರುತ್ತದೆ.(ಏಜೆನ್ಸೀಸ್)
ಬೆನ್ನು, ಶ್ವಾಸಕೋಶಗಳಿಗೆ ಶಕ್ತಿ ತುಂಬುವ ಉಪಯುಕ್ತ ಆಸನವಿದು!

ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
