ಮುಂಬೈ:ಕೋವಿಡ್​ ಸೋಂಕಿತರು ಸೋಂಕು ತೀವ್ರಗೊಂಡಾಗ ಅಥವಾ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಾಗ ಉಸಿರಾಟದ ಸಮಸ್ಯೆಗೆ ಒಳಗಾಗುತ್ತಾರೆ. ಅಂಥವರಿಗೆ ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ಸಿಲಿಂಡರ್ ಅಗತ್ಯ. ಆದರೆ ಕರೊನಾ ಪ್ರಕರಣಗಳ ಜತೆಗೆ ಇಂಥ ಗಂಭೀರ ಸ್ಥಿತಿಯ ಕೇಸ್​ಗಳೂ ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಎಲ್ಲೆಡೆ ಆಕ್ಸಿಜನ್ ಸಿಲಿಂಡರ್​ಗಳ ಕೊರತೆ ಉಂಟಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸೋಂಕಿತರಿಗೆ ನೆರವಾಗುವ ಸಲುವಾಗಿ ವ್ಯಕ್ತಿಯೊಬ್ಬರು ಪತ್ನಿಯ ಆಭರಣವನ್ನೇ ಮಾರಿದ್ದಾರೆ.
ಮುಂಬೈನ ಮಂಟಪ ಡೆಕೋರೇಟರ್ ಆಗಿರುವ ಪಾಸ್ಕಲ್ ಸಲ್ದಾನ ಸಾಮಾಜಿಕ ಸೇವೆಗಾಗಿ ಇಂಥದ್ದೊಂದು ಕೆಲಸ ಮಾಡಿ ಹಲವರ ಗಮನ ಸೆಳೆದಿದ್ದಷ್ಟೇ ಅಲ್ಲ, ಬಹಳಷ್ಟು ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಪಾಸ್ಕಲ್ ಅವರ ಪತ್ನಿಯ ಎರಡೂ ಕಿಡ್ನಿ ಫೇಲ್ ಆಗಿದ್ದು, ಐದು ವರ್ಷಗಳಿಂದ ಬಳಲುತ್ತಿದ್ದಾರೆ. ಮಾತ್ರವಲ್ಲ ಡಯಾಲಿಸಿಸ್​ನಲ್ಲಿರುವ ಅವರಿಗೆ ಆಗಾಗ ಆಕ್ಸಿಜನ್ ನೀಡುವ ಅಗತ್ಯವೂ ಇದೆ. ಹೀಗೆ ಉಸಿರಾಟದ ಸಮಸ್ಯೆ ಇರುವವರ ಸಂಕಷ್ಟದ ಅರಿವಿರುವ ಪಾಸ್ಕಲ್ ಇಂಥದ್ದೊಂದು ಮಹಾನ್ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕರೊನಾ ಆಘಾತ; ‘ನೆಮ್ಮದಿಯಾಗಿ ನಿದ್ರಿಸಿ’ ಎಂದವರು ಚಿರನಿದ್ರೆಗೆ…
ಏಪ್ರಿಲ್ 18ರಿಂದ ಹೀಗೆ ತೀರಾ ಅಗತ್ಯ ಇರುವವರಿಗೆ ಮನೆಯಲ್ಲಿ ಹೆಚ್ಚುವರಿ ಇರುವ ಆಕ್ಸಿಜನ್ ಸಿಲಿಂಡರ್ ಮೂಲಕ ನೆರವಾಗುತ್ತಿದ್ದೇನೆ. ಕೆಲವೊಮ್ಮೆ ಜನರು ನನ್ನ ಈ ಕೆಲಸಕ್ಕೆ ಹಣ ಕೊಟ್ಟು, ಇನ್ನೊಬ್ಬರಿಗೆ ನೆರವಾಗಿ ಎಂದೂ ಹೇಳಿದ್ದಾರೆ. ಒಂದು ದಿನ ಶಾಲಾ ಶಿಕ್ಷಕಿಯೊಬ್ಬರು ಅವರ ಪತಿಗಾಗಿ ನನ್ನ ಬಳಿ ಆಕ್ಸಿಜನ್ ಸಿಲಿಂಡರ್ ಕೇಳಿದರು. ನಾನು ನನ್ನ ಪತ್ನಿ ಹೇಳಿದ್ದಕ್ಕೆ ಶಿಕ್ಷಕಿಗೆ ನೆರವಾದೆ. ನಂತರ ಪತ್ನಿಯ ಕೋರಿಕೆ ಮೇರೆಗೆ ಅವಳ ಆಭರಣ ಮಾರಿ ಸಿಕ್ಕ 80 ಸಾವಿರ ರೂಪಾಯಿಗಳಿಂದ ಮತ್ತಷ್ಟು ಜನರಿಗೆ ಆಕ್ಸಿಜನ್ ಒದಗಿಸಲು ನೆರವಾಗುತ್ತಿದ್ದೇನೆ ಎಂದಿದ್ದಾರೆ.
ಉದ್ಯೋಗಿಗಳು ಕರೊನಾಕ್ಕೆ ಬಲಿಯಾದರೆ 2 ವರ್ಷದ ಸಂಬಳ ನೀಡಲು ಮುಂದಾಗಿರುವ ಖಾಸಗಿ ಕಂಪನಿ!

ಕರೊನಾ ಸೋಂಕಿತರ ಕಷ್ಟ ನೋಡಿ ಬೈಕನ್ನೇ ಆಂಬುಲೆನ್ಸ್ ಮಾಡಿದ; ಸಂಕಷ್ಟಕ್ಕೆ ಮರುಗಿದ ಇಂಜಿನಿಯರ್​ಗೆ ಖರ್ಚಾಗಿದ್ದು ಗರಿಷ್ಠ 25 ಸಾವಿರ ರೂ.​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
