ದೆಹಲಿ:ಸಿಗರೇಟ್ ಸೇದಬೇಡಿ ಎಂದು ಕೇಳಿದ್ದಕ್ಕೆ ಅಮಲಿನಲ್ಲಿದ್ದ ಯುವಕ, 38 ವರ್ಷದ ವ್ಯಕ್ತಿಯೊಬ್ಬನಿಗೆ ಕತ್ತರಿಯಿಂದ ಹಲವು ಬಾರಿ ಇರಿದಿರುವ ಘಟನೆ ನೈಋತ್ಯ ದೆಹಲಿಯ ಕಿಶನ್‌ಗಢದಲ್ಲಿ ನಡೆದಿದೆ.
ಇದನ್ನೂ ಓದಿ:ರಶ್​ ಇದ್ದ ಬಸ್​​ನಿಂದ ಬಿದ್ದು ಶಾಲಾ ಬಾಲಕಿ ಸಾವು
ಘಟನೆಯಲ್ಲಿ ಅಭಯ್​ ಕುಮಾರ(38) ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಮೋಹಿತ್ ಮಹ್ಲಾವತ್(22) ಎಂಬಾತನೇ ಕತ್ತರಿಯಿಂದ ಇರಿದ ಆರೋಪಿ.ಭಾನುವಾರದಂದು ಮೋಹಿತ್ ಕ್ಷೌರ ಮಾಡಿಸಿಕೊಳ್ಳಲೆಂದು ಅಭಯ್​ನ ಕ್ಷೌರಿಕನ ಅಂಗಡಿಗೆ ಬಂದಿದ್ದ. ಈ ವೇಳೆ ಅಭಯ್ ಕ್ಷೌರ ಮಾಡಲು ಬೇರೆಡೆ ಹೋಗಿದ್ದನು. ಸ್ವಲ್ಪ ಸಮಯದ ನಂತರ ಅಂಗಡಿಗೆ ವಾಪಸ್ಸು ಬಂದು ನೋಡಿದಾಗ ಮೋಹಿತ್​ ಅಂಗಡಿಯಲ್ಲಿ ಧೂಮಪಾನ ಮಾಡುತ್ತಿದ್ದ.
ಈ ವೇಳೆ ಅಭಯ್​, ಮೋಹಿತ್​ನಿಗೆ ಅಂಗಡಿಯಲ್ಲಿ ಸಿಗರೇಟ್​ ಸೇದಬೇಡ, ಹೊರಗಡೆ ಹೋಗಿ ಧೂಮಪಾನ ಮಾಡುವಂತೆ ಹೇಳಿದ್ದ. ಆದರೆ ಅಮಲಿನಲ್ಲಿದ್ದ ಮೋಹಿತ್​ ಈ ಮಾತನ್ನು ತಿರಸ್ಕರಿಸಿದ್ದಾನೆ. ಕೊನೆಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಮೋಹಿತ್ ​ಕತ್ತರಿಯಿಂದ ಅಭಯ್​ಗೆ ಹಲವು ಬಾರಿ ಇರಿದಿದ್ದಾನೆ.
ಕೂಡಲೇ ಕುಮಾರ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಬೀರವಾಗಿ ಗಾಯಗೊಂಡಿದ್ದಾನೆ. ಇನ್ನು, ಈತನ ಹೇಳಿಕೆಯನ್ನು ಆಧರಿಸಿ ಮೋಹಿತ್​ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 16 =
Remember me
