ಕೊಯಮತ್ತೂರು:ಲಾಕ್​ಡೌನ್ ಅವಧಿಯಲ್ಲಿ ವಲಸಿಗರೆಲ್ಲರೂ ಅವರವರ ಊರಿಗೆ ಹಿಂತಿರುಗುವುದಕ್ಕೆ ಏನೇನೋ ಕಸರತ್ತುಗಳನ್ನು ಮಾಡಿದ್ದರು. ಆದರೆ ಈ ಘಟನೆ ಕೊಂಚ ವಿಭಿನ್ನವಾದುದು. ಟೀಶಾಪ್ ಎದುರು ನಿಲ್ಲಿಸಿದ್ದ ಬೈಕ್ ಅನ್ನೇ ಕಳವು ಮಾಡಿದ ಆತ. ಆದರೆ ಆತ ಕಳ್ಳನಲ್ಲ. ಟೀ ಶಾಪ್​ಗಳಲ್ಲಿ ಕೆಲಸ ಮಾಡುತ್ತಿದ್ದವ. ತನ್ನ ಕುಟುಂಬದವರನ್ನು ಊರಿಗೆ ಕರೆದೊಯ್ಯಲು ಬೈಕ್ ಕಳವು ಮಾಡಿದ್ದ! ಬೈಕ್ ಮಾಲೀಕ ಈ ಕಳವು ಪ್ರಕರಣದ ಮಾಹಿತಿ ಬಹಿರಂಗಗೊಳಿಸಿದಾಗ ವಲಸಿಗರ ಸಂಕಷ್ಟ ಮತ್ತೊಮ್ಮೆ ಅಲ್ಲೆಲ್ಲ ಚರ್ಚೆಗೀಡಾಯಿತು.
ಇದನ್ನೂ ಓದಿ:ವೈದ್ಯೆ, ವ್ಯಾಪಾರಿ, ಗರ್ಭಿಣಿಗೆ ಕರೊನಾ | 21 ಸೋಂಕಿತರು ಸೇರ್ಪಡೆ
ಕೊಯಮತ್ತೂರು ಸಮೀಪದ ಸುಲೂರು ಎಂಬಲ್ಲಿನ ಕನ್ನಂಪಾಲಯಂ ಎಂಬಲ್ಲಿ ಮೇ 18ರಂದು ನಡೆದ ಘಟನೆ ಇದು. ಬೈಕ್​ ಮಾಲೀಕ ಸುರೇಶ್ ಕುಮಾರ್​ ಸಣ್ಣ ಲೇಥ್ ವರ್ಕಶಾಪ್​ನ ಮಾಲೀಕ. ಆತ ಬಿಚ್ಚಿಟ್ಟ ವಿವರ ಇದು- ಬಾಕಿ ಕೆಲಸ ಪೂರೈಸುವುದಕ್ಕಾಗಿ ಮೇ 18ರಂದು ಶಾಪ್​ಗೆ ಹೋಗಿದ್ದೆ. ಬೈಕ್​ ಅನ್ನು ಕಟ್ಟಡದ ಹೊರಗೆ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದೆ. ಮಧ್ಯಾಹ್ನ ನಂತರ ಹೊರಗೆ ಬಂದು ನೋಡಿದರೆ ಬೈಕ್ ಇರಲಿಲ್ಲ. ಗಾಬರಿಯಾಗಿ ಸಂಜೆ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದೆ. ಆದರೆ, ಲಾಕ್​ಡೌನ್ ಕರ್ತವ್ಯದ ಕಾರಣ ಪೊಲೀಸರು ದೂರು ಸ್ವೀಕರಿಸಲಿಲ್ಲ. ನಿರಾಸೆಯಿಂದ ಹಿಂದುರಿಗಿದೆ. ದಿಕ್ಕೇ ತೋಚದಂತಾಗಿತ್ತು. ಹತ್ತಿರದ ಅಂಗಡಿಯ ಸಿಸಿಟಿವಿ ದೃಶ್ಯ ಗಮನಿಸಲು ಹೋದೆ. ಅದರಲ್ಲಿ ಬೈಕ್ ಕಳವು ದೃಶ್ಯ ದಾಖಲಾಗಿತ್ತು. ಪರಿಶೀಲಿಸಿದಾಗ ಆತ ಸ್ಥಳೀಯವಾಗಿ ಒಂದೆರಡು ಟೀ ಶಾಪ್​ಗಳಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂಬುದು ಗೊತ್ತಾಯಿತು.
ಇದನ್ನೂ ಓದಿ:ಲಾರಿಗೆ ಸಿಲುಕಿ ಟೋಲ್ ನೌಕರ ಸಾವು
ಆತನ ಹೆಸರು ಪ್ರಶಾಂತ್​. ಕೂಡಲೇ ಆತ ಇದ್ದ ಮನೆ ಬಳಿಗೆ ಹೋದೆ. ಅಲ್ಲಿದ್ದವರು ಆತ ಊರಿಗೆ ಹೋದುದಾಗಿ ತಿಳಿಸಿದರು. ಆತ ತಂಜಾವೂರು ಸಮೀಪದ ಮನ್ನಾಗುಡಿ ನಿವಾಸಿ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನನ್ನ ಬೈಕ್​ನಲ್ಲೇ ಊರಿಗೆ ಕರೆದುಕೊಂಡು ಹೋಗಿದ್ದ. ಅದು ಇಲ್ಲಿಂದ 300 ಕಿ.ಮೀ. ದೂರದ ಊರು. ಇನ್ನೇನು ಮಾಡುವುದು. ಲಾಕ್​ಡೌನ್ ಒಮ್ಮೆ ಮುಗಿಯಲಿ ಎಂದು ಕಾಯುತ್ತಿದೆ.
ಇದನ್ನೂ ಓದಿ:ಬಾಲಿವುಡ್​ ನಟ ಅರ್ಷದ್​ ವಾರ್ಸಿ ಚಾಲಕರಾಗಿ ಕೆಲಸ ಮಾಡಿದ್ದ ಬಿಗ್​ ಬಿ ಪುತ್ರ ಅಭಿಷೇಕ್​ ಬಚ್ಚನ್
ಮೇ 29ರಂದು ನನಗೊಂದು ಅಚ್ಚರಿ, ಶಾಕ್ ಕಾದಿತ್ತು. ಸ್ಥಳೀಯ ಖಾಸಗಿ ಪಾರ್ಸೆಲ್​ ಸರ್ವೀಸ್​ ಕಚೇರಿಯಿಂದ ನನ್ನ ಮೊಬೈಲ್​ಗೆ ಕರೆ ಬಂತು. ಹೋಗಿ ನೋಡಿದರೆ ನನ್ನ ಬೈಕ್ ಅಲ್ಲಿತ್ತು. ಬೈಕ್ ಕಳವು ಮಾಡಿ ಕೊಂಡು ಹೋದ ವ್ಯಕ್ತಿ ಆರ್​ಸಿಯಲ್ಲಿದ್ದ ಅಡ್ರೆಸ್​ ನೋಡಿ ಪಾರ್ಸೆಲ್​ ಮಾಡಿದ್ದ. ಆದಾಗ್ಯೂ, ನಾನು 1,400 ರೂಪಾಯಿ ಹಣ ಪಾರ್ಸೆಲ್ ಸರ್ವೀಸ್​ಗೆ ಪಾವತಿಸಬೇಕಾಗಿ ಬಂತು ಎಂದು ದಿಗಿಲಿನಿಂದ ಮಾಧ್ಯಮ ಪತ್ರಿನಿಧಿಗಳ ಜತೆಗೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
11 ತಿಂಗಳ ಮಗು ಬಕೆಟ್​ಗೆ ಬಿದ್ದು ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
