ಹೈದರಾಬಾದ್:ಮಗಳಿಗೆ ಮತ್ತು ತನಗೆ ಅಳಿಯ ನೀಡುತ್ತಿದ್ದ ಹಿಂಸೆ ತಾಳಲಾರದೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಂದೆಯ ಸಾವನ್ನು ಅರಗಿಸಿಕೊಳ್ಳಲಾಗದೆ ಮಕ್ಕಳಿಬ್ಬರೂ ರೈಲಿಗೆ ತಲೆಯೊಡ್ಡಿ ಸಾವಿಗೀಡಾಗಿದ್ದಾರೆ.ತಮಿಳುನಾಡಿನ ಕಡಪಾ ಜಿಲ್ಲೆಯಲ್ಲಿ ಈ ದುರಂತ ಘಟನೆ ನಡೆದಿದೆ.ಬಾಬು ರೆಡ್ಡಿ (55) ಆತ್ಮಹತ್ಯೆಗೀಡಾದವ. ಮಕ್ಕಳನ್ನು ಶ್ವೇತಾ ಮತ್ತು ಸಾಯಿ ರೆಡ್ಡಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಪಾಕಿಸ್ತಾನದ 11 ಹಿಂದು ನಿರಾಶ್ರಿತರ ಶವಗಳು ಜೋಧ್​ಪುರದಲ್ಲಿ ಪತ್ತೆ; ಓರ್ವ ನರ್ಸ್​ ಮೇಲೆ ತೀವ್ರ ಅನುಮಾನ !
ಕಳೆದ ವರ್ಷ ಬಾಬು ಮಗಳು ಶ್ವೇತಾಳನ್ನು ಸಾಫ್ಟ್​ವೇರ್ ಇಂಜಿನಿಯರ್​​ ಆರ್. ಸುರೇಶ್​ಕುಮಾರ್ ರೆಡ್ಡಿಗೆ ಕೊಟ್ಟು ಮದುವೆ ಮಾಡಿದ್ದ. ಮದುವೆ ನಂತರ ಗಂಡ- ಹೆಂಡತಿ ಇಬ್ಬರ ಮಧ್ಯೆ ಜಗಳ ಶುರುವಾಯಿತು.ಭಿನ್ನಾಭಿಪ್ರಾಯ ತಾರಕಕ್ಕೇರುತ್ತಿದ್ದಂತೆ, ಶ್ವೇತಾ ಪ್ರೊದ್ದಾಪುರದಲ್ಲಿರುವ ತನ್ನ ತವರು ಮನೆಗೆ ಹೋಗಲು ನಿರ್ಧರಿಸಿದ್ದಾಳೆ. ಹೆಂಡತಿಗೆಯೊಂದಿಗೆ ಸುರೇಶನ ಜಗಳ ಮುಂದುವರಿದೇ ಇತ್ತು.ಈ ಕಲಹಕ್ಕೆ ಬೇಸತ್ತ ಶ್ವೇತಾ, ಸಹಿಸಲಾಗದೆ ಪೋಷಕರಿಗೆ ತನ್ನ ಗಂಡ ‘ನೀಡುತ್ತಿರುವ ಹಿಂಸೆಯನ್ನು ಎಳೆಎಳೆಯಾಗಿ ವಿವರಿಸಿದ್ದಾಳೆ. ಮಗಳು ಅನುಭವಿಸುತ್ತಿರುವ ಈ ನೋವನ್ನು ನೋಡಿ ಸಹಿಸಲಾಗದೆ ತಂದೆ ಬಾಬು, ಜೀವನವೇ ಸಾಕೆಂದು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಮುನ್ನ ಸ್ವಂತ ವೀಡಿಯೋ ರೆಕಾರ್ಡ್ ಮಾಡಿದ್ದು, ಅದರಲ್ಲಿ ಆರೋಪಿ ಅಳಿಯನ ಹಿಂಸಾತ್ಮಕ ಕೃತ್ಯವನ್ನು ಬಯಲಿಗೆಳೆದಿದ್ದಾನೆ.
ಇದನ್ನೂ ಓದಿ:ಅಗೌರವ ಹತ್ಯೆ ಮಾಡಿ ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಯತ್ನ; ಪೊಲೀಸರಿಗೆ ಸಿಕ್ಕಿದ್ದಾದರೂ ಏನು?
ಬಾಬು ಅವರ ಮಕ್ಕಳಾದ ಶ್ವೇತಾ ಮತ್ತು ಸಾಯಿ ರೆಡ್ಡಿ ತಮ್ಮ ತಂದೆಯನ್ನು ಈ ಸ್ಥಿತಿಯಲ್ಲಿ ಕಂಡು ಅವರು ಕೂಡ ಸಾವಿಗೆ ಶರಣಾಗಲು ನಿರ್ಧರಿಸಿ ಯೆರ್ರಗುಂಟ್ಲಾದ ಸಮೀಪ ತಿಪ್ಪಲೂರು- ರಾಯುನಿಪೇಟಾ ಬಳಿ ಚಲಿಸುವ ರೈಲಿಗೆ ತಲೆಯೊಡ್ಡಿದರು.ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಮೃತರ ಕುಟುಂಬದವರು ಸುರೇಶನನ್ನು ಶೀಘ್ರದಲ್ಲಿಯೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.
ಕರ್ನಾಟಕದಲ್ಲಿ ಉದ್ಯೋಗ ಬಯಸುವ ಕನ್ನಡೇತರರಿಗಿನ್ನು ಕನ್ನಡ ಭಾಷಾ ಕೌಶಲ ಪರೀಕ್ಷೆ ಕಡ್ಡಾಯ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
