ನವದೆಹಲಿ:ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ರೋಗಿಯೊಬ್ಬರ ಕರುಳಿನಿಂದ ಬರೋಬ್ಬರಿ 39 ನಾಣ್ಯಗಳು ಮತ್ತು 37 ಮ್ಯಾಗ್ನೆಟ್​ಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ಇಂತಹ ವಸ್ತುಗಳನ್ನು 20 ದಿನಗಳಿಂದ ಈತ ಸೇವಿಸುತ್ತಿದ್ದ ಎಂಬ ಅಚ್ಚರಿ ಸಂಗತಿಯನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಕೇರಳದ ಹಳ್ಳಿಯೊಂದರ ಭತ್ತದ ಗದ್ದೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗಿ ಇಂದು ಸ್ಟಾರ್ ಬ್ಯಾಟರ್!
26ರ ಯುವಕ ಕಳೆದ 20 ದಿನಗಳಿಗಿಂತ 39 ನಾಣ್ಯಗಳು ಮತ್ತು 27 ಮ್ಯಾಗ್ನೆಟ್​ಗಳನ್ನು ಸೇವಿಸುತ್ತ ಬಂದಿದ್ದಾನೆ. ಇದು ಕರುಳಿನ ಭಾಗದಲ್ಲಿ ಸಿಲುಕಿದ್ದು, ತೀವ್ರ ವಾಂತಿ ಮತ್ತು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಬಳಿಕವೇ ಈ ಸಂಗತಿ ಹೊರಬಿದ್ದಿದೆ. ಹೊಟ್ಟೆಯ ತುಂಬ ಈ ವಸ್ತುಗಳು ತುಂಬಿದ್ದರಿಂದ ಆತನಿಗೆ ಏನನ್ನೂ ತಿನ್ನಲು ಸಾಧ್ಯವಾಗಿಲ್ಲ ಎಂಬುದನ್ನು ವೈದ್ಯರು ಶಸ್ತ್ರಚಿಕಿತ್ಸೆ ಬಳಿಕ ತಿಳಿಸಿದ್ದಾರೆ.
ಕಳೆದ ಎರಡು-ಮೂರು ವಾರಗಳಿಂದ ಈ ಯುವಕ ನಾಣ್ಯಗಳು ತಿಂದು ಊಟ ಸೇರುತ್ತಿಲ್ಲ ತೀವ್ರ ಹೊಟ್ಟೆನೋವು ಎಂದಾಗ ಕುಟುಂಬಸ್ಥರು ವೈದ್ಯರ ಬಳಿ ಸಹಾಯ ಕೋರಿದ್ದಾರೆ. ಪ್ರಾಥಮಿಕ ಹಂತದಲ್ಲಿ ಪರೀಕ್ಷಿಸಿದ ವೈದ್ಯರು, ಇದು ಸಾಮಾನ್ಯ ಕೇಸ್​ ಅಲ್ಲ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ತಕ್ಷಣವೇ ಹೊಟ್ಟೆಯ ಎಕ್ಸ್​-ರೇ ತೆಗೆದಾಗ ಗೊತ್ತಾಗಿದ್ದೇ ಅವನ ಹೊಟ್ಟೆಯಲ್ಲಿ ನಾಣ್ಯಗಳು ಮತ್ತು ಮ್ಯಾಗ್ನೆಟ್​ಗಳು ಇವೆ ಎಂಬುದು.
ಇದನ್ನೂ ಓದಿ:ಹನುಮ ವಿಹಾರಿ ಆಂಧ್ರ ಕ್ರಿಕೆಟ್ ಟೀಮ್ ತೊರೆಯಲು ಸಿಎಂ ಜಗನ್​ ಕಾರಣ: ತೆಲುಗು ದೇಶಂ ಪಕ್ಷ ನೇರ ಆರೋಪ
ಹೊಟ್ಟೆಯ ಸಿಟಿ ಸ್ಕ್ಯಾನ್ ದೊಡ್ಡ ಪ್ರಮಾಣದ ನಾಣ್ಯಗಳು ಮತ್ತು ಆಯಸ್ಕಾಂತಗಳಿರುವುದನ್ನು ತೋರಿಸಿದೆ. ಇದು ಒಳಗೆ ಯಾವ ಆಹಾರವನ್ನು ಪ್ರವೇಶಿಸಲು ಬಿಟ್ಟಿಲ್ಲ. ಈ ಸಂಗತಿ ಅರಿತ ಬೆನ್ನಲ್ಲೇ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ ನಾಣ್ಯಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಅಷ್ಟು ಮ್ಯಾಗ್ನೆಟ್ ಮತ್ತು ನಾಣ್ಯಗಳು ಸಣ್ಣ ಕರುಳಿನಲ್ಲಿ ಎರಡು ವಿಭಿನ್ನ ಕುಣಿಕೆಗಳಿಂದ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ವೈದ್ಯರು ಆತನ ಹೊಟ್ಟೆಯಿಂದ 39 ನಾಣ್ಯಗಳು (1, 2, 5 ರೂ. ನಾಣ್ಯಗಳು) ಮತ್ತು ವಿವಿಧ ಆಕಾರದ 37 ಮ್ಯಾಗ್ನೆಟ್​ ಹೊರತೆಗೆದಿದ್ದಾರೆ. ವೈದ್ಯರ ಪ್ರಕಾರ, ಯುವಕ ಇಂತಹ ಗಟ್ಟಿ ವಸ್ತುಗಳನ್ನು ನುಂಗಲು ಕಾರಣ ಜಿಂಕ್ ಅಂಶಕ್ಕಾಗಿ. ಹೌದು, ಜಿಂಕ್ ಅಂಶ ನಮ್ಮ ದೇಹಕ್ಕೆ ಲಭಿಸಿದರೆ, ಉತ್ತಮ ಮೈಕಟ್ಟು ಹೊಂದಬಹುದು, ಬಾಡಿ ಬೆಳೆಸಬಹುದು ಎಂಬುದು ಅವನ ನಂಬಿಕೆಯಾಗಿತ್ತು. ನಾಣ್ಯಗಳು ಜಿಂಕ್​ನಿಂದ ಮಾಡಲ್ಪಟ್ಟ ಕಾರಣ, ಆತ ಕಾಯಿನ್​, ಮ್ಯಾಗ್ನೆಟ್​ಗಳನ್ನು ನುಂಗಿದ್ದಾನೆ ಎಂದು ಹೇಳಿದರು.
ಇದನ್ನೂ ಓದಿ:ಜೆಡಿಎಸ್ ನವರಿಗೆ ಆತ್ಮವೇ ಇಲ್ಲ, ಸಾಕ್ಷಿ ಎಲ್ಲಿಂದ ಬಂತು ?; ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಸದ್ಯ ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಡಿಸ್ಚಾರ್ಜ್ ಆಗಿರುವ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಯುವಕನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದ್ದು, ಈ ಹಿಂದೆ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ,(ಏಜೆನ್ಸೀಸ್).
IPL 2024: ಈ ಸ್ಟಾರ್​ ಆಟಗಾರ ಇಲ್ಲದಿದ್ದರೆ ಐಪಿಎಲ್ ನೋಡಲು ಬಲುಕಷ್ಟ ಅಂತಿದ್ದಾರೆ ಫ್ಯಾನ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
