ತೆಲಂಗಾಣ:ಹಿರಿಯ ಸಹೋದರನ ಪತ್ನಿಯೊಂದಿಗೆ ತಾನು ಯಾವುದೇ ರೀತಿಯ ಅಕ್ರಮ ಸಂಬಂಧ ಹೊಂದಿಲ್ಲ ಎಂಬುದನ್ನು ನಿರೂಪಿಸಲು ವ್ಯಕ್ತಿಯೊಬ್ಬ ಅಗ್ನಿ ಪರೀಕ್ಷೆ ಎದುರಿಸಿದ್ದಾನೆ. ತೆಲಂಗಾಣದ ವ್ಯಕ್ತಿಯೊಬ್ಬ ನನ್ನ ಪತ್ನಿಯೊಂದಿಗೆ ತಮ್ಮ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದ. ಈ ಬಗ್ಗೆ ಗ್ರಾಮ ಪಂಚಾಯತ್​ಗೆ ದೂರು ನೀಡಿದ್ದಾನೆ. ಬಳಿಕ ಗ್ರಾಮದ ಮುಖಂಡರು ಸಭೆ ಕರೆದು ದೂರನ್ನುಆಲಿಸಿದ್ದಾರೆ.
ಆರೋಪ – ಪ್ರತ್ಯಾರೋಪಗಳನ್ನು ಆಲಿಸಿದ ಗ್ರಾಮ ಪಂಚಾಯತ್ ಮುಖಂಡರು, ಅಕ್ರಮ ಸಂಬಂಧ ಇಲ್ಲ ಎಂಬುದನ್ನು ನಿರೂಪಿಸಲು ಕೆಂಡದ ಮೇಲೆ ಇಟ್ಟ ಕಾದ ಕಬ್ಬಿಣವನ್ನು ಕೈಗೆತ್ತಿಕೊಂಡು, ಕೆಂಡದ ಮೇಲೆ ನಡೆಯಬೇಕು ಎಂದು ಸೂಚನೆ ನೀಡಿದ್ದಾರೆ. ಅದರಂತೆ ಆರೋಪಿ ಸ್ಥಾನದಲ್ಲಿದ್ದ ವ್ಯಕ್ತಿ ಮುಖಂಡರು ಸೂಚಿಸಿದಂತೆ ನಡೆದುಕೊಂಡಿದ್ದಾನೆ.
Agnipareeksha!In a modern day version of Ramayana, a husband was made to jump into firein Mulugu#Telanganato prove his fidelity. Gangadhar was even made to remove a red hot spade from the fire to prove his innocence. Interestingly, it wasn’t his wife who suspected him.Cont:pic.twitter.com/zPSdKN1k82— Revathi (@revathitweets)March 1, 2023
Agnipareeksha!In a modern day version of Ramayana, a husband was made to jump into firein Mulugu#Telanganato prove his fidelity. Gangadhar was even made to remove a red hot spade from the fire to prove his innocence. Interestingly, it wasn’t his wife who suspected him.Cont:pic.twitter.com/zPSdKN1k82
ಆಧುನಿಕ ಕಾಲಘಟ್ಟದಲ್ಲಿ ಈ ಘಟನೆ ನಡೆದಿರುವುದು ತೆಲಂಗಾಣದ ಬಂಜಾಪುಪಲ್ಲಿ ಎಂಬಲ್ಲಿ. ಸದ್ಯ ಆರೋಪಿತ ವ್ಯಕ್ತಿ ಕಾದ ಕಬ್ಬಿಣವನ್ನು ಕೈಗೆತ್ತಿಕೊಂಡು ನಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ಘಟನೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ.
ಆರೋಪಿತ ವ್ಯಕ್ತಿ ಸೂಚನೆಯನ್ನು ಕೈಗೊಂಡ ನಂತರವೂ ಶಿಕ್ಷೆ ನೀಡಿದ್ದ ಗ್ರಾಮ ಪಂಚಾಯತ್ ಮುಖಂತರು ಸಂತೃಪ್ತರಾಗಿಲ್ಲ. ಹೀಗಾಗಿ ಸಹೋದರಿಬ್ಬರು ಮಾತುಕಥೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಿ ಎಂದು ತಾಕೀತು ಮಾಡಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)
ಇದನ್ನೂ ಓದಿ:Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
